»   » ಕಡೆಗೂ 'ಪ್ರಸನ್ನ'ನಾದ ದರ್ಶನ್ 'ಅಂಬರೀಶ'

ಕಡೆಗೂ 'ಪ್ರಸನ್ನ'ನಾದ ದರ್ಶನ್ 'ಅಂಬರೀಶ'

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಕಡೆಗೂ ನಿಟ್ಟುಸಿರು ಬಿಡುವಂತಾಗಿದೆ. ಇಲ್ಲಿವರೆಗೂ 'ಅಂಬರೀಶ' ಎದುರಿಸುತ್ತಿದ್ದ ಥಿಯೇಟರ್ ಸಮಸ್ಯೆ ಇಂದು ಬಗೆಹರಿದಿದೆ. ನಾಳೆ (ನವೆಂಬರ್ 20) ರಿಲೀಸ್ ಆಗುತ್ತಿರುವ ದರ್ಶನ್ 'ಅಂಬರೀಶ'ನಿಗೆ ಪ್ರಮುಖ ಚಿತ್ರಮಂದಿರ ಸಿಕ್ಕಿದೆ.

ಹೌದು, ವರ್ಷಗಳಿಂದಲೂ ಗಾಂಧಿನಗರ ಅನುಸರಿಸುತ್ತಾ ಬಂದಿರುವ ಪ್ರಮುಖ ಚಿತ್ರಮಂದಿರ ಪದ್ಧತಿಯನ್ನ 'ಅಂಬರೀಶ' ನಿರ್ಮಾಪಕರು ಮುಂದುವರಿಸಿದ್ದಾರೆ. ಆದರೆ ಸ್ಯಾಂಡಲ್ ವುಡ್ ನ ಹಳೇ ಕಟ್ಟುಪಾಡನ್ನ ಬದಿಗಿಟ್ಟು ಅನ್ನುವುದು ಇಲ್ಲಿ ಸಿಕ್ಕಿರುವ ದೊಡ್ಡ ಟ್ವಿಸ್ಟ್.

ದರ್ಶನ್ ಅಭಿನಯದ 'ಅಂಬರೀಶ' ಚಿತ್ರಕ್ಕೆ ಸಿಕ್ಕಿರುವ ಮೇನ್ ಥಿಯೇಟರ್ ಗಾಂಧಿನಗರದಲ್ಲಿಲ್ಲ! ಬದಲಾಗಿ ವಿಜಯನಗರದಲ್ಲಿ. ಇಲ್ಲಿವರೆಗೂ ಕೆ.ಜಿ.ರೋಡ್ ನ ಪ್ರಮುಖ ಚಿತ್ರಮಂದಿರ ಸೇರಿದಂತೆ ರಾಜ್ಯಾದ್ಯಂತ ರಿಲೀಸ್ ಅಂತ ಬೆಂಗಳೂರಿನ ಮೂಲೆಮೂಲೆಯಲ್ಲೂ 'ಅಂಬರೀಶ' ಭಿತ್ತಿಚಿತ್ರಗಳು ರಾರಾಜಿಸುತ್ತಿತ್ತು. ['ಅಂಬರೀಶ' ಚಿತ್ರಕ್ಕೆ ಮೇನ್ ಥಿಯೇಟರ್ ಸಿಕ್ತು..!?]

Ambreesh

ಆದರೀಗ ಪೋಸ್ಟರ್ ಬದಲಾಗಿದೆ. ಪ್ರಮುಖ ಚಿತ್ರಮಂದಿರ ಕೂಡ ಬದಲಾಗಿದೆ. ಕೆ.ಜಿ.ರೋಡ್ ನ ಪ್ರಮುಖ ಚಿತ್ರಮಂದಿರ ಬದಲಿಗೆ 'ಅಂಬರೀಶ' ವಿಜಯನಗರದ ಮಾಗಡಿ ರೋಡ್ ಬಳಿಯ 'ಪ್ರಸನ್ನ' ಚಿತ್ರಮಂದಿರದಲ್ಲಿ ತೆರೆಕಾಣುತ್ತಿದೆ. ಹಾಗಂತ ದರ್ಶನ್ ಅಭಿಮಾನಿ ಬಳಗ 'ಡಿ'ಕಂಪನಿ ಟ್ವೀಟ್ ಮಾಡಿದೆ. ['ಅಂಬರೀಶ' ಬಗ್ಗೆ ಮೌನ ಮುರಿದ ಚಾಲೆಂಜಿಂಗ್ ಸ್ಟಾರ್]

ಇದು ನಿಜವೇ ಆದ್ರೆ, ಸ್ಯಾಂಡಲ್ ವುಡ್ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಕೆ.ಜಿ.ರೋಡ್ ಹೊರತಾಗಿ ಇತರೆ ಚಿತ್ರಮಂದಿರವನ್ನ ಮೇನ್ ಥಿಯೇಟರ್ ಮಾಡಿಕೊಂಡು 'ಅಂಬರೀಶ' ಸಿನಿಮಾ ರಿಲೀಸ್ ಆದಂತಾಗುತ್ತೆ. ಕನ್ನಡ ಸಿನಿಮಾಗಳಿಗೆ ಒಳ್ಳೆ ಕಲೆಕ್ಷನ್ ತಂದುಕೊಟ್ಟು ವರ್ಷಗಳಿಂದ ಸ್ಯಾಂಡಲ್ ವುಡ್ ನ ಅಂಗವಾಗಿರುವ 'ಪ್ರಸನ್ನ' ಚಿತ್ರಮಂದಿರ 'ಅಂಬರೀಶ' ಚಿತ್ರದ ಮೂಲಕ 'ಪ್ರಮುಖ ಚಿತ್ರಮಂದಿರ'ದ ಸ್ಥಾನ ಪಡೆಯುತ್ತೆ. [ದರ್ಶನ್ 'ಅಂಬರೀಶ'ನಿಗೆ ಥಿಯೇಟರ್ ಸಮಸ್ಯೆ?]

ಇದೇ ಖುಷಿಯಲ್ಲಿ 'ಪ್ರಸನ್ನ' ಚಿತ್ರಮಂದಿರ 'ಅಂಬರೀಶ' ಚಿತ್ರಕ್ಕಾಗಿ ಮೊಟ್ಟಮೊದಲ ಬಾರಿಗೆ 6 ಶೋಗಳ ಪ್ರದರ್ಶನಕ್ಕೆ ಏರ್ಪಾಟು ಮಾಡಿದೆ. ಬೆಳ್ಳಗೆ 8 ಗಂಟೆಗೆ ಮೊದಲ ಶೋ ನಡೆಯಲಿದ್ದು, 10.45, 1.45, 4.30, 7.30 ಮತ್ತು ರಾತ್ರಿ 10 ಗಂಟೆಯವರೆಗೂ 'ಅಂಬರೀಶ' ಅಬ್ಬರಿಸಿ ಬೊಬ್ಬಿರಿಯಲಿದ್ದಾನೆ. [ದರ್ಶನ್ 'ಅಂಬರೀಶ'ನಿಗೆ ಗುರು ರಾಯರ ಕೃಪೆ]


ಆ ಮೂಲಕ ಇಡೀ ಗಾಂಧಿನಗರಕ್ಕೆ ಸೆಡ್ಡು ಹೊಡೆಯೋಕೆ ಸಜ್ಜಾಗಿರುವ ದರ್ಶನ್ 'ಅಂಬರೀಶ' ಹೊಸ ಇತಿಹಾಸ ಸೃಷ್ಠಿಸುವುದಕ್ಕೆ ನಾಳೆ ತೆರೆಗೆ ಬರಲಿದ್ದಾನೆ. ನೋಡೋಕೆ ನೀವು ರೆಡಿಯಾಗಿ (ಫಿಲ್ಮಿಬೀಟ್ ಕನ್ನಡ)

English summary
Challenging Star Darshan starrer Ambareesha is all set to release tomorrow (20th November). Prasanna is fixed as the main theatre. There by breaking the rules of Gandhinagar, Ambareesha is gearing up to creat a new record.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada