For Quick Alerts
  ALLOW NOTIFICATIONS  
  For Daily Alerts

  ಏಕಕಾಲಕ್ಕೆ ಮೂರು ಭಾಷೆಗೆ ಲಗ್ಗೆ ಇಟ್ಟ ಪ್ರಜ್ವಲ್ ದೇವರಾಜ್ 'ಮಾಫಿಯಾ': ತಾರೆಯರಿಂದ ಟೀಸರ್ ರಿಲೀಸ್

  |

  ಪ್ರಜ್ವಲ್ ದೇವರಾಜ್ ಅಭಿನಯದ ಸಿನಿಮಾ ಇದೇ ಮೊದಲ ಬಾರಿಗೆ ಮೂರು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಸಿನಿಮಾ ಸೆಟ್ಟೇರಿರುವ ದಿನದಿಂದಲೂ ಡೈನಾಮಿಕ್ ಪ್ರಿನ್ಸ್ ಸಿನಿಮಾ ಇದೇ ಕಾರಣಕ್ಕೆ ಸದ್ದು ಮಾಡುತ್ತಿತ್ತು. ಈಗ ಸಿನಿಮಾ ಶೂಟಿಂಗ್ ಭರ್ಜರಿಯಾಗಿ ನಡೆಯುತ್ತಿದೆ. ಈ ಮಧ್ಯೆ ಮೂರು ಭಾಷೆಗಳಲ್ಲೂ ಒಂದು ಟೀಸರ್ ಬಿಡುಗಡೆ ಮಾಡಿ, ಸಿನಿಮಾ ಝಲಕ್ ತೋರಿಸಿದೆ ಚಿತ್ರತಂಡ.

  ಪ್ರಜ್ವಲ್ ದೇವರಾಜ್ ಅಭಿನಯದ ಈ ಸಿನಿಮಾ ಮೂರು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡಲು ಚಿತ್ರತಂಡ ಯತ್ನಿಸುತ್ತಿದೆ. ಇದೇ ಕಾರಣಕ್ಕಾಗಿಯೇ 'ಮಾಫಿಯಾ' ಟೀಸರ್ ಅನ್ನೂ ಕನ್ನಡ, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡಿದೆ. ಮೂರು ಚಿತ್ರರಂಗದ ತಾರೆಯರು 'ಮಾಫಿಯಾ' ಟೀಸರ್‌ ಅನ್ನು ಬಿಡುಗಡೆ ಮಾಡಿ ಪ್ರಜ್ವಲ್ ದೇವರಾಜ್‌ಗೆ ಶುಭ ಹಾರೈಸಿದ್ದಾರೆ.

  ಮಾಫಿಯಾ ಟೀಸರ್ ಬಿಡುಗಡೆ ಮಾಡಿದ 3 ಭಾಷೆಯ ತಾರೆಯರು

  'ಮಾಫಿಯಾ' ಸಿನಿಮಾ ಕನ್ನಡ, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ‌. ಈ ಕಾರಣಕ್ಕಾಗಿಯೇ ಈ ಸಿನಿಮಾದ ಟೀಸರ್ ಅನ್ನು ಕೂಡ ಒಂದೇ ಸಮಯದಲ್ಲಿ ಮೂರು ಭಾಷೆಗಳಲ್ಲಿಯೂ ಬಿಡುಗಡೆ ಮಾಡಲಾಗಿದೆ. ಕನ್ನಡದ ಟೀಸರ್ ಅನ್ನು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ಸತೀಶ್ ನೀನಾಸಂ ಹಾಗೂ ರಿಷಬ್ ಶೆಟ್ಟಿ ಬಿಡುಗಡೆ ಮಾಡಿದ್ದಾರೆ. ತೆಲುಗು ಟೀಸರ್ ಅನ್ನು ಸುಧೀರ್ ಬಾಬು ಮತ್ತು ರಾಜಶೇಖರ್ ರಿಲೀಸ್ ಮಾಡಿದ್ದಾರೆ. ಹಾಗೇ ತಮಿಳಿನಲ್ಲಿ ಸತ್ಯರಾಜ್, ವೆಂಕಟ್ ಪ್ರಭು, ಪಾರ್ಥಿಬನ್ ಹಾಗೂ ನಿರ್ದೇಶಕ ಶಿಶೀಂದ್ರನ್ 'ಮಾಫಿಯಾ' ಟೀಸರ್ ರಿಲೀಸ್ ಮಾಡಿದ್ದಾರೆ.

  'ಮಾಫಿಯಾ' ಸಿನಿಮಾವನ್ನು ಕುಮಾರ್ ಬಿ ನಿರ್ಮಾಣ ಮಾಡುತ್ತಿದ್ದರೆ. ಮಾಫಿಯಾ ಸಿನಿಮಾವನ್ನು ಲೋಹಿತ್ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ರಿಲೀಸ್ ಟೀಸರ್‌ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಈ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ಜೊತೆ ಅದಿತಿ ಪ್ರಭುದೇವ ನಾಯಕಿಯಾಗಿ ನಟಿಸುತ್ತಿದ್ದಾರೆ.

  Prajwal Devaraj Starrer Mafia Movie Teaser Released in Kannada Deluge and Tamil at a Time

  ಒಂದೇ ಸಿನಿಮಾದಲ್ಲಿ ದೇವರಾಜ್ ಹಾಗೂ ಪ್ರಜ್ವಲ್

  ಬಹಳ ದಿನಗಳ ಬಳಿಕ ದೇವರಾಜ್ ಹಾಗೂ ಪ್ರಜ್ವಲ್ ಇಬ್ಬರೂ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಪ್ರಜ್ವಲ್ ಹಾಗೂ ದೇವರಾಜ್ ಇಬ್ಬರೂ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇವರೊಂದಿಗೆ ಸಾಧುಕೋಕಿಲಾ ಸೇರಿದಂತೆ ಕನ್ನಡ ಕಲಾವಿದರ ತಂಡವೇ ಇದೆ. ತರುಣ್ ಛಾಯಾಗ್ರಹಣ, ಅನೂಪ್ ಸೀಳಿನ್ ಸಂಗೀತ ನಿರ್ದೇಶನವಿದೆ. 'ಮಾಫಿಯಾ' ಚಿತ್ರಕ್ಕೆ ಮಾಸ್ತಿ ಸಂಭಾಷಣೆ ಬರೆಯುತ್ತಿದ್ದಾರೆ.

  ನಟ ಪ್ರಜ್ವಲ್ ದೇವರಾಜ್ 'ಮಾಫಿಯಾ' ಸಿನಿಮಾ ಇನ್ನೂ ಶೂಟಿಂಗ್ ಹಂತದಲ್ಲಿಯೇ ಇದೆ. ಅಷ್ಟರಲ್ಲೇ ಚಿತ್ರದ ಹಾಡುಗಳು ದಾಖಲೆ ಮೊತ್ತದಲ್ಲಿ ಮಾರಾಟ ಆಗಿದ್ಯಂತೆ. ಹೀಗಾಗಿ ಸಿನಿಮಾ ಟೈಟಲ್ ನೋಡಿದರೆ, ಹಾಡುಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇರುವುದಿಲ್ಲವೆಂಬ ನಿರೀಕ್ಷೆಯಿತ್ತು. ಆದರೆ, ಆಡಿಯೋ ದಾಖಲೆ ಮೊತ್ತಕ್ಕೆ ಮಾರಾಟ ಆಗಿದ್ದರಿಂದ ಹಾಡುಗಳ ಬಗ್ಗೆನೂ ಕುತೂಹಲ ದುಪ್ಪಟ್ಟಾಗಿದೆ.

  English summary
  Prajwal devaraj Starrer Mafia Movie teaser released in kannada telugu and tamil at a time. Dhruva Sarja, Ninasam Sathish, Sudheer Babu, Rajashekar, Sathyaraj, Venkat Prabhu and many are released the teaser.
  Wednesday, January 26, 2022, 22:56
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X