For Quick Alerts
  ALLOW NOTIFICATIONS  
  For Daily Alerts

  ಆಂಧ್ರ ಪ್ರೇಕ್ಷಕರ ಕಣ್ಣು ತಂಪು ಮಾಡಿದ ನಟಿ ಪ್ರಣೀತಾ

  By ಅನಂತರಾಮು, ಹೈದರಾಬಾದ್
  |

  ಕನ್ನಡದ ಬೆಡಗಿ ಪ್ರಣೀತಾ ಅವರಿಗೆ ಶುಕ್ರದೆಸೆ ಶುರುವಾಗಿದೆ. ತೆಲುಗಿನಲ್ಲಿ ಪವರ್ ಸ್ಟಾರ್ ಪವನ್ ಕಲ್ಯಾಣ್ ಜೊತೆಗಿನ 'ಅತ್ತಾರಿಂಟಿಕಿ ದಾರೇದಿ' ಚಿತ್ರ ಭರ್ಜರಿ ಕಲೆಕ್ಷನ್ ಮಾಡಿದೆ. ಈ ಚಿತ್ರದಲ್ಲಿ ಇಬ್ಬರು ಸಮಂತಾ ಜೊತೆಗೆ ಪ್ರಣೀತಾ ಸಹ ಅಭಿನಯಿಸಿದ್ದರು.

  ಸಮಂಜಾ ಪಾತ್ರಕ್ಕೆ ಹೋಲಿಸಿದರೆ ಪ್ರಣೀತಾ ಪಾತ್ರಕ್ಕೆ ಒಂಚೂರು ಹೆಚ್ಚಿಗೆ ಪ್ರಾಧಾನ್ಯತೆ ನೀಡಲಾಗಿತ್ತು. ಇದೇ ಪ್ರಣೀತಾ ಪಾಲಿಗೆ ಈಗ ವರವಾಗಿ ಪರಿಣಮಿಸಿದೆ. ಕನ್ನಡ ಚಿತ್ರಗಳಿಗೆ ನೋ ಎನ್ನುತ್ತಿರುವ ಪ್ರಣೀತಾ ತೆಲುಗು ಚಿತ್ರಗಳಿಗೆ ಜೋತು ಬೀಳುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

  ಇತ್ತೀಚೆಗೆ 'ಅತ್ತಾರಿಂಟಿ ದಾರೇದಿ' ಚಿತ್ರದ ಥ್ಯಾಂಕ್ ಯು ಮೀಟ್ ಏರ್ಪಡಿಸಲಾಗಿತ್ತು. ಸಾಮಾನ್ಯವಾಗಿ ಪವನ್ ಕಲ್ಯಾಣ್ ಯಾವುದೇ ಕಾರ್ಯಕ್ರಮಗಳಲ್ಲಿ ಅಷ್ಟಾಗಿ ಪಾಲ್ಗೊಳ್ಳುವುದಿಲ್ಲ. ಆದರೆ ಈ ಬಾರಿ ಅವರು ಬಂದಿದ್ದರು. ಅವರನ್ನು ನೋಡಲು ಅಭಿಮಾನಿಗಳೂ ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ್ದರು.

  ಅಭಿಮಾನಿಗಳ ನೋಟವೆಲ್ಲಾ ಪವನ್ ಕಲ್ಯಾಣ್ ಮೇಲೆಯೇ ಇತ್ತು. ಇದೇ ಸಂದರ್ಭದಲ್ಲಿ ತಿಳಿಗುಲಾಬಿ ಬಣ್ಣದ ಲಂಗ ದಾವಣಿಯಲ್ಲಿ ಎಂಟ್ರಿಕೊಟ್ಟರು ಪ್ರಣೀತಾ. ಅವರ ಅಂದಚೆಂದಕ್ಕೆ ಮೈಮಾಟಕ್ಕೆ ಪವನ್ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆದರು. ಚಿತ್ರಗಳಲ್ಲಿ ನೋಡಿ ಪ್ರಣೀತಾ ವೈಯಾರ.

  ಅಂದಚೆಂದದಲ್ಲೇ ಎಲ್ಲರ ಗಮನಸೆಳೆದ ತಾರೆ

  ಅಂದಚೆಂದದಲ್ಲೇ ಎಲ್ಲರ ಗಮನಸೆಳೆದ ತಾರೆ

  ಅತ್ತಾರಿಂಟಿಕಿ ದಾರೇದಿ ಚಿತ್ರದಲ್ಲಿ ಪ್ರಣೀತಾ ಪಾತ್ರದ ಹೆಸರು ಪ್ರಮೀಳಾ. ನಾಯಕ ನಟ ಪವನ್ ಅತ್ತೆ ಮಗಳು. ಚಿತ್ರದಲ್ಲಿ ಪ್ರಣೀತಾ ಮುಖ್ಯ ಹೀರೋಯಿನ್ ಅಲ್ಲದಿದ್ದರೂ ತನ್ನ ಅಂದಚೆಂದದಲ್ಲೇ ಎಲ್ಲರ ಗಮನಸೆಳೆದಿದ್ದಾರೆ.

  ಪವನ್ ಕಲ್ಯಾಣ್ ಗೆ ಥ್ಯಾಂಕ್ಸ್ ಹೇಳಿದ ಪ್ರಣೀತಾ

  ಪವನ್ ಕಲ್ಯಾಣ್ ಗೆ ಥ್ಯಾಂಕ್ಸ್ ಹೇಳಿದ ಪ್ರಣೀತಾ

  ಥ್ಯಾಂಕೂ ಮೀಟ್ ನಲ್ಲಿ ಪ್ರಣೀತಾ ಮಾತನಾಡುತ್ತಾ, ನನ್ನನ್ನು ಚಿತ್ರಕ್ಕೆ ಆಯ್ಕೆ ಮಾಡಿದ್ದಕ್ಕೆ ಮೊದಲು ಪವನ್ ಸಾರ್, ತ್ರಿವಿಕ್ರಮ್ ಸಾರ್, ಬಿ.ವಿಯನ್ ಎಸ್ ಪ್ರಸಾದ್ ಅವರಿಗೆ ತುಂಬ ಧನ್ಯವಾದಗಳು. ಹಾಗೆಯೇ ವೆರಿ ಬಿಗ್ ಥ್ಯಾಂಕ್ಸ್ ಫರ್ ತೆಲುಗು ಆಡಿಯನ್ಸ್ ಎಂದರು.

  ನಾನಾ ಕಷ್ಟಗಳ ನಡುವೆ ಗೆದ್ದ ಚಿತ್ರ

  ನಾನಾ ಕಷ್ಟಗಳ ನಡುವೆ ಗೆದ್ದ ಚಿತ್ರ

  ಚಿತ್ರಕ್ಕೆ ನಾನಾ ಸಂಕಷ್ಟಗಳು ಎದುರಾದವು. ಆದರೂ ಚಿತ್ರ ಬಾಕ್ಸ್ ಆಫೀಸಲ್ಲಿ ಗೆದ್ದಿದೆ. ಇದಕ್ಕೆಲ್ಲಾ ಅಭಿಮಾನಿಗಳೇ ಕಾರಣ. ಚಿತ್ರದ ತಾಂತ್ರಿಕ ಹಾಗೂ ಪಾತ್ರವರ್ಗದ ಬೆಂಬಲವೂ ನನಗಿತ್ತು ಎಂದಿದ್ದಾರೆ.

  ನನ್ನ ವೃತ್ತಿ ಜೀವನದಲ್ಲಿ ಬಿಗ್ ಹಿಟ್ ಚಿತ್ರ

  ನನ್ನ ವೃತ್ತಿ ಜೀವನದಲ್ಲಿ ಬಿಗ್ ಹಿಟ್ ಚಿತ್ರ

  ಈ ಚಿತ್ರ ನನ್ನ ವೃತ್ತಿ ಜೀವನದಲ್ಲಿ ಬಿಗ್ ಹಿಟ್ ಕೊಟ್ಟಿದೆ. ಪವರ್ ಸ್ಟಾರ್ ಚಿತ್ರ ಎಂದರೇನೇ ಮಿನಿಮಮ್ ಗ್ಯಾರಂಟಿ ಇರುತ್ತದೆ. ಬಿಡುಗಡೆಯಾದ ವಾರಕ್ಕೇ ಅವರ ಚಿತ್ರಗಳು ಸಕ್ಸಸ್ ಬಾರ್ಡರ್ ದಾಟುತ್ತವೆ. ಅತ್ತಾರಿಂಟಿ ಚಿತ್ರದ ವಿಚಾರಕ್ಕೆ ಬಂದರೆ ಬ್ಲ್ಯಾಕ್ ಬಸ್ಟರ್ ಚಿತ್ರಕ್ಕೆ ಇರಬೇಕಾದ ಎಲ್ಲಾ ಅರ್ಹತೆಗಳು ಇವೆ ಎಂದು ಹೇಳಿದರು.

  ಬಾಪು ಚಿತ್ರಗಳಷ್ಟೇ ಸೊಗಸಾಗಿದೆ ತಮ್ಮ ಪಾತ್ರ

  ಬಾಪು ಚಿತ್ರಗಳಷ್ಟೇ ಸೊಗಸಾಗಿದೆ ತಮ್ಮ ಪಾತ್ರ

  ತಮ್ಮ ಪಾತ್ರದ ಬಗ್ಗೆ ಮಾತನಾಡುತ್ತಾ, ಚಿತ್ರದಲ್ಲಿ ತಮ್ಮನ್ನು ಬಾಪು (ತೆಲುಗು ಚಿತ್ರ ನಿರ್ದೇಶಕ, ವರ್ಣಚಿತ್ರ ಕಲಾವಿದ) ವರ್ಣಚಿತ್ರಗಳಷ್ಟೇ ಸೊಗಸಾಗಿ ತೋರಿಸಲಾಗಿದೆ. ನಿಸ್ಸಂದೇಹವಾಗಿ ತಮಗೆ ಒಳ್ಳೆಯ ಹೆಸರು ತಂದುಕೊಟ್ಟಂತಹ ಚಿತ್ರವಿದು.

  ಗಬ್ಬರ್ ಸಿಂಗ್ 2 ಚಿತ್ರಕ್ಕೂ ಪ್ರಣೀತಾ?

  ಗಬ್ಬರ್ ಸಿಂಗ್ 2 ಚಿತ್ರಕ್ಕೂ ಪ್ರಣೀತಾ?

  ಪವನ್ ಕಲ್ಯಾಣ್ ಹೀರೋ ಆಗಿರುವ ಮತ್ತೊಂದು ಚಿತ್ರ 'ಗಬ್ಬರ್ ಸಿಂಗ್ 2' ಚಿತ್ರದಲ್ಲೂ ಪ್ರಣೀತಾ ನಾಯಕಿಯಾಗಿ ಆಯ್ಕೆಯಾಗುವ ಎಲ್ಲಾ ಸೂಚನೆಗಳೂ ಇವೆ.

  ಆಂಧ್ರದಲ್ಲಿ ಮಿಂಚುತ್ತಿರುವ ಕನ್ನಡ ಬೆಡಗಿ

  ಆಂಧ್ರದಲ್ಲಿ ಮಿಂಚುತ್ತಿರುವ ಕನ್ನಡ ಬೆಡಗಿ

  ಒಟ್ಟಾರೆಯಾಗಿ ಕನ್ನಡದ ಬೆಡಗಿ ಆಂಧ್ರದಲ್ಲಿ ಮಿಂಚುತ್ತಿರುವುದು ವಿಶೇಷ. ಪ್ರಣೀತಾ ತನ್ನ ಮೀನಿನಂತಹ ಕಣ್ಣುಗಳಲ್ಲೇ ಮ್ಯಾಜಿಕ್ ಮಾಡುತ್ತಿದ್ದಾರೆ.

  English summary
  Praneetha hot navel show at Atharintiki daredi Thank you Meet. Before the release of the movie Attarintiki Daredi, many thought Samantha will be seen as the main lead, owing to the success rate she has over Praneetha, which did happen, but one has to accept the fact that, Praneetha was more dominant in the movie especially in the first half, where the characterization of Samantha was confined to bare minimum.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X