For Quick Alerts
  ALLOW NOTIFICATIONS  
  For Daily Alerts

  'ಸ್ವಾಮಿ ರಾರಾ' ಮೇಲೆ ಪ್ರಜ್ವಲ್ 'ಜಂಬು ಸವಾರಿ'

  By Rajendra
  |

  ತೆಲುಗಿನ ಮತ್ತೊಂದು ರೆಡಿಮೇಡ್ ಸರಕು ಸ್ಯಾಂಡಲ್ ವುಡ್ ಗೆ ಬರುತ್ತಿದೆ. ಈ ಸರಕನ್ನು ಆಂಧ್ರ ಜನ ಈಗಾಗಲೆ ಕಣ್ತುಂಬಿಕೊಂಡಿದ್ದಾರೆ. ಈಗ ಅದನ್ನು ಕನ್ನಡ ಪ್ರೇಕ್ಷಕರ ಮುಂದಿಡುವ ಪ್ರಯತ್ನವನ್ನು ಮಾಡುತ್ತಿದ್ದಾರೆ ವೇಣುಗೋಪಾಲ್.ಕೆ.ಸಿ. ಈ ಹಿಂದೆ ಅವರು 'ಈ ಭೂಮಿ ಆ ಭಾನು' ಚಿತ್ರವನ್ನು ನಿರ್ದೇಶಿಸಿದವರು.

  ಅಂದಹಾಗೆ ಈ ತೆಲುಗಿನ ಕಚ್ಚಾಮಾಲ್ ಹೆಸರು "ಸ್ವಾಮಿ ರಾರಾ". ಈಗ ಇದೇ ಚಿತ್ರಕ್ಕೆ 'ಜಂಬೂ ಸವಾರಿ' ಎಂದು ಹೆಸರಿಡಲಾಗಿದೆ. ಜಂಬೂ ಸವಾರಿ ಮಾಡಲಿರುವವರು ಡೈನಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹಾಗೂ ನಿಕ್ಕಿ. ಸದ್ಯಕ್ಕೆ ಬೆಂಗಳೂರು ಅರಮನೆಯಲ್ಲಿ ಹಾಡಿನ ಚಿತ್ರೀಕರಣ ಭರದಿಂದ ಸಾಗಿದೆ.

  ಈ ಚಿತ್ರಕ್ಕಾಗಿ ಎಸ್.ಎಲ್.ಚಂದ್ರು ಅವರು ಬರೆದಿರುವ 'ತುಸುಮೆಲ್ಲನೆ ಕೊಂಚ ದೂರ ಜೊತೆಯಾಗಿ ಸಾಗುವ ಬಾರಾ' ಎಂಬ ಹಾಡಿನ ಚಿತ್ರೀಕರಣ ಹರಿಕೃಷ್ಣ ನೃತ್ಯ ನಿರ್ದೇಶನದಲ್ಲಿ ನಡೆಯಿತು. ಎಸ್.ಪ್ರೇಮಕುಮಾರ್ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಪ್ರತಾಪ್ ಅವರ ಛಾಯಾಗ್ರಹಣವಿದೆ.

  ಇನ್ನು 'ಸ್ವಾಮಿ ರಾರಾ' ಚಿತ್ರದ ವಿಚಾರಕ್ಕೆ ಬಂದರೆ, ಸುಧೀರ್ ವರ್ಮಾ ಚೊಚ್ಚಲ ನಿರ್ದೇಶನದ ಈ ಚಿತ್ರ ತೆಲುಗು ಬಾಕ್ಸ್ ಆಫೀಸಲ್ಲಿ ದುಡ್ಡನ್ನು ರಾರಾ ಎಂದು ಬರಸೆಳೆದುಕೊಂಡಿತು. ಇನ್ನು ಚಿತ್ರದ ಕಥೆ ಏನೆಂದರೆ ಅದು ತುಂಬಾ ಇಂಟರೆಸ್ಟಿಂಗ್ ಆಗಿದೆ.

  ಅನಂತಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ಚಿನ್ನದ ಗಣೇಶನ ವಿಗ್ರಹವೊಂದು ಕಳುವಾಗುತ್ತದೆ. ಅದರ ಅಂತರಾಷ್ಟ್ರೀಯ ಮಾರುಕಟ್ಟೆ ಬೆಲೆ ಸುಮಾರು ರು. 10 ಕೋಟಿ. ಇದನ್ನು ಹೊತ್ತುಯ್ಯುವಾಗ ಅಪಘಾತವಾಗಿ ಕದ್ದವ ಸಾಯುತ್ತಾನೆ. ಆದರೆ ಈ ಮೂರ್ತಿ ಬಾಲಕನೊಬ್ಬನಿಗೆ ಸಿಗುತ್ತದೆ. ಅವನು ಅದನ್ನು ತನ್ನ ತಂದೆ ಕೊಡುತ್ತಾನೆ.

  ಆತ ಅದನ್ನು ಕೇವಲ ರು.6 ಸಾವಿರಕ್ಕೆ ಅಕ್ಕಸಾಲಿಗೆ ಮಾರುತ್ತಾನೆ. ಅಕ್ಕಸಾಲಿಗ ಅದನ್ನು ಮಂಗಳೂರಿನ ಶ್ರೀಮಂತನೊಬ್ಬನಿಗೆ ರು.37 ಸಾವಿರಕ್ಕೆ ಮಾರುತ್ತಾನೆ, ಆತ ಶಿವಮೊಗ್ಗದ ಮತ್ತೊಬ್ಬ ಶ್ರೀಮಂತನಿಗೆ ರು.1.90 ಲಕ್ಷಕ್ಕೆ ಮಾರುತ್ತಾನೆ. ಕಡೆಗೆ ಅದು ಬಳ್ಳಾರಿ ದಣಿಯ ಕೈಗೆ ಬರುವ ವೇಳೆಗೆ ಅದರ ಬೆಲೆ ರು.5 ಲಕ್ಷಗಳಾಗಿರುತ್ತದೆ.

  ಬಳಿಕ ಅದು ತಮಿಳುನಾಡಿನ ಮಿಲಿಯನೇರ್ ಒಬ್ಬ ರು.20 ಲಕ್ಷಕ್ಕೆ ಕೊಂಡುಕೊಳ್ಳುತ್ತಾನೆ. ಅಲ್ಲಿಂದ ಅದು ಮಧುರೈ ಕೊನೆಗೆ ಹೈದರಾಬಾದಿಗೆ ಬರುವ ವೇಳೆ ಅದರ ಬೆಲೆ 11 ದಶಲಕ್ಷಗಳಾಗಿರುತ್ತದೆ. ಅಲ್ಲಿಂದ ಕಥೆ ನಾಲ್ಕು ಜನರ ಕಡೆಗೆ ತಿರುಗುತ್ತದೆ. ಮುಂದೇನಾಗುತ್ತದೆ ಎಂಬುದೇ ಚಿತ್ರದ ಕಥಾಹಂದರ.

  ಎಚ್.ಪಿ.ಆರ್ ಎಂಟರ್ ಟೈನ್ ಮೆಂಟ್ ಪ್ರೈ ಲಿ ಲಾಂಛನದಲ್ಲಿ ಎ.ಹರಿಪ್ರಸಾದ್ ರಾವ್ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ರಮೇಶ್ ಬಾಬು ಸಂಕಲನ, ಹರಿಕೃಷ್ಣ ನೃತ್ಯ ನಿರ್ದೇಶನ ಹಾಗೂ ಬಾಬುಖಾನ್ ಕಲಾನಿರ್ದೇಶನವಿರುವ ಈ ಚಿತ್ರಕ್ಕೆ ಚಂದ್ರು.ಎಸ್.ಎಲ್ ಸಂಭಾಷಣೆ ಹಾಗೂ ಸಾಹಿತ್ಯ ಬರೆದಿದ್ದಾರೆ. ಪ್ರಜ್ವಲ್, ನಿಕ್ಕಿ, ಶೊಭರಾಜ್, ಅಚ್ಯುತರಾವ್, ಚೈತ್ರಾರೈ, ಮಿತ್ರಾ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. (ಒನ್ಇಂಡಿಯಾ ಕನ್ನಡ)

  English summary
  Dynamic prince Prajwal devraj is back on sets. Currently the actor is busy in completing the song fo the film Jambu Savari. A song is being shot on Prajwal and female lead Nikki. The song is being choreographed by Harikrishna. Jambu Savari is a remake of Telugu hit Swamy Ra Ra. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X