»   » ಎರಡು ನಕ್ಷತ್ರಗಳ ಜೊತೆ ಅಂಗಾರಕನ ಆಗಮನ

ಎರಡು ನಕ್ಷತ್ರಗಳ ಜೊತೆ ಅಂಗಾರಕನ ಆಗಮನ

Posted By:
Subscribe to Filmibeat Kannada

ನಕ್ಷತ್ರಗಳು ಮಿಣಮಿಣ ಮಿನುಗುತ್ತವೆ. ಆದರೆ ಗ್ರಹಗಳು ಮಿನುಗುವುದಿಲ್ಲ. ಇದು ಮಿಡ್ಲ್ ಕ್ಲಾಸ್ ವಿದ್ಯಾರ್ಥಿಗಳ ವಿಜ್ಞಾನ ಪಾಠವಾಯ್ತು. ಆದರೆ ಇಲ್ಲಿ ಎರಡು ನಕ್ಷತ್ರಗಳ ಜೊತೆ ಗಾಂಧಿನಗರಕ್ಕೆ 'ಅಂಗಾರಕ'ನ ಆಮನವಾಗಿದೆ. ಇಲ್ಲಿ ನಕ್ಷತ್ರಗಳ ಜೊತೆಗೆ ಅಂಗಾರಕ ಗ್ರಹವೂ ಮಿನುಗಲಿರುವುದು ವಿಶೇಷ. ಇದು ಪ್ರಳಯದ ಸೂಚನೇನಾ?

ಲವರ್ ಬಾಯ್ ಪಾತ್ರಗಳ ಮೂಲಕ ಬಾಕ್ಸ್ ಆಫೀಸಲ್ಲಿ ಇದುವರೆಗೂ ಆರಕ್ಕೇರದ ಮೂರಕ್ಕಿಳಿಯದ ಪ್ರಜ್ವಲ್ ದೇವರಾಜ್ ಈ ಬಾರಿ 'ಅಂಗಾರಕ'ನಾಗಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಪ್ರಣೀತಾ ಹಾಗೂ ಹಾರ್ಧಿಕಾ ಶೆಟ್ಟಿ ಈ ಚಿತ್ರದ ಎರಡು ನಕ್ಷತ್ರಗಳು.

Angarala movie still

ಹಾರ್ಧಿಕಾ ಶೆಟ್ಟಿ ಈಗಾಗಲೆ ಪ್ರಜ್ವಲ್ ಜೊತೆ 'ಗಲಾಟೆ' ಚಿತ್ರದಲ್ಲಿ ಅಭಿನಯಿಸಿದ್ದಾರೆ. ಎಸ್.ಎಸ್.ಎಸ್. ಸ್ಟುಡಿಯೋ ಮೂಲಕ ಟಿ.ಸಿ.ಜಯಸುಧಾ ನಿರ್ಮಿಸುತ್ತಿರುವ ಚಿತ್ರ ಇದಾಗಿದೆ. ಈ ಚಿತ್ರದ ಮುಹೂರ್ತ ಇತ್ತೀಚೆಗೆ ನೆರವೇರಿತು. ಶ್ರೀನಿವಾಸ್ ಕೌಶಿಕ್ ಎಂಬುವವರು ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇದಾಗಿದೆ.

ಅರ್ಜುನ್ ಜನ್ಯಾ ಅವರ ಸಂಗೀತ ಚಿತ್ರಕ್ಕಿದೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ನಿರ್ದೇಶಕರೇ ಹೊತ್ತಿದ್ದಾರೆ. ಛಾಯಾಗ್ರಹಣ ಬಿ.ಎಲ್. ಬಾಬು. ಇಷ್ಟಕ್ಕೂ ಅಂಗಾರಕನ ಕಥೆ ಏನೆಂದರೆ...ಇದೊಂದು ಪಕ್ಕಾ ಆಕ್ಷನ್, ಫ್ಯಾಮಿಲಿ ಎಂಟರ್ ಟೈನರ್ ಎನ್ನುತ್ತಾರೆ ಚಿತ್ರದ ನಿರ್ದೇಶಕರು.

ಒಟ್ಟಾರೆಯಾಗಿ ಮಾಸ್ ಮತ್ತು ಕ್ಲಾಸ್ ಪ್ರೇಕ್ಷಕರಿಗೆ ಇಷ್ಟವಾಗುವಂತೆ ಚಿತ್ರವನ್ನು ತೆರೆಗೆ ತರಲಾಗುತ್ತಿದೆಯಂತೆ. ಪ್ರಜ್ವಲ್ ವೃತ್ತಿಜೀವನದಲ್ಲಿ ಹೊಸ ಬಗೆಯ ಸಿನೆಮಾ ಆಗಲಿದೆ ಎಂಬ ನಿರೀಕ್ಷೆ ಇದೆ. ತಾರಾಬಲ ಕೂಡಿಬಂದು ಗುರುಬಲ, ರಾಹುಕೇತು, ಶುಕ್ರನ ಅನುಗ್ರಹ 'ಅಂಗಾರಕ' ನಿಗಿರಲಿ. (ಒನ್ಇಂಡಿಯಾ ಕನ್ನಡ)

English summary
Prajwal Devaraj's new film Angaraka launched. This time Prajwal paired with two heroines Pranitha and Hardhika Shetty. Angaraka is an action-family entertainer. Srinivas Kaushik is directing the film apart from writing the story, screenplay and dialogues.
Please Wait while comments are loading...