Don't Miss!
- Sports
Asia Cup 2023: ಎಸಿಸಿ ಸಭೆಯಲ್ಲಿ ತೀರ್ಮಾನ: ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಿಂದ ಸ್ಥಳಾಂತರ!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕೇಸರಿ ಬಿಕಿನಿ ವಿವಾದ: "ಪಠಾಣ್' ಬಾಯ್‌ಕಾಟ್ ಮಾಡಿದ್ರೂ, ನಾನು ನೋಡುತ್ತೇನೆ" ಎಂದ ಪ್ರಕಾಶ್ ಬೆಳವಾಡಿ!
ಶಾರುಖ್ ಖಾನ್ ನಾಲ್ಕು ವರ್ಷಗಳ ಬಳಿಕ ಕಮ್‌ಬ್ಯಾಕ್ ಮಾಡುತ್ತಿರುವ ಸಿನಿಮಾ 'ಪಠಾಣ್'. ಇನ್ನೇನು ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ ಅನ್ನುವಾಗಲೇ ಪ್ರಚಾರವನ್ನು ಶುರುಮಾಡಿದೆ. ಒಂದೊಂದೇ ಹಾಡುಗಳನ್ನು ರಿಲೀಸ್ ಮಾಡುತ್ತಿದೆ. ಅದರಲ್ಲೊಂದು ಹಾಡು 'ಬೇಷರಮ್'.
ದೀಪಿಕಾ ಪಡುಕೋಣೆ ಸಖತ್ ಹಾಟ್ ಆಗಿ ಕಾಣಿಸಿಕೊಂಡಿರುವ 'ಬೇಷರಮ್...' ಸಾಂಗ್ ಈಗ ವಿವಾದಕ್ಕೆ ಸಿಕ್ಕಿಕೊಂಡಿದೆ. ಈ ಹಾಡಿನಲ್ಲಿ ಕೇಸರಿ ಬಿಕಿನಿಯಲ್ಲಿ ಕಾಣಿಸಿಕೊಂಡಿರುವುದನ್ನು ಕೆಲವರು ವಿರೋಧಿಸುತ್ತಿದ್ದಾರೆ. ಈ ಕಾರಣಕ್ಕೆ ಸಿನಿಮಾವನ್ನೇ ಬಾಯ್‌ಕಾಟ್ ಮಾಡಬೇಕು ಅನ್ನೋ ಅಭಿಯಾನ ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿದೆ.
'ಪಠಾಣ್'
'ಬಾಯ್‌ಕಾಟ್'
ಒಳಮರ್ಮವೇನು?
ಯಾರಿದ್ದಾರೆ
ಇದರ
ಹಿಂದೆ?
ಇದೇ 'ಪಠಾಣ್' ಸಿನಿಮಾದಲ್ಲಿ ಕನ್ನಡದ ಹಿರಿಯ ನಟ ಪ್ರಕಾಶ್ ಬೆಳವಾಡಿ ಕೂಡ ನಟಿಸಿದ್ದಾರೆ. ಸದ್ಯ ಬಾಯ್‌ಕಾಟ್ ಪಠಾಣ್ ವಿವಾದದ ಬಗ್ಗೆ 'ದ ಫೆಡರಲ್' ಅನ್ನೋ ಯೂಟ್ಯೂಬ್ ಚಾನೆಲ್ ಜೊತೆ ಮುಕ್ತವಾಗಿ ಮಾತಾಡಿದ್ದಾರೆ. ಜನರು ಬಾಯ್‌ಕಾಟ್ ಮಾಡುತ್ತಿದ್ದಾರೆ ಅನ್ನೋದ ಕಾರಣಕ್ಕೆ ಸಿನಿಮಾ ನೋಡುತ್ತೇನೆ ಎಂದು ಹೇಳಿದ್ದಾರೆ. ಅಷ್ಟಕ್ಕೂ ಪ್ರಕಾಶ್ ಬೆಳವಾಡಿ ಹೀಗೆ ಹೇಳಿದ್ಯಾಕೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

'ಈ ಚರ್ಚೆನೇ ಅಸಭ್ಯವಾಗಿದೆ'
'ಪಠಾಣ್' ಸಿನಿಮಾವನ್ನು ಬಾಯ್‌ಕಾಟ್ ಮಾಡಬೇಕು ಅನ್ನೋ ಅಭಿಯಾನ ಸರಿನಾ? ತಪ್ಪಾ? ಅನ್ನೋ ಬಗ್ಗೆನೇ ಚರ್ಚೆಯಾಗುತ್ತಿದೆ. ಕಾನೂನಿ ಪ್ರಕಾರ ಇದು ಸರಿಯಾಗಿದೆಯೇ? ಈ ಚರ್ಚೆ ಮುಖ್ಯವೇ? ಅನ್ನೋದರ ಬಗ್ಗೆ ಪ್ರಕಾಶ್ ಬೆಳವಾಡಿ ಮಾತಾಡಿದ್ದಾರೆ. "ಈಗ ತುಂಬಾನೇ ಬಿಗುವಿನ ವಾತಾವರಣವಿದೆ. ಅಂತಹ ವಿವಾದಗಳು ಆಗುತ್ತಲೇ ಇರುತ್ತವೆ. ನನ್ನ ಪಾಯಿಂಟ್ ಏನಂದ್ರೆ, ಸಿನಿಮಾವನ್ನು ಬಾಯ್‌ಕಾಟ್ ಮಾಡುವುದು ಕಾನೂನಿಗೆ ವಿರುದ್ಧವಾಗಿದೆಯೇ?. ಇಲ್ಲಿ ನಾವು ಕಾನೂನಿನ ಬಗ್ಗೆ ಮಾತಾಡುತ್ತಿಲ್ಲ. ಚರ್ಚೆಯಾಗುತ್ತಿರುವ ವಿಷಯ ಎಷ್ಟು ಸಭ್ಯವಾಗಿದೆ ಅನ್ನೋದನ್ನು ಮಾತಾಡುತ್ತಿದ್ದೇವೆ. ಆದರೆ, ಚರ್ಚೆನೇ ಅಸಭ್ಯವಾಗಿದೆ ಅಷ್ಟೇ. ಪ್ರಗತಿಪರರ ಕಡೆಯಿಂದ ಈ ಬಗ್ಗೆ ಅಸಹಿಷ್ಣುತೆ ಇದೆ." ಎನ್ನುತ್ತಾರೆ.

'ದೀಪಿಕಾ ಒಬ್ಬ ಸ್ಟಾರ್ ನಟಿ'
"ನನ್ನ ಸಮಸ್ಯೆ ಏನು ಅಂದ್ರೆ, ಸಿನಿಮಾದಲ್ಲಿ ಮಾಡುವುದಕ್ಕೆ ತುಂಬಾನೇ ಕೆಲಸವಿದೆ. ಆದರೆ, ಪರಿಸ್ಥಿತಿ ಈಗ ತುಂಬಾನೇ ಕೆಟ್ಟದಾಗಿದೆ. ನೀವೇನು ಹೇಳುತ್ತಿದ್ದೀರಿ ಇದು ದುರಂತ. ದೀಪಿಕಾ ಒಬ್ಬ ಸ್ಟಾರ್ ನಟಿ. ಅವರು ಸಿನಿಮಾದಲ್ಲಿ ತುಂಬಾ ಚೆನ್ನಾಗಿ ಕಾಣಿಸುತ್ತಾರೆ ಅಂತ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಜನರು ಫಸ್ಟ್ ಡೇ ಫಸ್ಟ್ ಶೋ ಅವರನ್ನು ನೋಡುವುದಕ್ಕೆ ಹೋಗುತ್ತಾರೆ ಅಂದ್ರೆ, ಅಲ್ಲೊಂದು ಕಮರ್ಷಿಯಲ್, ಮಾರ್ಕೆಟಿಂಗ್, ಎಂಟರ್‌ಟೈನ್ಮೆಂಟ್ ಅರೇಂಜ್ಮೆಂಟ್ ಮಾಡಿಕೊಂಡಿರುತ್ತಾರೆ. ಇದನ್ನು ಮಾಡುವುದಕ್ಕೆ ಬಿಡಬೇಕು." ಎನ್ನುತ್ತಾರೆ ಪ್ರಕಾಶ್ ಬೆಳವಾಡಿ.

'ನಾನು ಪಠಾಣ್ ಸಿನಿಮಾ ನೋಡುತ್ತೇನೆ'
"ಯಾರಾದರೂ ಇದನ್ನು ಬಾಯ್‌ಕಾಟ್ ಮಾಡಬೇಕು ಅಂತ ಹೇಳಿದರೆ, ದುರಾದೃಷ್ಟವಶಾತ್ ಅದೂ ಕೂಡ ಸರಿನೇ. ಇದೇ ಈಗ ಆಗಿರುವ ಸಮಸ್ಯೆ. ನಾನು ಹೋಗಿ ಸಿನಿಮಾ ನೋಡುತ್ತೇನೆ. ಅವರು ಬಾಯ್‌ಕಾಟ್ ಮಾಡುತ್ತಿದ್ದಾರೆ ಅನ್ನೋ ಕಾರಣಕ್ಕೆ ಹೋಗಿ ನೋಡುತ್ತೇನೆ. ನಾನು ಈ ಸಿನಿಮಾ ನಟನೆ ಮಾಡಿದ್ದರೂ, ಈ ಸಿನಿಮಾವನ್ನು ನೋಡುತ್ತಾ ಇದ್ದೆನೋ ಇಲ್ಲವೋ ಗೊತ್ತಿಲ್ಲ. ಆದರೆ, ನಾನು ಸಿನಿಮಾ ನೋಡುತ್ತೇನೆ." ಎಂದು ಪ್ರಕಾಶ್ ಬೆಳವಾಡಿ ಹೇಳಿದ್ದಾರೆ.

ಭೇಷರಂ ಹಾಡಿಗೆ ಸಖತ್ ವೀವ್ಸ್
ಶಾರುಖ್ ಖಾನ್ ಸಿನಿಮಾ 'ಭೇಷರಂ' ಸಾಂಗ್ ವಿವಾದಕ್ಕೆ ಸಿಲುಕಿಕೊಂಡಿದ್ದರೂ, ಯೂಟ್ಯೂಬ್‌ನಲ್ಲಿಸ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಸಿನಿಮಾದ ಹಾಡು ಬಿಡುಗಡೆಯಾದಲ್ಲಿಂದ ಇಲ್ಲಿವರೆಗೂ ಈ ಹಾಡು ಸುಮಾರು 66 ಮಿಲಿಯನ್ ವೀವ್ಸ್ ಕಂಡಿದೆ. ಈ ಹಾಡಿನ ಬಗ್ಗೆ ಈಗ ವಾದ-ವಿವಾದಗಳು ನಡೆಯುತ್ತಲೇ ಇದೆ. ಕೆಲವರು ಭೇಷರಂ ಹಾಡನ್ನು ಒಪ್ಪಿಕೊಂಡಿದ್ದಾರೆ. ಮತ್ತೆ ಕೆಲವರು ಈ ಹಾಡನ್ನು ವಿರೋಧಿಸಿದ್ದಾರೆ. ಸದ್ಯ ಈ ಹಾಡಲು ಎಲ್ಲಿಗೆ ಹೋಗಿ ಮುಟ್ಟುತ್ತೋ ಕಾಲವೇ ಉತ್ತರಿಸಲಿದೆ.