For Quick Alerts
  ALLOW NOTIFICATIONS  
  For Daily Alerts

  ಮೊದಲು ನಾನು ಉಗಿದೆ.. ಈಗ ಜನ ಉಗಿತ್ತಿದ್ದಾರೆ- ಕೇಂದ್ರಕ್ಕೆ ಪ್ರಕಾಶ್ ರಾಜ್ ಪಂಚ್

  |

  ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಅನೇಕ ಭಾಗಗಳಿಗೆ ನೆರೆ ಪರಿಹಾರ ನೀಡಬೇಕು ಎನ್ನುವ ಒತ್ತಾಯ ಜೋರಾಗಿ ನಡೆಯುತ್ತಿದೆ. ಕರ್ನಾಟಕವನ್ನು ಕಡೆಗಣಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಮಾತುಗಳು ಕೇಳಿ ಬಂದಿವೆ. ಇದೀಗ ನಟ ಪ್ರಕಾಶ್ ರಾಜ್ ಕೂಡ ಕೇಂದ್ರ ಸರ್ಕಾರ ವಿರುದ್ಧ ಟ್ವೀಟ್ ಮಾಡಿದ್ದಾರೆ.

  ಪ್ರಕಾಶ್ ರಾಜ್ ಆಗಾಗ ಕೇಂದ್ರ ಸರ್ಕಾರದ ನಿರ್ಧಾರಗಳ ಬಗ್ಗೆ ಪ್ರಶ್ನೆ ಮಾಡುತ್ತಾರೆ. ಇದೀಗ ನೆರೆ ಪರಿಹಾರ ವಿಚಾರವಾಗಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ''ನಾನು ಉಗುದೆ...ಒರಸ್ಕೊಂಡ್ರೀ...ಈಗ ಜನ ಕ್ಯಾಕರ್ಸ್ಕೊಂಡ್ ಉಗೀತಾ ಇದ್ದಾರೆ...ಎಷ್ಟೂಂತ ಒರಸ್ಕೊತೀರಪ್ಪ..'' ಎಂದು ಟ್ವೀಟ್ ಮಾಡಿದ್ದಾರೆ.

  ಉತ್ತರ ಕರ್ನಾಟಕ ನೆರೆ ಪರಿಹಾರದ ಬಗ್ಗೆ ಜಗ್ಗೇಶ್ ಟ್ವೀಟ್

  ತಮ್ಮ ಬರಹದ ಮೂಲಕ ಕೇಂದ್ರ ಸರ್ಕಾರಕ್ಕೆ ಪ್ರಕಾಶ್ ಪಂಚ್ ನೀಡಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಬಂದ ಅಭಿಪ್ರಾಯಗಳನ್ನು ಸಂಗ್ರಹಿಸಿ, ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

  ಪ್ರಕಾಶ್ ರಾಜ್ ಮಾಡಿರುವ ಟ್ವೀಟ್ ಗೆ ಸಾಕಷ್ಟು ಕಾಮೆಂಟ್ ಗಳು ಬರುತ್ತಿವೆ. ಕೆಲವರು ಪ್ರಕಾಶ್ ರಾಜ್ ಹೇಳಿಕೆಗೆ ಮೆಚ್ಚುಗೆ ಸೂಚಿಸಿದರೆ, ಇನ್ನು ಕೆಲವರು ನೀವು ಈ ವಿಷಯದ ಬಗ್ಗೆ ಮಾತನಾಡಬೇಡಿ ಎಂದಿದ್ದಾರೆ.

  'ಹಿಂದಿ ದಿವಸ್' ವಿರೋಧಿಸಿದ ನಟ ಪ್ರಕಾಶ್ ರಾಜ್

  ಅಂದಹಾಗೆ, ಇದೇ ವಿಷಯದ ಬಗ್ಗೆ ನಿನ್ನೆ ನಟ ಜಗ್ಗೇಶ್ ಕೂಡ ಟ್ವೀಟ್ ಮಾಡಿದ್ದರು. ನೆರೆ ಪರಿಹಾರ ನೀಡಿ ಎಂದೆನೂ ಕೇಳದ ಜಗ್ಗೇಶ್, ''ಯಾವುದೇ ಪರಿಹಾರ ಸರ್ಕಾರದಿಂದ ಬಿಡುಗಡೆ ಆದರೆ, ನೇರವಾಗಿ ಸಂತ್ರಸ್ಥರ ಬ್ಯಾಂಕ್ ಖಾತೆಗೆ ವರ್ಗವಾಗಲಿ'' ಎಂದು ಮಾತ್ರ ಹೇಳಿದ್ದಾರೆ.

  English summary
  Kannada actor Prakash Raj tweets about flood relief fund for karnataka.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X