»   » ಇದೇನಿದು 'ಒಳ್ಳೆ ಹುಡುಗ'ನ ಸುಳ್ಳಿನ ಪುರಾಣ?

ಇದೇನಿದು 'ಒಳ್ಳೆ ಹುಡುಗ'ನ ಸುಳ್ಳಿನ ಪುರಾಣ?

Posted By:
Subscribe to Filmibeat Kannada

ಒಳ್ಳೆ ಹುಡುಗ ಪ್ರಥಮ್......ತಾನು ಮಾಡುವ ಒಳ್ಳೆ ಕೆಲಸಗಳನ್ನ ತಮ್ಮ ಫೇಸ್ ಬುಕ್ ನಲ್ಲಿ ಫಟ್ ಅಂತ ಅಪ್ ಡೇಟ್ ಮಾಡುವ ವ್ಯಕ್ತಿತ್ವ. ಅದೇ ರೀತಿ ಇತ್ತೀಚೆಗಷ್ಟೇ 'ಬಚ್ಚನ್' ಸಿನಿಮಾ ನಿರ್ಮಾಪಕರ ಜೊತೆ ನನ್ನ ಮುಂದಿನ ಸಿನಿಮಾ ಎಂದು ತಮ್ಮ ಫೇಸ್ ಬುಕ್ ನಲ್ಲಿ ಸ್ಟೇಟಸ್ ಹಾಕಿಕೊಂಡಿದ್ದರು.

ಈ ಸುದ್ದಿಯನ್ನ ಅಲ್ಲೆಗೆಳೆದಿರುವ ನಿರ್ಮಾಪಕ ಉದಯ್ ಮೆಹ್ತಾ ಪ್ರಥಮ್ ಜೊತೆ ನಾನು ಸಿನಿಮಾ ಮಾಡುತ್ತಿಲ್ಲವೆಂದಿದ್ದಾರೆ. ಆದ್ರೆ, ಪ್ರಥಮ್, 'ಬಚ್ಚನ್' ನಿರ್ಮಾಪಕ ಉದಯ್ ಮೆಹ್ತಾ ಹಾಗೂ ಪ್ರಥಮ್ ಇಬ್ಬರು ಒಟ್ಟಿಗೆ ಇರುವ ಫೋಟೋ ಒಂದನ್ನ ಹಾಕಿ (ಇವರ ಕೈಯಲ್ಲೊಂದು ಫೈಲ್ ಇದೆ) ಉದಯ್ ಮೆಹ್ತಾ ಅವರ ಜೊತೆ ಸಿನಿಮಾ ಮಾಡುತ್ತಿದ್ದೇನೆ ಎಂದಿದ್ದಾರೆ.

ಅಷ್ಟಕ್ಕೂ, ಬಿಗ್ ಬಾಸ್ ಪ್ರಥಮ್ ಈ ರೀತಿಯಾದ ಸ್ಟೇಟಸ್ ಹಾಕಿಕೊಂಡಿರುವುದು ಯಾಕೆ? ಉದಯ್ ಮೆಹ್ತಾ ಅವರು ಏನಂದ್ರು? ಇಲ್ಲಿದೆ ನೋಡಿ

ಪ್ರಥಮ್ ಹಾಕಿರುವ ಸ್ಟೇಟಸ್

''ಬಚ್ಚ ಹುಡುಗ ನಾನು... "ಬಚ್ಚನ್" ಸಿನಿಮಾ producer ಉದಯ್ ಮೆಹ್ತಾ ಸರ್ ಬಂದು "ಪ್ರಥಮ್ ನೀವಂದ್ರೆ ಬಹಳ ಇಷ್ಟ, ನಿಮಗೋಸ್ಕರ ಕತೆ ಮಾಡ್ಸಿದ್ದೀನಿ.big budget ಸಿನಿಮಾ ಇದು,ನೀವೇ ಮಾಡ್ಬೇಕು" ಅಂದ್ರೆ ಖುಷಿ ತಡೆಯೋಕಾಗುತ್ತಾ? ಹೆಣ್ಣು ಕೊಟ್ಟ ಮಾವ, ಅದ್ಭುತವಾದ ಕತೆ ಕೊಟ್ಟ producer ಇಬ್ಬರು ದೇವರ ಸಮಾನ..... ದೇವರಿಗೆ ಒಂದು ನಮಸ್ಕಾರ....and it's officially confirmed.... another extraordinary script from the makers of bacchan,is ma next project.... ಇರಲಿ ಈ ಪ್ರೀತಿ ಹೀಗೆಯೇ.... ಹೆಮ್ಮೆ & ಖುಷಿ ಪಡಲು ಇದಕ್ಕಿಂತ ಕಾರಣ ಬೇಕೆ?'' ಎಂದು ಪೋಸ್ಟ್ ಹಾಕಿದ್ದರು.

'ಸುಳ್ಳು' ಎಂದ ಉದಯ್ ಮೆಹ್ತಾ

ಇದು ಸುಳ್ಳು ಸುದ್ದಿ, ಪ್ರಥಮ್ ಜೊತೆ ನಾನು ಸಿನಿಮಾ ಮಾಡುತ್ತಿಲ್ಲ ಎಂದು ಬಚ್ಚನ್ ಚಿತ್ರದ ನಿರ್ಮಾಪಕ ಉದಯ್ ಮೆಹ್ತಾ ಅವರು ನಮ್ಮ ಫಿಲ್ಮಿ ಬೀಟ್ ಗೆ ಖಚಿತ ಪಡಿಸಿದ್ದಾರೆ.

'ಬಚ್ಚನ್' ನಿರ್ಮಾಪಕರ ಜೊತೆ ಪ್ರಥಮ್ ಮುಂದಿನ ಸಿನಿಮಾ

ಮೆಹ್ತಾ ಏನಂದ್ರು?

''ನನ್ನ ಬಳಿ ನಿರ್ಮಾಪಕರಿದ್ದಾರೆ, ಯಾವುದಾದರೂ ಕಥೆ ಇದ್ದರೇ ಹೇಳಿ ಸಿನಿಮಾ ಮಾಡಲು ಎಂದು ಪ್ರಥಮ್ ಕೇಳಿದರು. ಹೀಗಾಗಿ, ಸಮಾರು 6 ವರ್ಷಗಳ ಹಿಂದೆ ಸಿದ್ದ ಮಾಡಿಕೊಂಡಿದ್ದ ಒಂದು ಸ್ಕ್ರಿಪ್ಟ್ ಇತ್ತು. ಅದು ಹೊಸಬರಿಗೆ ಸೂಕ್ತವಾಗುತ್ತಿತ್ತು. ಈ ಸ್ಕ್ರಿಪ್ಟ್ ನ್ನ ಪ್ರಥಮ್ ನೀಡಿದ್ದೇನೆ ಹೊರತು ಸಿನಿಮಾ ನಿರ್ಮಾಣ ಮಾಡುತ್ತಿಲ್ಲ. ಆದ್ರೆ, ಪ್ರಥಮ್ ಯಾಕೆ ಹೀಗೆ ಹೇಳಿಕೊಳ್ಳುತ್ತಿದ್ದಾರೋ ಗೊತ್ತಿಲ್ಲ'' ಎಂದು ಉದಯ್ ಮೆಹ್ತಾ ಸ್ಪಷ್ಟಪಡಿಸಿದ್ದಾರೆ.

ಪ್ರಥಮ್ ಯಾಕೆ ಹೀಗೆ?

ಒಳ್ಳೆ ಹುಡುಗ ಅಂತಹ ಬಿಂಬಿಸಿಕೊಳ್ಳುವ ಪ್ರಥಮ್ ಯಾಕೆ ಈ ಹೀಗೆ ಎಂಬ ಸಂಶಯ ಈಗ ಕಾಡುತ್ತಿದೆ. ಈಗ ಬೇರೆ ಭುವನ್-ಸಂಜನಾ ವಿಷ್ಯದಲ್ಲಿ ಮತ್ತೆ ಕಿರಿಕ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಅದೇನೆ ಇರಲಿ, ಇಷ್ಟು ದಿನ ಪ್ರಥಮ್ ಅವರು ಹಾಕುತ್ತಿದ್ದ ಫೇಸ್ ಬುಕ್ ಸ್ಟೇಟಸ್ ಗಳ ಮೇಲೆ ಜನರಿಗೆ ಒಂದು ರೀತಿಯ ನಂಬಿಕೆ ಇತ್ತು. ಬಹುಶಃ ಈ ಘಟನೆಯಿಂದ ಪ್ರಥಮ್ ಅವರ ಫೇಸ್ ಬುಕ್ ಸ್ಟೇಟಸ್ ಗಳನ್ನ ನಂಬುವುದು ಕಷ್ಟವಾಗಬಹುದು.

English summary
I am Not Doing Film With Pratham Says Bachchan Producer Uday Mehtha.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada