For Quick Alerts
  ALLOW NOTIFICATIONS  
  For Daily Alerts

  ಕೆಜಿಎಫ್ ಚಾಪ್ಟರ್-2 ಅನಂತ್ ನಾಗ್ ಜಾಗಕ್ಕೆ ಪ್ರಕಾಶ್ ರಾಜ್ ಎಂಟ್ರಿ! ಏನಿದು ಸರ್ಪ್ರೈಸ್?

  |

  ಭಾರತ ಚಿತ್ರರಂಗದ ಬಹುನಿರೀಕ್ಷೆಯ ಚಿತ್ರ ಕೆಜಿಎಫ್ ಚಾಪ್ಟರ್-2 ಇಂದಿನಿಂದ ಚಿತ್ರೀಕರಣಕ್ಕೆ ಮರು ಚಾಲನೆ ನೀಡಿದೆ. ಕೊರೊನಾ ವೈರಸ್‌ನಿಂದ ವಿರಾಮ ತೆಗೆದುಕೊಂಡಿದ್ದ ಚಿತ್ರತಂಡ ಮತ್ತೆ ಅಖಾಡಕ್ಕಿಳಿದಿದೆ. ಬ್ರೇಕ್ ಬಳಿಕ ಶೂಟಿಂಗ್ ಆರಂಭಿಸಿರುವ ಚಿತ್ರತಂಡ ಮಾಳವಿಕಾ ಅವರ ಪ್ರಮುಖ ದೃಶ್ಯಗಳನ್ನು ಸೆರೆಹಿಡಿಯುತ್ತಿದೆ.

  Ayogya ಸಿನಿಮಾದಲ್ಲಿ Satish Neenasam ಕೆಂಡದ ಮೇಲೆ ಓಡಿದ್ದು ಹೇಗೆ ನೋಡಿ|Ayogya song Making| Oneindia Kannada

  ಈ ದೃಶ್ಯದ ಫೋಟೋಗಳು ಬಹಿರಂಗವಾಗಿದ್ದು, ಮಾಳವಿಕಾ ಎದುರು ಅನಂತ್ ನಾಗ್ ಇಲ್ಲ, ಆ ಜಾಗಕ್ಕೆ ಪ್ರಕಾಶ್ ರಾಜ್ ಬಂದಿದ್ದಾರೆ. ಇದು ನಿಜಕ್ಕೂ ದೊಡ್ಡ ಸರ್ಪ್ರೈಸ್ ಆಗಿದೆ. ಕೆಜಿಎಫ್ ಚಿತ್ರದಲ್ಲಿ ಮಾಳವಿಕಾ ಮತ್ತು ಅನಂತ್ ನಾಗ್ ನಡುವಿನ ದೃಶ್ಯಗಳು ಬಹಳ ಪ್ರಮುಖವಾಗಿದ್ದವು. ಆದ್ರೀಗ, ಚಾಪ್ಟರ್ 2ನಲ್ಲಿ ಅನಂತ್ ನಾಗ್ ಇರಲ್ವಾ ಎಂಬ ಅನುಮಾನ ಮೂಡುತ್ತಿದೆ. ಪ್ರಕಾಶ್ ರಾಜ್ ಎಂಟ್ರಿ ಹಿಂದಿನ ನಿಜವಾದ ಕಥೆ ಏನು? ಮುಂದೆ ಓದಿ...

  ಪ್ರಕಾಶ್ ರಾಜ್ ಹೊಸ ಎಂಟ್ರಿ!

  ಪ್ರಕಾಶ್ ರಾಜ್ ಹೊಸ ಎಂಟ್ರಿ!

  ಕೆಜಿಎಫ್ ಚಾಪ್ಟರ್ 2ನಲ್ಲಿ ಹಲವು ಹೊಸ ಮುಖಗಳು ಕಾಣಲಿದೆ ಎನ್ನುವುದಕ್ಕೆ ಮತ್ತೊಂದು ಉದಾಹರಣೆ ಪ್ರಕಾಶ ರಾಜ್. ಈಗಾಗಲೇ ಅಧೀರನ ಪಾತ್ರಕ್ಕೆ ಸಂಜಯ್ ದತ್ ಆಗಮನವಾಗಿದೆ. ಈಗ ಇನ್ನೊಂದು ಮುಖ್ಯ ಪಾತ್ರಕ್ಕೆ ಪ್ರಕಾಶ್ ರಾಜ್ ಎಂಟ್ರಿಯಾಗಿದ್ದಾರೆ. ಈ ಮೂಲಕ ಚಾಪ್ಟರ್ 2 ಬಗ್ಗೆ ಕುತೂಹಲ ಮತ್ತಷ್ಟು ಹೆಚ್ಚಾಗುತ್ತಿದೆ.

  'ಪುನರ್ಜನ್ಮ ಸಿಕ್ಕಂತೆ ಭಾಸ': ಆರು ತಿಂಗಳ ವಿರಾಮದ ನಂತರ ಬೇಟೆ ಶುರು'ಪುನರ್ಜನ್ಮ ಸಿಕ್ಕಂತೆ ಭಾಸ': ಆರು ತಿಂಗಳ ವಿರಾಮದ ನಂತರ ಬೇಟೆ ಶುರು

  ಅನಂತ್ ನಾಗ್ ಕಥೆ ಏನು?

  ಅನಂತ್ ನಾಗ್ ಕಥೆ ಏನು?

  ಕೆಜಿಎಫ್ ಚಾಪ್ಟರ್ 1ರಲ್ಲಿ ಮಾಳವಿಕಾ ಅವರಿಗೆ ಅನಂತ್ ನಾಗ್ ಕಥೆ ಹೇಳುತ್ತಿದ್ದರು. ಚಾಪ್ಟರ್ 2ರಲ್ಲೂ ಆ ಕಥೆ ಮುಂದುವರಿಯಲಿದೆ. ಸರ್ಪ್ರೈಸ್ ಎಂಬಂತೆ ಆ ಜಾಗಕ್ಕೆ ಪ್ರಕಾಶ್ ರಾಜ್ ಪ್ರತ್ಯಕ್ಷವಾಗಿದ್ದಾರೆ. ಇದನ್ನು ಗಮನಿಸಿದ ನೆಟ್ಟಿಗರು ಅನಂತ್ ನಾಗ್ ಇರಲ್ವಾ ಎಂಬ ಗೊಂದಲಕ್ಕೆ ಒಳಗಾಗಿದ್ದಾರೆ. ಆದರೆ, ಈ ಚಿತ್ರದಲ್ಲಿ ಅನಂತ್ ನಾಗ್ ಮತ್ತು ಪ್ರಕಾಶ್ ರಾಜ್ ಇಬ್ಬರು ಇರಲಿದ್ದಾರೆ.

  ಮತ್ತಷ್ಟು ಸರ್ಪ್ರೈಸ್ ಬಂದರೂ ಅಚ್ಚರಿಯಾಗಬೇಡಿ

  ಮತ್ತಷ್ಟು ಸರ್ಪ್ರೈಸ್ ಬಂದರೂ ಅಚ್ಚರಿಯಾಗಬೇಡಿ

  ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ಅನಂತ್ ನಾಗ್ ಮತ್ತು ಪ್ರಕಾಶ್ ರಾಜ್ ಇಬ್ಬರೂ ಇರಲಿದ್ದು, ಇಬ್ಬರದ್ದು ಪ್ರಮುಖ ಪಾತ್ರಗಳು ಎಂದು ಹೇಳಲಾಗಿದೆ. ಎರಡನೇ ಭಾಗದಲ್ಲಿ ಸಂಜಯ್ ದತ್, ಪ್ರಕಾಶ್ ರಾಜ್, ರವೀನಾ ಟಂಡನ್ ಎಂಟ್ರಿಯಾಗಿದೆ. ಇವರ ಜೊತೆ ಮತ್ತಷ್ಟು ಸರ್ಪ್ರೈಸ್ ಪಾತ್ರಗಳು ಬಂದರೂ ಅಚ್ಚರಿಯಾಗಬೇಡಿ.

  ಸಂಕ್ರಾಂತಿ ಬಿಡುಗಡೆ!

  ಸಂಕ್ರಾಂತಿ ಬಿಡುಗಡೆ!

  ಕೊರೊನಾ ವೈರಸ್ ಬ್ರೇಕ್, ಸಂಜಯ್ ದತ್ ಅವರ ಅನಾರೋಗ್ಯವನ್ನು ಗಮನದಲ್ಲಿಟ್ಟುಕೊಂಡು ನೋಡುವುದಾದರೇ ಈ ವರ್ಷ ಕೆಜಿಎಫ್ ತೆರೆಕಾಣುವುದು ಬಹುತೇಕ ಅನುಮಾನ. ಸದ್ಯದ ಮಾಹಿತಿ ಮುಂದಿನ ವರ್ಷದ ಮೊದಲ ಹಬ್ಬ ಸಂಕ್ರಾಂತಿಗೆ ಕೆಜಿಎಫ್ ಚಾಪ್ಟರ್ 2 ಪ್ರೇಕ್ಷಕರ ಮುಂದೆ ಬರಲಿದೆ ಎನ್ನಲಾಗುತ್ತಿದೆ.

  English summary
  Kannada movie KGF Chapter 2 shoot resumes from today. Prakash Raj and Anant Nag are playing pivotal characters in the film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X