Don't Miss!
- Sports
ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿ: ರೋಹಿತ್ ಶರ್ಮಾ ಕೋವಿಡ್ ವರದಿ ನೆಗೆಟಿವ್; ಟಿ20 ಸರಣಿಗೆ ರೆಡಿ
- News
ISWA: ಆಸ್ಟ್ರೇಲಿಯಾದ ಅನಿವಾಸಿ ಭಾರತೀಯರೊಂದಿಗೆ ಸಚಿವ ಪ್ರಲ್ಹಾದ್ ಜೋಶಿ ನಿಯೋಗ ಭೇಟಿ
- Finance
Gold Rate Today: ಚಿನ್ನ ಸ್ಥಿರ: ಪ್ರಮುಖ ನಗರಗಳಲ್ಲಿ ಜು.3ರಂದು ಬೆಲೆ ಎಷ್ಟು
- Technology
ಶೀಘ್ರದಲ್ಲೇ ವಾಟ್ಸಾಪ್ ಸೇರಲಿದೆ ಅತಿ ಉಪಯುಕ್ತ ಫೀಚರ್ಸ್! ವಿಶೇಷತೆ ಏನು?
- Automobiles
ಜೂನ್ ತಿಂಗಳಿನಲ್ಲಿ 4.84 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೀರೋ ಮೋಟೊಕಾರ್ಪ್
- Lifestyle
Weekly Horoscope: ಜುಲೈ 3ರಿಂದ ಜುಲೈ 9ರ ವಾರ ಭವಿಷ್ಯ: ಮೇಷ, ಮಿಥುನ, ಮಕರ, ಕುಂಭ ರಾಶಿಯ ವ್ಯಾಪಾರಸ್ಥರು ಆರ್ಥಿಕ ಲಾಭ ಪಡೆಯಬಹುದು
- Education
JNV Result 2022 : 6ನೇ ತರಗತಿ ತಾತ್ಕಾಲಿಕ ಆಯ್ಕೆ ಪಟ್ಟಿ ಜು.10ರಂದು ಪ್ರಕಟ ಸಾಧ್ಯತೆ
- Travel
ಕೆಮ್ಮಣ್ಣು ಗುಂಡಿ - ಒಂದು ಮನಮೋಹಕ ತಾಣ!
'KGF 2', 'ಸಲಾರ್', 'NTR 31' ಈ 3 ಸಿನಿಮಾದ ಪೋಸ್ಟರ್ ಸ್ಟೈಲ್ ಒಂದೇ: 'ಬಘೀರ' ಬಿಟ್ಟಿದ್ಯಾಕೆ?
'ಕೆಜಿಎಫ್ 2' ಸಿನಿಮಾ ವಿಶ್ವ ಮಟ್ಟದಲ್ಲಿ ಹೆಸರು ಮಾಡುತ್ತಿದ್ದಂತೆ ಪ್ರಶಾಂತ್ ನೀಲ್ ಬಗ್ಗೆ ನಿರೀಕ್ಷೆಗಳು ಗರಿದೆಗರಿವೆ. ಮುಂದೆ ಪ್ರಶಾಂತ್ ನೀಲ್ ನಿರ್ದೇಶಿಸಲು ಹೊರಟಿರುವ ಸಿನಿಮಾಗಳ ಬಗ್ಗೆ ಸಿನಿಪ್ರೇಮಿಗಳಲ್ಲಿ ಕೌತುಕ ಹೆಚ್ಚಾಗಿದೆ. ಸಿನಿಮಾ ಹೇಗಿರುತ್ತೆ? 'ಕೆಜಿಎಫ್ 2' ಹ್ಯಾಂಗೋವರ್‌ನಿಂದ ಹೊರ ಬಂದು ಪ್ರಶಾಂತ್ ನೀಲ್ ಯಾವ ರೀತಿ ಸಿನಿಮಾ ಮಾಡಬಹುದು ಎಂದು ಎದುರು ನೋಡುತ್ತಿದ್ದಾರೆ.
ಇನ್ನೊಂದು ಕಡೆ ಪ್ರಶಾಂತ್ ನೀಲ್ ನಿರ್ದೇಶನದ ಮೂರು ಸಿನಿಮಾಗಳ ಪೋಸ್ಟರ್ ಒಂದೇ ಶೇಡ್ ಹಾಗೂ ಒಂದೇ ಸ್ಟೈಲ್‌ನಲ್ಲಿದ್ದು, ಪ್ರೇಕ್ಷಕರು ಗೊಂದಲಕ್ಕೆ ಒಳಗಾಗಿದ್ದಾರೆ. ಬೇಕಂತಲೇ ಇಂತಹ ಪೋಸ್ಟರ್ ಮಾಡುತ್ತಿದ್ದಾರಾ? ಇಲ್ಲಾ ಈ ಪೋಸ್ಟರ್‌ಗಳ ಹಿಂದೆ ಏನಾದರೂ, ಬೇರೆ ಕಥೆ ಇದೆಯಾ? ಅನ್ನುವ ಅನುಮಾನ ಮೂಡುತ್ತಿದೆ.
ಜೂ
ಎನ್‌ಟಿಆರ್
ಜೊತೆ
ಹೊಸ
ಸಿನಿಮಾ,
ಪೋಸ್ಟರ್
ಹೊರಬಿಟ್ಟ
ಪ್ರಶಾಂತ್
ನೀಲ್

ಈ ಮಧ್ಯೆ ಪ್ರಶಾಂತ್ ನೀಲ್ ಅವರೇ ಮೂರು ಸಿನಿಮಾ ಪೋಸ್ಟರ್ ಅನ್ನು ಒಟ್ಟಿಗೆ ಸೇರಿಸಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದು ಪ್ರೇಕ್ಷಕರನ್ನು ಮತ್ತಷ್ಟು ಕನ್ಫ್ಯೂಸ್ ಮಾಡುತ್ತಿದೆ. ಈ ಮಧ್ಯೆ 'ಬಘೀರ' ಮಿಸ್ ಆಗಿದ್ಯಾಕೆ? ಅಂತ ಸಿನಿಪ್ರಿಯರು ಪ್ರಶ್ನೆ ಮಾಡುತ್ತಿದ್ದಾರೆ.
'ಸಲಾರ್'
ಸಿನಿಮಾದ
ಅದ್ಧೂರಿ
ಆಕ್ಷನ್
ಸೀನ್ಗೆ
ಪ್ರಶಾಂತ್
ನೀಲ್
ಸಜ್ಜು:
ಪ್ರಭಾಸ್
ಎಂಟ್ರಿ
ಯಾವಾಗ?

ಪ್ರಶಾಂತ್ ನೀಲ್ 3 ಸಿನಿಮಾ ಪೋಸ್ಟರ್ ಒಂದೇ
'ಕೆಜಿಎಫ್ 2' ಪ್ರಶಾಂತ್ ನೀಲ್ ಎರಡು ಸಿನಿಮಾಗಳಲ್ಲಿ ಬ್ಯುಸಿಯಾಗಿರುವುದಂತೂ ನಿಜ. 'ಸಲಾರ್' ಸಿನಿಮಾ ಈಗಾಗಲೇ ಆರಂಭಿಸಿದ್ದಾರೆ. ಇನ್ನೊಂದು ಕಡೆ ಜೂ.ಎನ್‌ಟಿಆರ್ 31ನೇ ಸಿನಿಮಾ ನಿರ್ದೇಶನ ಮಾಡುವುದಕ್ಕೂ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಜೂ.ಎನ್‌ಟಿಆರ್ ಬರ್ತ್‌ಡೇಯಂದೇ ಅವರ 31ನೇ ಸಿನಿಮಾದ ಪೋಸ್ಟರ್ ಕೂಡ ರಿಲೀಸ್ ಮಾಡಲಾಗಿದೆ. ಸದ್ಯ 'ಕೆಜಿಎಫ್ 2' ಸಲಾರ್, 'NTR 31' ಈ ಮೂರೂ ಸಿನಿಮಾದ ಪೋಸ್ಟರ್ ಅನ್ನು ಅವರೇ ಶೇರ್ ಮಾಡಿದ್ದು, ಒಂದೇ ಶೈಲಿಯಲ್ಲಿವೆ ಅನ್ನೋದು ಗೊತ್ತಾಗುತ್ತೆ. ಸ್ವತ: ಪ್ರಶಾಂತ್ ನೀಲ್ ಟ್ವೀಟ್ ಮಾಡಿರುವುದರಿಂದ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.

ಪ್ರಶಾಂತ್ ಕನ್ಫ್ಯೂಸ್ ಮಾಡುತ್ತಿದ್ದಾರಾ?
'KGF 2', 'ಸಲಾರ್', 'NTR 31' ಈ ಮೂರು ಸಿನಿಮಾ ಪೋಸ್ಟರ್ ಒಂದೇ ಶೇಡ್‌ನಲ್ಲಿ ಯಾಕಿದೆ? 'ಕೆಜಿಎಫ್'ನಿಂದ ಆರಂಭ ಆಗಿದ್ದು, 'ಎನ್‌ಟಿಆರ್ 31'ವರೆಗೂ ಬಂದು ನಿಲ್ಲುತ್ತಾ? ಇಂತಹದ್ದೊಂದು ಅನುಮಾನ ಅಭಿಮಾನಿಗಳನ್ನು ಕಾಡುವುದಕ್ಕೆ ಶುರು ಮಾಡಿದೆ. ಪೋಸ್ಟರ್‌ನಲ್ಲಿ ಯಶ್, ಪ್ರಭಾಸ್, ಜೂ.ಎನ್‌ಟಿಆರ್ ಈ ಮೂವರ ಕ್ಲೋಸ್ ಅಪ್ ಒಂದೇ ರೀತಿ ಯಾಕಿದೆ? ಕಪ್ಪು ಬಿಳುಪಿನ ಪೋಸ್ಟರ್ ಹಿಂದೆ ಏನಾದರೂ ಲಿಂಕ್ ಇದೆಯಾ? ಅನ್ನೋದು ಅಭಿಮಾನಿಗಳ ತಲೆಗೆ ಹುಳಬಿಟ್ಟಂತಾಗಿದೆ.

'ಬಘೀರ' ಸಿನಿಮಾ ಬಿಟ್ಟಿದ್ದೇಕೆ?
ಶ್ರೀಮುರಳಿ ಅಭಿನಯದ 'ಬಘೀರ' ಸಿನಿಮಾದ ಪೋಸ್ಟರ್‌ನಲ್ಲೂ ಹೆಚ್ಚಿನ ವ್ಯತ್ಯಾಸವಿಲ್ಲ. ಈ ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶನ ಮಾಡದೇ ಹೋದರೂ, ಕಥೆ ಇವರದ್ದೇ ಆಗಿದೆ. ಎಲ್ಲಕ್ಕಿಂತ ಹೆಚ್ಚಾಗಿ 'ಬಘೀರ' ಪೋಸ್ಟರ್ ಕೂಡ ಅದೇ ಕ್ಲೋಪ್ ಅಪ್ , ವೈಟ್ ಅಂಡ್ ಬ್ಲ್ಯಾಕ್ ಶೇಡ್‌ನಲ್ಲೇ ಇದೆ. ಈ ಕಾರಣಕ್ಕೆ ಪ್ರಶಾಂತ್ ನೀಲ್ ಹೆಣೆದಿರುವ ಈ ನಾಲ್ಕು ಸಿನಿಮಾಗಳ ಕಥೆ ಒಂದಕ್ಕೊಂದು ಸಂಬಂಧವಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆರಂಭ ಆಗಿದೆ.

4 ಸಿನಿಮಾಗಳಿಗೂ ಲಿಂಕ್ ಇದೆಯಾ?
'ಕೆಜಿಎಫ್ 2' ಸಿನಿಮಾ ಈಗಾಗಲೇ ರಿಲೀಸ್ ಆಗಿದೆ. ಇನ್ನು'ಸಲಾರ್' ಸಿನಿಮಾವನ್ನು ಪ್ರಶಾಂತ್ ನೀಲ್ ಶೂಟ್ ಮಾಡುತ್ತಿದ್ದಾರೆ. ಮತ್ತೊಂದು ಕಡೆ ಜೂ ಎನ್‌ಟಿಆರ್ 31ನೇ ಸಿನಿಮಾ ಅನೌನ್ಸ್ ಆಗಿದೆ. ಕಥೆ ಕೊಟ್ಟ 'ಬಘೀರ' ಶೂಟಿಂಗ್‌ಗೆ ಶುರುವಾಗಿದೆ. ಈ ಮಧ್ಯೆ 'ಕೆಜಿಎಫ್ 3' ಬಗ್ಗೆನೂ ಚರ್ಚೆಯಾಗುತ್ತಿದೆ. ಈ ನಾಲ್ಕೂ ಸಿನಿಮಾಗಳ ಕಥೆಗೂ ಸಂಬಂಧವಿದೆ ಅಂತ ಸಿನಿಪ್ರಿಯರು ಗೆಸ್ ಮಾಡುತ್ತಿದ್ದಾರೆ. ಆದರೆ, ಈ ಗೊಂದಲ ನಿವಾರಣೆಯಾಗೋಕೆ 'ಸಲಾರ್' ಸಿನಿಮಾ ರಿಲೀಸ್ ಆಗಬೇಕು.