For Quick Alerts
  ALLOW NOTIFICATIONS  
  For Daily Alerts

  ಕೆಜಿಎಫ್‌ 2: ಅನಂತ್‌ನಾಗ್ ಪಾತ್ರಕ್ಕೆ ಪ್ರಕಾಶ್ ರೈ! ನಿರ್ದೇಶಕ ಪ್ರಶಾಂತ್ ನೀಲ್ ಹೇಳಿದ್ದೇನು?

  |

  ಕೆಜಿಎಫ್ 2 ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ನಟ ಪ್ರಕಾಶ್ ರೈ ಚಿತ್ರೀಕರಣದ ಚಿತ್ರವನ್ನು ಟ್ವೀಟ್ ಮಾಡಿದ್ದೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆಯೇ ಹುಟ್ಟಿಕೊಂಡು ಬಿಟ್ಟಿತ್ತು.

  ಕೆಜಿಎಫ್ ಮೊದಲ ಭಾಗದ ಮುಖ್ಯಪಾತ್ರ ಅನಂತ್‌ನಾಗ್ ಪಾತ್ರವನ್ನು ಪ್ರಕಾಶ್ ರೈ ಮುಂದುವರೆಸುತ್ತಿದ್ದಾರೆ ಎಂದು ದೊಡ್ಡ ಪುಕಾರು ಎದ್ದು, ದೊಡ್ಡ ಮಟ್ಟದ ಚರ್ಚೆಯೇ ಸಾಮಾಜಿಕ ಜಾಲತಾಣದಲ್ಲಿ ನಡೆಯಿತು.

  ಕೆಜಿಎಫ್ ಚಾಪ್ಟರ್-2 ಅನಂತ್ ನಾಗ್ ಜಾಗಕ್ಕೆ ಪ್ರಕಾಶ್ ರಾಜ್ ಎಂಟ್ರಿ! ಏನಿದು ಸರ್ಪ್ರೈಸ್?ಕೆಜಿಎಫ್ ಚಾಪ್ಟರ್-2 ಅನಂತ್ ನಾಗ್ ಜಾಗಕ್ಕೆ ಪ್ರಕಾಶ್ ರಾಜ್ ಎಂಟ್ರಿ! ಏನಿದು ಸರ್ಪ್ರೈಸ್?

  'ಕೆಲವರಂತೂ ಅನಂತ್‌ನಾಗ್ ಸಿನಿಮಾದಲ್ಲಿ ಇಲ್ಲದೇ ಹೋದಲ್ಲಿ ಸಿನಿಮಾದಲ್ಲಿ ನಾವು ನಟಿಸುವುದಿಲ್ಲ' ಎಂದರು. ಇನ್ನು ಕೆಲವರು ಬಾಯ್‌ಕಾಟ್ ಕೆಜಿಎಫ್ ಎಂದರು. ಆದರೆ ಎಲ್ಲದಕ್ಕೂ ನಿರ್ದೇಶಕ ಪ್ರಶಾಂತ್ ನೀಲ್ ಸ್ಪಷ್ಟನೆ ಕೊಟ್ಟಿದ್ದಾರೆ.

  ಅನಂತ್‌ನಾಗ್ ಪಾತ್ರದ ಬದಲಾವಣೆ ಇಲ್ಲ: ಪ್ರಶಾಂತ್ ನೀಲ್

  ಅನಂತ್‌ನಾಗ್ ಪಾತ್ರದ ಬದಲಾವಣೆ ಇಲ್ಲ: ಪ್ರಶಾಂತ್ ನೀಲ್

  ಕೆಜಿಎಫ್ 2 ಪ್ರಶಾಂತ್ ನೀಲ್ ಹೇಳಿರುವ ಪ್ರಕಾರ, ಅನಂತ್‌ನಾಗ್ ಪಾತ್ರವನ್ನು ಬದಲಾಯಿಸಿಲ್ಲ. ಅನಂತ್‌ನಾಗ್ ಪಾತ್ರವನ್ನು ಪ್ರಕಾಶ್‌ ರೈ ಮಾಡುತ್ತಿಲ್ಲ. ಬದಲಿಗೆ ಪ್ರಕಾಶ್ ರೈ ಅವರದ್ದು ಭಿನ್ನವಾದ ಪಾತ್ರ. ಕೆಜಿಎಫ್ 2 ಸಿನಿಮಾದಲ್ಲಿ ಸೇರಿಕೊಳ್ಳುತ್ತಿರುವ ಹೊಸ ಪಾತ್ರ ಎಂದಿದ್ದಾರೆ ಪ್ರಶಾಂತ್ ನೀಲ್.

  ಅನುಮಾನ ಮೂಡಿದ್ದು ಏಕೆ?

  ಅನುಮಾನ ಮೂಡಿದ್ದು ಏಕೆ?

  ಕೆಜಿಎಫ್ ಮೊದಲ ಸಿನಿಮಾದಲ್ಲಿ ಅನಂತ್‌ನಾಗ್, ಮಾಳವಿಕಾ ಗೆ ಕತೆ ಹೇಳುವ ದೃಶ್ಯವನ್ನೇ ನೆನಪಿಸುವಂತಹಾ ಸೆಟ್‌ನಲ್ಲಿ ಅನಂತ್‌ನಾಗ್‌ ರೀತಿಯದ್ದೇ ಗೆಟಪ್‌ನಲ್ಲಿ, ಮಾಳವಿಕ ರನ್ನು ಹೋಲುತ್ತಿರುವ ಮಹಿಳೆಯ ಮುಂದೆ ಕುಳಿತಿರುವ ಚಿತ್ರವನ್ನು ಪ್ರಕಾಶ್ ರೈ ಟ್ವೀಟ್ ಮಾಡಿದ್ದರು. ಹಾಗಾಗಿ ಈ ಅನುಮಾನ ಉದ್ಭವವಾಯಿತು ಅಭಿಮಾನಿಗಳಿಗೆ. ಈಗ ಎಲ್ಲಾ ಸ್ಪಷ್ಟವಾಗಿದೆ.

  25 ದಿನಗಳ ಶೆಡ್ಯೂಲ್‌

  25 ದಿನಗಳ ಶೆಡ್ಯೂಲ್‌

  ಇಂದಿನಿಂದ ಕೆಜಿಎಫ್‌ 2 ಸಿನಿಮಾ ಚಿತ್ರೀಕರಣ ಪುನರ್‌ಪ್ರಾರಂಭವಾಗಿದ್ದು, ಪ್ರಕಾಶ್ ರೈ, ಮಾಳವಿಕಾ ಅವಿನಾಶ್, ನಾಗಾಭರಣ ಇನ್ನೂ ಕೆಲವು ನಟರು ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿ 25 ದಿನಗಳ ಶೆಡ್ಯೂಲ್‌ನಲ್ಲಿ ಚಿತ್ರೀಕರಣ ನಡೆಯಲಿದೆ. ಯಶ್ ಅವರ ದೃಶ್ಯಗಳೂ ಇದ್ದು ಕೆಲವೇ ದಿನಗಳಲ್ಲಿ ಯಶ್ ಸಹ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ.

  ಸಂಜಯ್ ದತ್ ಪಾತ್ರದ ಚಿತ್ರೀಕರಣ ಬಾಕಿ ಇದೆ

  ಸಂಜಯ್ ದತ್ ಪಾತ್ರದ ಚಿತ್ರೀಕರಣ ಬಾಕಿ ಇದೆ

  ಇನ್ನು ರವೀನಾ ಟಂಡನ್, ನಾಯಕಿ ಶ್ರೀನಿಧಿ ಶೆಟ್ಟಿ, ಸಂಜಯ್ ದತ್‌ ಪಾತ್ರಗಳ ಚಿತ್ರೀಕರಣ ಬಾಕಿ ಉಳಿದಿದ್ದು, ಸಂಜಯ್ ದತ್ ಆಸ್ಪತ್ರೆಯಲ್ಲಿರುವ ಕಾರಣ ಚಿತ್ರೀಕರಣ ತುಸು ತಡವಾಗಬಹುದು ಎನ್ನಲಾಗುತ್ತಿದೆ. ಸಂಜಯ್ ದತ್‌ ಪಾತ್ರದ ಚಿತ್ರೀಕರಣಕ್ಕೆ ಪ್ರಶಾಂತ್ ನೀಲ್ ಏನು ಮಾಡುತ್ತಾರೆ ಕಾದು ನೋಡಬೇಕಿದೆ.

  English summary
  KGF 2 director Prashanth Neel said Prakash Rai is not replacement of Ananth Nag. It is a new character that introduced in KGF 2.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X