»   » ನಟ ಯಶ್ ಮನೆಗೆ ಬಾಂಬ್ ಇಟ್ಟವರು ಯಾರು?

ನಟ ಯಶ್ ಮನೆಗೆ ಬಾಂಬ್ ಇಟ್ಟವರು ಯಾರು?

Posted By:
Subscribe to Filmibeat Kannada

ರಾಕಿಂಗ್ ಸ್ಟಾರ್ ಯಶ್ ಗೆ ಈಗ ಮುಟ್ಟಿದ್ದೆಲ್ಲಾ ಚಿನ್ನವಾಗುವ ಸಮಯ. ಅವರ ಕಾಲ್ ಶೀಟ್ ಗಾಗಿ ನಿರ್ಮಾಪಕರು ಕ್ಯೂ ನಿಂತಿದ್ದಾರೆ. ಗಾಂಧಿನಗರ ಪಂಡಿತರ ಲೆಕ್ಕಾಚಾರವನ್ನೂ ಮೀರಿ ನಟ ಯಶ್ ಬೆಳೆಯುತ್ತಿದ್ದಾರೆ.

ಇಂತಿಪ್ಪ ಯಶ್ ವಿವಾದಗಳಲ್ಲಿಯೂ ಅಷ್ಟೇ ಜನಪ್ರಿಯ. ವಿವಾದಗಳನ್ನೇ ಹುಡುಕಿಕೊಂಡು ಯಶ್ ಹೋಗುತ್ತಿದ್ದಾರೋ, ಅಥವಾ ವಿವಾದಗಳೇ ಯಶ್ ರನ್ನ ಅರಸಿ ಬರುತ್ತಿವೆಯೋ ಗೊತ್ತಿಲ್ಲ. ಒಟ್ನಲ್ಲಿ ಒಂದಲ್ಲಾ ಒಂದು ಅವಾಂತರಗಳಿಂದ ನಟ ಯಶ್ ಸುದ್ದಿಯಾಗುತ್ತಲೇ ಇದ್ದಾರೆ. ['ಯಶ್ ಇಮೇಜ್ ಗೆ ಡ್ಯಾಮೇಜ್ ಮಾಡುವ ಕೆಲಸವಿದು!']

ಈ ಬಾರಿ ಅವರು ಸದ್ದು ಮಾಡಿರುವುದು ಮತ್ತೊಮ್ಮೆ ಅವರ ಮನೆಯ ವಿಚಾರಕ್ಕೆ. ಇದು ಮತ್ತದೇ ಬಾಡಿಗೆ ರಂಪಾಟ ಅಂದುಕೊಳ್ಳಬೇಡಿ. ಯಶ್ ಮನೆಯಲ್ಲಿ ಯಾರೋ ಬಾಂಬ್ ಇಟ್ಟಿದ್ದರಂತೆ.! ಹಾಗಂತ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಂದೆ ಓದಿ.....

ಯಶ್ ಮನೆಯಲ್ಲಿ ಬಾಂಬ್..!

ಅವತ್ತು ಭಾನುವಾರ....ಜೂನ್ 21ನೇ ತಾರೀಖು. ಸಂಜೆ ಸರಿಯಾಗಿ 7 ಗಂಟೆ 36 ನಿಮಿಷಕ್ಕೆ ಪೊಲೀಸ್ ಕಂಟ್ರೋಲ್ ರೂಮ್ ಗೆ ಒಂದು ಫೋನ್ ಬರುತ್ತೆ. 'ಯಶ್ ಮನೆಯಲ್ಲಿ ಬಾಂಬ್ ಇಟ್ಟಿದ್ದೇನೆ. ಇನ್ನು ಕೆಲವೇ ನಿಮಿಷಗಳಲ್ಲಿ ಬ್ಲಾಸ್ಟ್ ಆಗುತ್ತೆ' ಅಂತ ಹೇಳಿದ ಕೂಡಲೆ ಕಾಲ್ ಕಟ್ ಆಗುತ್ತೆ.

ಯಶ್ ಮನೆಗೆ ದೌಡಾಯಿಸಿದ ಪೊಲೀಸರು

ಫೋನ್ ಬಂದ ಕೂಡಲೆ ಪೊಲೀಸ್ ಸಿಬ್ಬಂದಿ, ಹಿರಿಯ ಅಧಿಕಾರಿಗಳು ಮತ್ತು ಬಾಂಬ್ ನಿಷ್ಕ್ರಿಯ ದಳ ಕತ್ರಿಗುಪ್ಪೆಯಲ್ಲಿರುವ ಯಶ್ ಮನೆಗೆ ದೌಡಾಯಿಸುತ್ತಾರೆ. ಇದ್ದಕ್ಕಿದ್ದಂತೆ ಪೊಲೀಸರು ಬಂದಿದ್ದು ನೋಡಿ ಯಶ್ ಮತ್ತು ಕುಟುಂಬಕ್ಕೆ ಗಾಬರಿಯಾಗುತ್ತೆ. ಅದ್ರಲ್ಲೂ ಬಾಂಬ್ ವಿಷಯ ಕೇಳಿ ಎಲ್ಲರೂ ಆತಂಕಗೊಳ್ಳುತ್ತಾರೆ. [ಬಯಲಾದ ಯಶ್ ಮನೆ ಬಾಡಿಗೆ 'ಡ್ರಾಮಾ' ]

ಮನೆಯಲ್ಲಿ ಬಾಂಬ್ ಇರಲಿಲ್ಲ.!

ಯಶ್ ಅವರ ಇಡೀ ಮನೆಯನ್ನ ಪೊಲೀಸ್ ಸಿಬ್ಬಂದಿ ಮತ್ತು ಬಾಂಬ್ ನಿಷ್ಕ್ರಿಯ ದಳ ತಪಾಸಣೆ ನಡೆಸುತ್ತಾರೆ. ಆದ್ರೆ, ಎಲ್ಲೂ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗ್ಲಿಲ್ಲ. ಬಾಂಬ್ ಇಲ್ಲ ಅಂತ ಕನ್ಫರ್ಮ್ ಆದ ನಂತ್ರ ಯಶ್ ಮತ್ತು ಕುಟುಂಬ ನಿಟ್ಟುಸಿರು ಬಿಡುತ್ತಾರೆ. [ರಾತ್ರಿಯೆಲ್ಲಾ ರಾಕಿಂಗ್ ಸ್ಟಾರ್ ಯಶ್ ನಿದ್ದೆಗೆಡುತ್ತಿರುವುದೇಕೆ?]

ಇದೊಂದು ಹುಸಿ ಬಾಂಬ್ ಕರೆ.!

ಪೊಲೀಸ್ ಕಂಟ್ರೋಲ್ ರೂಮ್ ಗೆ ಫೋನ್ ಮಾಡಿದ ವ್ಯಕ್ತಿ ತಾನೇ ಬಾಂಬ್ ಇಟ್ಟಿರುವುದಾಗಿ ಹೇಳಿದ್ದ. ಆದ್ರೆ, ಅವನನ್ನ ಟ್ರ್ಯಾಪ್ ಮಾಡುವಷ್ಟರಲ್ಲಿ ಕಾಲ್ ಕಟ್ ಆಗಿತ್ತು. ಯಶ್ ಮನೆಯನ್ನ ತಪಾಸಣೆ ನಡೆಸಿದ ಬಳಿಕ, ಇದು ಹುಸಿ ಬಾಂಬ್ ಕರೆ ಅಂತ ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಹುಸಿ ಬಾಂಬ್ ಕರೆ ವಿಚಾರವಾಗಿ ಗಿರಿನಗರ ಪೊಲೀಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿ ನಾಲ್ಕು ದಿನಗಳ ನಂತ್ರ ಬೆಳಕಿಗೆ ಬಂದಿದೆ. [ಗಾದೆ : "ದಡ್ಡರು ಮನೆ ಕಟ್ತಾರೆ, ಬುದ್ಧಿವಂತರು ಅಲ್ಲಿ ವಾಸಿಸುತ್ತಾರೆ"]

ಫೋನ್ ಮಾಡಿದ ಅನಾಮಿಕ ಯಾರು?

ಪ್ರಕರಣ ದಾಖಲಾಗಿ ನಾಲ್ಕು ದಿನಗಳಾಗಿದ್ದರೂ, ಹುಸಿ ಬಾಂಬ್ ಕರೆ ಮಾಡಿದ್ದ ವ್ಯಕ್ತಿ ಯಾರು ಅನ್ನುವ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಇದು ಬಾಡಿಗೆ ರಂಪಾಟದ ಸೆಕೆಂಡ್ ಎಪಿಸೋಡ್?

ಯಶ್ ಮನೆ ಬಾಡಿಗೆ ರಂಪಾಟ ಎಲ್ಲಾ ಸುದ್ದಿ ವಾಹಿನಿಗಳಲ್ಲಿ ಬ್ರೇಕಿಂಗ್ ನ್ಯೂಸ್ ಆಗಿತ್ತು. ಇದನ್ನೆಲ್ಲಾ ಕಂಡ ಕೆಲ ಕಿಡಿಗೇಡಿಗಳು ಉರಿಯುತ್ತಿರುವ ಬೆಂಕಿಗೆ ಇನ್ನಷ್ಟು ತುಪ್ಪ ಸುರಿಯುವುದಕ್ಕೆ ಇಂತಹ ಕೃತ್ಯ ಎಸಗಿರಬಹುದು ಅಂತ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. [ಯಶ್ ಮನೆ ಬಾಡಿಗೆ ರಂಪ ; ಹಿಂದಿರುವ ಪಿತೂರಿ ಯಾರದ್ದು?]

ಇದೆಲ್ಲಾ ಅಭಿಮಾನಿಗಳ ಕಿತಾಪತಿ?

ಯಶ್ ಗೆ ಹೀಗೆ ಕಿರಿಕಿರಿ ಆಗುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆ ಯಶ್ ಕಾರ್ ಮೇಲೆ ಕೆಲ ಕಿಡಿಗೇಡಿಗಳು (ತಾವು ದರ್ಶನ್ ಅಭಿಮನಿಗಳು ಅಂತ ಹೇಳಿಕೊಂಡು) ದಾಳಿ ನಡೆಸಿದ್ದರು. ಇದರಿಂದ ಆತಂಕಗೊಂಡ ಯಶ್, ತಮ್ಮ ಸೇಫ್ಟಿಗಾಗಿ ಬೌನ್ಸರ್ ಮತ್ತು ಸೆಕ್ಯೂರಿಟಿ ಗಾರ್ಡ್ ಗಳನ್ನ ನೇಮಿಸಿಕೊಂಡಿದ್ದಾರೆ. ಈಗ ಬಾಂಬ್ ಅಂತ ಹೇಳಿ ಮತ್ತೆ ಯಶ್ ಎದೆ ನಡುಗಿಸಿದ್ದಾರೆ. [ರಾಕಿಂಗ್ ಸ್ಟಾರ್ ಯಶ್ ಕಾರಿನ ಮೇಲೆ ದಾಳಿ ಮಾಡಿದವರಾರು?]

English summary
An unidentified person made a call to the Police on Sunday (June 21), saying that he has planted a bomb in Kannada Actor Yash's House. But after a search, Police Officials came to a conclusion that it was a prank.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada