»   » ಮಾತು ತಪ್ಪದ ರಿಷಿಕಾ, ಆಸೆ ಈಡೇರಿಸಿಕೊಂಡ ಪ್ರಥಮ್, ಲಾಂಗ್ ಡ್ರೈವ್ ಎಲ್ಲಿಗೆ?

ಮಾತು ತಪ್ಪದ ರಿಷಿಕಾ, ಆಸೆ ಈಡೇರಿಸಿಕೊಂಡ ಪ್ರಥಮ್, ಲಾಂಗ್ ಡ್ರೈವ್ ಎಲ್ಲಿಗೆ?

Posted By:
Subscribe to Filmibeat Kannada

'ಬಿಗ್ ಬಾಸ್' ವಿನ್ನರ್ ಪ್ರಥಮ್ ಹಾಗೂ ನಟಿ ರಿಷಿಕಾ ಸಿಂಗ್ ಅವರ ಮಧ್ಯೆ ನಡೆದಿದ್ದ ಒಪ್ಪಂದ್ದಂತೆ, ರಿಷಿಕಾ ಹಾಗೂ ಪ್ರಥಮ್ ಇದೀಗ, ಲಾಂಗ್ ಡ್ರೈವ್ ಆಸೆ ಈಡೇರಿಸಿಕೊಂಡಿದ್ದಾರೆ.

'ಬಿಗ್ ಬಾಸ್' ಮನೆಯಲ್ಲಿದ್ದಾಗ ಇಬ್ಬರ ಮಧ್ಯೆ ಆಗಿದ್ದ ಚಾಲೆಂಜ್ ನಲ್ಲಿ ಪ್ರಥಮ್ ಗೆದ್ದಿದ್ದರು. ಹೀಗಾಗಿ, ಕೊಟ್ಟ ಮಾತಿನಂತೆ ರಿಷಿಕಾ, ಪ್ರಥಮ್ ಅವರ ಜೊತೆ ತಮ್ಮ ಕಾರಿನಲ್ಲಿ ಲಾಂಗ್ ಡ್ರೈವ್ ಹೋಗಿದ್ದಾರೆ.['ಮಜಾ ಟಾಕೀಸ್'ನಲ್ಲಿ ಲಾರ್ಡ್ ಪ್ರಥಮ್ ರವರ 13 ಲವ್ ಸ್ಟೋರಿ ಬಹಿರಂಗ.!]

ಅಷ್ಟಕ್ಕೂ, ರಿಷಿಕಾ ಹಾಗೂ ಪ್ರಥಮ್ ಮಧ್ಯೆ ನಡೆದಿದ್ದ ಒಪ್ಪಂದವೇನು? ಪ್ರಥಮ್ ಬಳಿ ರಿಷಿಕಾ ಯಾವ ವಿಷ್ಯದಲ್ಲಿ ಸೋತಿದ್ದರು? ಈಗ ಇವರಿಬ್ಬರು ಲಾಂಗ್ ಡ್ರೈವ್ ಎಲ್ಲಿಗೆ ಹೋಗಿದ್ದರು ಎಂಬುದರ ಕಂಪ್ಲೀಟ್ ಮಾಹಿತಿ ಇಲ್ಲಿದೆ ನೋಡಿ...

ಏನದು ಚಾಲೆಂಜ್?

'ಬಿಗ್ ಬಾಸ್ ಕನ್ನಡ 4'ಗೆ ಅತಿಥಿಯಾಗಿ ಹೋಗಿದ್ದ ನಟಿ ರಿಷಿಕಾ ಹಾಗೂ ಪ್ರಥಮ್ ಮಧ್ಯೆ ಒಂದು ಚಾಲೆಂಜ್ ಆಗಿತ್ತು. ರಿಷಿಕಾ ಅವರ ಸಹೋದರ ಆದಿತ್ಯ ಅಭಿನಯದ 'ಅಂಬಿ' ಹಾಗೂ 'ಡೆಡ್ಲಿ ಸೋಮ' ಚಿತ್ರಗಳಲ್ಲಿ ಯಾವುದು ಮೊದಲು ಬಂದಿದ್ದು ಎಂಬ ಪ್ರಶ್ನೆಗೆ ಇಬ್ಬರ ನಡುವೆ ಚಾಲೆಂಜ್ ಆಗಿತ್ತು.

ರಿಷಿಕಾ ವಾದ?

''ಆದಿತ್ಯ ಅಭಿನಯದ 'ಅಂಬಿ' ಚಿತ್ರ ಮೊದಲು ಬಂತು, ಆಮೇಲೆ 'ಡೆಡ್ಲಿ ಸೋಮ' ಚಿತ್ರ ಬಂತು'' ಎಂದು ರಿಷಿಕಾ ವಾದಿಸಿದ್ದರು.['ಮಜಾ ಟಾಕೀಸ್'ನಲ್ಲಿ 'ಬಿಗ್ ಬಾಸ್' ಸ್ಪರ್ಧಿಗಳ ಮಸ್ತ್ ಮಜಾ]

ಪ್ರಥಮ್ ವಾದ?

''ಆದಿತ್ಯ ಅಭಿನಯದ 'ಡೆಡ್ಲಿ ಸೋಮ' ಸಿನಿಮಾ ಮೊದಲು ಬಿಡುಗಡೆಯಾಗಿದ್ದು, ಆಮೇಲೆ 'ಅಂಬಿ' ಚಿತ್ರ ತೆರೆಕಂಡಿತ್ತು'' ಎಂದು ಪ್ರಥಮ್ ವಾದ ಮಾಡಿದ್ದರು.['ಭುವನ್-ಸಂಜನಾ ಮದುವೆ' ಖಂಡಿಸಿದ ಲವ್ವರ್ ಬಾಯ್ ಪ್ರಥಮ್.!]

ರಿಷಿಕಾ ಗೆದ್ದರೇ ಪ್ರಥಮ್ ಏನೂ ಮಾಡಬೇಕಿತ್ತು?

ಈ ಚಾಲೆಂಜ್ ನಲ್ಲಿ ರಿಷಿಕಾ ಗೆದ್ದರೇ, ರಿಷಿಕಾ ಅವರು ಕೇಳುವ ಹೋಟೆಲ್ ನಲ್ಲಿ ಪ್ರಥಮ್ ಊಟ ಕೊಡಿಸಿಬೇಕು ಎಂದು ನಟಿ ರಿಷಿಕಾ ಷರತ್ತು ಹಾಕಿದ್ದರು.

ಪ್ರಥಮ್ ಗೆದ್ದರೇ ರಿಷಿಕಾ ಏನೂ ಮಾಡಬೇಕಿತ್ತು?

ಒಂದು ಈ ಪಕ್ಷ ಈ ಚಾಲೆಂಜ್ ನಲ್ಲಿ ಪ್ರಥಮ್ ಗೆದ್ದರೇ, ರಿಷಿಕಾ ಅವರ ಜೊತೆ ಕಾರ್ ನಲ್ಲಿ ಒಂದು ಲಾಂಗ್ ಡ್ರೈವ್ ಹೋಗ್ಬೇಕು ಎಂದು ಪ್ರಥಮ್ ಬೇಡಿಕೆ ಇಟ್ಟಿದ್ದರು.

'ಅಂಬಿ' ಮೊದಲಾ? 'ಡೆಡ್ಲಿ ಸೋಮ' ಮೊದಲಾ?

ಈ ಚಾಲೆಂಜ್ ಗೆ ಕಿಚ್ಚ ಸುದೀಪ್ ಅವರು ಉತ್ತರ ಕೊಟ್ಟಿದ್ದರು. ಮೊದಲು 'ಡೆಡ್ಲಿ ಸೋಮ' ಸಿನಿಮಾ ಬಂತು ಆಮೇಲೆ 'ಅಂಬಿ' ಚಿತ್ರ ಬಂದಿದ್ದು ಎಂದು ಕಿಚ್ಚ ಫಲಿತಾಂಶ ಕೊಟ್ಟಿದ್ದರು.

ಚಾಲೆಂಜ್ ನಲ್ಲಿ ಗೆದ್ದಿದ್ದ ಪ್ರಥಮ್

ಈ ಮೂಲಕ ರಿಷಿಕಾ ಹಾಗೂ ಪ್ರಥಮ್ ಮಧ್ಯೆ ನಡೆದಿದ್ದ ಚಾಲೆಂಜ್ ನಲ್ಲಿ ಪ್ರಥಮ್ ಗೆದ್ದಿದ್ದರು. ಹೀಗಾಗಿ, ರಿಷಿಕಾ ಅವರ ಜೊತೆ ಲಾಂಗ್ ಡ್ರೈವ್ ಹೋಗುವ ಅವಕಾಶ ಪಡೆದುಕೊಂಡಿದ್ದರು.

ಲಾಂಗ್ ಡ್ರೈವ್ ಹೋದ ರಿಷಿಕಾ-ಪ್ರಥಮ್

ರಿಷಿಕಾ ಮತ್ತು ಪ್ರಥಮ್ ಚಾಲೆಂಜ್ ನಂತೆ ನಿನ್ನೆ (ಫೆಬ್ರವರಿ 8) ಇಬ್ಬರು ಕಾರಿನಲ್ಲಿ ಲಾಂಗ್ ಡ್ರೈವ್ ಹೋಗಿದ್ದರು.[ಲಾಂಗ್ ಡ್ರೈವ್ ವಿಡಿಯೋ ಇಲ್ಲಿದೆ ನೋಡಿ]

ಎಲ್ಲಿಗೆ ಹೋಗಿದ್ದರು ರಿಷಿಕಾ-ಪ್ರಥಮ್?

ರಿಷಿಕಾ-ಪ್ರಥಮ್ ಲಾಂಗ್ ಡ್ರೈವ್ ಹೋಗಿದ್ದನ್ನ ಸ್ವಷ್ಟ ಅವರೇ ಸ್ವಷ್ಟಪಡಿಸಿದ್ದರು. ಈ ಬಗ್ಗೆ ನಿನ್ನೆ ಇಬ್ಬರು ಫೇಸ್ ಬುಕ್ ನಲ್ಲಿ ಲೈವ್ ಚಾಟ್ ನಡೆಸಿದ್ದರು. ತಾವಿಬ್ಬರು ಮೈಸೂರಿಗೆ ಹೋಗುತ್ತಿರುವುದಾಗಿ ಹೇಳಿಕೊಂಡಿದ್ದರು.[ಲಾಂಗ್ ಡ್ರೈವ್ ವಿಡಿಯೋ ಇಲ್ಲಿದೆ]

ಮಾತು ತಪ್ಪದ ರಿಷಿಕಾ

'ಬಿಗ್ ಬಾಸ್' ಮನೆಯಲ್ಲಿ ಕೊಟ್ಟ ಮಾತಿನಂತೆ ರಿಷಿಕಾ ಅವರು ಪ್ರಥಮ್ ಅವರೊಂದಿಗೆ ಲಾಂಗ್ ಡ್ರೈವ್ ಹೋಗಿದ್ದಾರೆ. ಹೀಗಾಗಿ, ಮಾತು ತಪ್ಪದ ರಿಷಿಕಾ, ಪ್ರಥಮ್ ಅವರ ಆಸೆಯನ್ನ ಈಡೇರಿಸಿದ್ದಾರೆ.

English summary
Biggboss Winner Pratham's Wish to go on a long Drive is fulfilled. Yesterday (February 8th) Pratham Went to Long Drive Along With Actress Rishika. Watch Video.....

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada