»   » ಪ್ರಕಾಶ್ ರೈ ತ್ರಿಭಾಷಾ ಘಮಘಮ 'ಒಗ್ಗರಣೆ' ರೆಡಿ

ಪ್ರಕಾಶ್ ರೈ ತ್ರಿಭಾಷಾ ಘಮಘಮ 'ಒಗ್ಗರಣೆ' ರೆಡಿ

Posted By:
Subscribe to Filmibeat Kannada

ಕನ್ನಡದ ಹೆಮ್ಮೆಯ ನಟ ಪ್ರಕಾಶ್ ರೈ ಅವರ ತ್ರಿಭಾಷಾ ಚಿತ್ರ ತೆರೆಗೆ ಬರಲು ಮುಹೂರ್ತ ನಿಗದಿಯಾಗಿದೆ. ಪ್ರಕಾಶ್ ರೈ ಅವರು ಸ್ವತಃ ನಿರ್ಮಿಸಿ, ನಿರ್ದೇಶಿಸಿ, ನಟಿಸಿರುವ 'ಒಗ್ಗರಣೆ' ಚಿತ್ರ ಕನ್ನಡ, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.

ಪ್ರಕಾಶ್ ರೈ ಅವರು ಈ ಚಿತ್ರವನ್ನು ಮೂರು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡುತ್ತಿರುವುದು ವಿಶೇಷ. ತೆಲುಗಿನಲ್ಲಿ ಈ ಚಿತ್ರಕ್ಕೆ 'ಉಲವಚಾರು ಬಿರ್ಯಾನಿ' ಎಂದೂ, ತಮಿಳಿನಲ್ಲಿ 'ಉನ್ ಸಮಯಿಲ್' ಅರಿವು ಎಂದು ಹೆಸರಿಡಲಾಗಿದೆ. [ಸ್ಟೀವನ್ ಸ್ಪೀಲ್ ಬರ್ಗ್ ಚಿತ್ರದಲ್ಲಿ ಕನ್ನಡಿಗ ಪ್ರಕಾಶ್ ರೈ]


ಈ ಚಿತ್ರವನ್ನು ಜೂನ್.6ರಂದು ಬಿಡುಗಡೆ ಮಾಡಲಾಗುತ್ತಿದ್ದು ದಿನಕರ್ ತೂಗುದೀಪ ಅವರ ಪಾಲಿಗೆ ವಿತರಣೆ ಹಕ್ಕುಗಳು ಸಿಕ್ಕಿವೆ. ಕರ್ನಾಟಕದ ಗಡಿಭಾಗದ ತೆಲುಗು, ತಮಿಳು ಚಿತ್ರಗಳ ವಿತರಣೆ ಹಕ್ಕುಗಳನ್ನೂ ತೂಗುದೀಪ ಡಿಸ್ಟ್ರಿಬ್ಯೂಟರ್ ಪಾಲಾಗಿರುವುದು ವಿಶೇಷ.

ಸುಮಾರು 70 ಚಿತ್ರಮಂದಿರಗಳಲ್ಲಿ ಕನ್ನಡ ಚಿತ್ರ ಹಾಗೂ ಗಡಿಭಾಗದಲ್ಲಿ 60 ಚಿತ್ರಮಂದಿರಗಳಲ್ಲಿ ತೆಲುಗು, ತಮಿಳು ಚಿತ್ರವನ್ನು ಬಿಡುಗಡೆ ಮಾಡಲಾಗುತ್ತಿದೆ. ಕೌಟುಂಬಿಕ ಕಥಾಹಂದರ ಈ ಚಿತ್ರದ ಮಲಯಾಳಂನ 'ಸಾಲ್ಟ್ ಅಂಡ್ ಪೆಪ್ಪರ್' ರೀಮೇಕ್.

ಈ ಚಿತ್ರದ ಪ್ರಮುಖ ಪಾತ್ರ ವರ್ಗದಲ್ಲಿ ಪ್ರಕಾಶ್ ರೈ, ಸ್ನೇಹಾ, ಎಸ್.ಪಿ.ಬಾಲಸುಬ್ರಹ್ಮಣ್ಯಂ, ಊರ್ವಶಿ, ಸಂಯುಕ್ತ ಬೆಳವಾಡಿ, ಅಚ್ಯುತ್ ಕುಮಾರ್, ಸಿಹಿಕಹಿ ಚಂದ್ರು ಪ್ರಧಾನ ಭೂಮಿಕೆಯಲ್ಲಿ ಇದ್ದಾರೆ. ಇಳಯರಾಜ ಸಂಗೀತ, ಪ್ರೀತಾ ನಾಗರಾಜ್ ಛಾಯಾಗ್ರಹಣ, ಕದಿರ್ ಕಲಾನಿರ್ದೇಶನ ಇರುವ ಈ ಚಿತ್ರವು ಏಕಕಾಲದಲ್ಲಿ ಕನ್ನಡ, ತಮಿಳು ಹಾಗೂ ತೆಲುಗಿನಲ್ಲಿ ರಿಲೀಸ್ ಆಗುತ್ತಿದೆ.

ಮಲಯಾಳಂನಲ್ಲಿ ನಿರ್ಮಿಸಿದ ರೊಮ್ಯಾಂಟಿಕ್ ಕಾಮಿಡಿ ಚಿತ್ರ 'ಸಾಲ್ಟ್ ಅಂಡ ಪೆಪ್ಪರ್' ಬಾಕ್ಸ್ ಆಫೀಸಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಈ ಹಿಂದೆ ಪ್ರಕಾಶ್ ರೈ ಅವರು 'ನಾನು ನನ್ನ ಕನಸು' ಎಂಬ ಚಿತ್ರವನ್ನು ಮಾಡಿದ್ದರು. ಇದು ತಮಿಳಿನ ಹಿಟ್ ಚಿತ್ರ 'ಅಭಿಯುಂ ನಾನುಂ' ಚಿತ್ರದ ರೀಮೇಕ್. (ಏಜೆನ್ಸೀಸ್)

English summary
Prakash Raj direction and production 'Oggarane' in Kannada, 'Ulavuchara Biryani' in Telugu and 'Un Samayil Arivu' in Tamil are releasing on 6th of June 2014 is taken up for distribution by Toogudeepa Distribution.
Please Wait while comments are loading...