»   » ಸಿನಿಮಾ ಅಷ್ಟೇ ಅಲ್ಲ ನಿಜವಾಗಿಯೂ 'MLA' ಆಗ್ತಾರಂತೆ ಪ್ರಥಮ್

ಸಿನಿಮಾ ಅಷ್ಟೇ ಅಲ್ಲ ನಿಜವಾಗಿಯೂ 'MLA' ಆಗ್ತಾರಂತೆ ಪ್ರಥಮ್

Posted By:
Subscribe to Filmibeat Kannada

ರಿಯಾಲಿಟಿ ಶೋ ನಿಂದ ಪ್ರಖ್ಯಾತಿ ಪಡೆದುಕೊಂಡ ನಟ ಹಾಗೂ ನಿರ್ದೇಶಕ ಪ್ರಥಮ್ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿ ಆಗುತ್ತಲೇ ಇರುತ್ತಾರೆ. ಇತ್ತೀಚಿಗಷ್ಟೇ ದೀಪಕ್ ರಾವ್ ಮನೆಗೆ ಭೇಟಿ ನೀಡಿದ್ದ ಪ್ರಥಮ್ ಈಗ ರಾಜಕೀಯಕ್ಕೆ ಬರುವುದರ ಬಗ್ಗೆ ಸುಳಿವು ಕೊಟ್ಟಿದ್ದಾರೆ.

ಪ್ರಥಮ್ ಅವರ ಸ್ವಂತ ಊರಾದ ಹನೂರನ್ನ ತಾಲ್ಲೂಕು ಎಂದು ಘೋಷಣೆ ಆಗಿರುವ ಸಂದರ್ಭದಲ್ಲಿ ಸಿ ಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ಎಂ ಎಲ್ ಎ ಸಿನಿಮಾದಲ್ಲಿ ಅಭಿನಯಿಸುವುದು ಮಾತ್ರವಲ್ಲ ನಿಜ ಜೀವನದಲ್ಲೂ ಎಂ ಎಲ್ ಎ ಆಗುವ ಆಸೆಯನ್ನ ಪ್ರಥಮ್ ವ್ಯಕ್ತ ಪಡಿಸಿದ್ದಾರೆ.

Pratham contesting for election from his hometown Hanover

ತಮ್ಮ ಫೇಸ್ ಬುಕ್ ನಲ್ಲಿ "Love u siddu boss ಹೊಸ ತಾಲೂಕ್ಕಿನ ಹೊಸ MLA ನಾನಾಗ್ಬೇಕು ಅಂತ ತುಂಬಾ ಆಸೆ ಇದೆ. ದಯವಿಟ್ಟು ನಿಮ್ಮ ಪಕ್ಷದಿಂದ ಯಾರಿಗೂ ಟಿಕೇಟ್ ಕೊಡ್ಬೇಡಿ. ಕೊಟ್ರೂ ಅವರು ಗೆಲ್ಲೋದು ಕಷ್ಟ. ಹೆಂಗೋ ಈ ಸಲ ಎಲೆಕ್ಷನ್ ಲಿ ಬೇರೆ ಪಕ್ಷದಿಂದನೋ, ಅಥವಾ independent ಆಗೋ ನಿಂತ್ಕೊಂಡು ಗೆದ್ರೂ ಗೆದ್ದು ಬಿಡ್ತೀನಿ. ಹೊಸ ತಾಲ್ಲೂಕಿನ ಹೊಸ MLA ನಾನೇ ಆಗ್ತೀನಿ. ಜೊತೆಗೆ ಕೆಲಸನೂ ಮಾಡ್ತೀನಿ. ಪ್ಲೀಸ್ ಮನಸ್ಸು ಮಾಡಿ ಬಾಸ್" ಎಂದು ಬರೆದಿದ್ದಾರೆ.

Pratham contesting for election from his hometown Hanover

ಸದ್ಯ ಏಳು ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ಪ್ರಥಮ್ ರಾಜಕೀಯದಲ್ಲೂ ತಮ್ಮನ್ನ ತೊಡಗಿಸಿಕೊಳ್ಳುವ ಮನಸ್ಸು ಮಾಡಿದ್ದಾರೆ. ಸಿ ಎಂ ಅವರ ಬಳಿ ಟಿಕೇಟ್ ಕೇಳುವುದರ ಜೊತೆಗೆ ನೀವು ಟಿಕೇಟ್ ಕೊಟ್ಟಿಲ್ಲ ಅಂದರೂ ಸ್ವತಂತ್ರವಾಗಿ ಚುನಾವಣೆಗೆ ನಿಂತು ಗೆಲ್ಲುತ್ತೇನೆ ಎಂದು ತಿಳಿಸಿದ್ದಾರೆ.

English summary
Actor Pratham contesting for election from his hometown Hanur, Chamarajanagar. Pratham appealed to CM Siddaramaiah to give ticket for MLA seat.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X