»   » ರಾಜರಥ ಚಿತ್ರತಂಡದ ವಿರುದ್ದ ಕೆಂಡಕಾರಿದ ಪ್ರಥಮ್

ರಾಜರಥ ಚಿತ್ರತಂಡದ ವಿರುದ್ದ ಕೆಂಡಕಾರಿದ ಪ್ರಥಮ್

Posted By:
Subscribe to Filmibeat Kannada
ರಾಜರಥ ಚಿತ್ರತಂಡದ ವಿರುದ್ದ ಕೆಂಡಕಾರಿದ ಪ್ರಥಮ್ | Oneindia Kannada

ನಿನ್ನೆಯಿಂದಲೂ ಸಾಮಾಜಿಕ ಜಾಲತಾಣದಲ್ಲಿ ಅತೀ ಹೆಚ್ಚು ಚರ್ಚೆ ಆಗುತ್ತಿರುವ ವಿಚಾರ ಎಂದರೆ ಬಂಡಾರಿ ಬ್ರದರ್ಸ್ ತಮ್ಮ 'ರಾಜರಥ' ಸಿನಿಮಾ ನೋಡದ ಪ್ರೇಕ್ಷಕರು ಕಚಡಾ ನನ್ ಮಕ್ಕಳು ಎಂದು ಹೇಳಿಕೆ ನೀಡಿರುವ ಬಗ್ಗೆ. ಆರ್ ಜೆ ರಶ್ಮಿ ನಡೆಸಿಕೊಂಡುವ ಕಾರ್ಯಕ್ರಮದಲ್ಲಿ ಸಿನಿಮಾದ ನಾಯಕ ನಿರೂಪ್ ಬಂಡಾರಿ, ಅನೂಪ್ ಬಂಡಾರಿ ಹಾಗೂ ಅವಂತಿಕಾ ಶೆಟ್ಟಿ ಮೂವರು ಕೂಡ ಇದೇ ರೀತಿಯಲ್ಲಿ ಹೇಳಿಕೆ ನೀಡಿರುವುದು ಸಿನಿಪ್ರಿಯರ ಕೋಪಕ್ಕೆ ಕಾರಣವಾಗಿದೆ.

ಈ ಬಗ್ಗೆ ನಟ, ನಿರ್ದೇಶಕ ಪ್ರಥಮ್ ಕೂಡ ಕೋಪಗೊಂಡಿದ್ದಾರೆ. "ರಾಜರಥ ಸಿನಿಮಾ ಫಸ್ಟ್ ಡೇ ಫಸ್ಟ್ ಶೋ ನೋಡುವುದಕ್ಕೆ ಮುಖ್ಯ ಕಾರಣ ಅಪ್ಪು ಬಾಸ್ ವಾಯ್ಸ್. . ಮಿಸ್ಟರ್ ಅನೂಪ್ ಬಂಡಾರಿ ನಿಮ್ಮ ಮೊದಲ ಸಿನಿಮಾ ಗೆಲ್ಲೋಕೆ ಮುಖ್ಯ ಕಾರಣ ಏನ್ ಗೊತ್ತಾ? ಬಾಹುಬಲಿ ಎದುರು ನಮ್ಮ ಸಿನಿಮಾ ಗೆಲ್ಲಿಸಿಕೊಳ್ಳೋಣ ಎಂಬ ಕನ್ನಡಿಗರ ವಿಶಾಲ ಮನಸ್ಸು, ಧೃಡ ನಿಲುವು".

ಭಂಡಾರಿ ಬ್ರದರ್ಸ್ ವಿವಾದ : 'ರಾಜರಥ' ಚಿತ್ರ ನೋಡದಿದ್ದವರು 'ಕಚಡ ಲೋಫರ್ ನನ್ ಮಕ್ಳು'

Pratham criticizes Kannada Director Anup Bhandaris statement

"ನೀವು ಹೇಳಿದ್ದು tongue slip ಅನ್ನೋದಾದರೆ ಅದನ್ನ ಪುನರುಚ್ಛರಿಸಿದ ಜಗನ್ಮಾತೆ ಅವಂತಿಕಾ ಶೆಟ್ಟಿ ನೀವಾದ್ರೂ ತಿದ್ದಬಹುದಿತ್ತು. ಅಮ್ಮಣ್ಣಿ ಅದನ್ನೇ ಪುನರುಚ್ಛರಿಸಿದ್ರಿ. ದೊಡ್ಡ ಮನುಷ್ಯ ನಿರೂಪ್ ಬಂಡಾರಿ ನಿಮದಂತೂ ಶುದ್ಧ ಉದ್ಧಟತನ."#ಕಚಡಾ_ಲೋಫರ್_ನನ್_ಮಕ್ಳಾ" ನಿಮ್ಮ ಸಿನಿಮಾ ನೋಡದಿದ್ರೆ?"

"ಆಸ್ಕರ್ ಕೊಡಬೇಕು ಗುರು ನಿಮಗೆ. ಇದು ಖಂಡಿತಾ tongue slip ಅಲ್ಲ. ಉದ್ದೇಶ ಪೂರಿತವಾದದ್ದೇ ಅಂತ ಸ್ಪಷ್ಟವಾಗಿ ಅನಿಸುತ್ತೆ.ನಿಜವಾಗಿಯೂ ನನಗೆ ರಂಗಿತರಂಗ ಗಿಂತ ಈ ಸಿನಿಮಾ ಕಾಮಿಡಿ ಇಷ್ಟ ಆಯ್ತು. ಎರಡನೇ ಸಲ ನೋಡೋಣ ಅಂಕೊಂಡಿದ್ದೆ. ಬಹಳ ಬೇಸರ ಆಯ್ತು. ಜನಗಳನ್ನ ಪ್ರೀತಿಯಿಂದ ಅಭಿಮಾನದಿಂದ ಗೆಲ್ಲಿ.ಈ ರೀತಿ ಕ್ಷುಲ್ಲಕ ಮಾತಿನಿಂದ ನೋಯಿಸಬೇಡಿ " ಎಂದು ಪ್ರಥಮ್ ತಮ್ಮ ಫೇಸ್ ಬುಕ್ ನಲ್ಲಿ ಸ್ಟೇಟಸ್ ಹಾಕಿದ್ದಾರೆ'.

Pratham criticizes Kannada Director Anup Bhandaris statement

ಕೇವಲ ಪ್ರಥಮ್ ಮಾತ್ರವಲ್ಲ, ಸಿನಿಮಾರಂಗದ ಸಾಕಷ್ಟು ಜನರು ಹಾಗೂ ಪ್ರೇಕ್ಷಕರು ಬಂಡಾರಿ ಬ್ರದರ್ಸ್ ವಿರುದ್ದ ಕೋಪಗೊಂಡಿದ್ದಾರೆ. ಮಾಡಿರುವ ಒಂದು ಚಿತ್ರಕ್ಕೆ ಇಷ್ಟೆಲ್ಲಾ ಮಾತನಾಡುವುದು ತಪ್ಪು ಎಂದಿದ್ದಾರೆ.

English summary
Kannada Actor Pratham has taken his Facebook page to criticize Kannada director Anup Bhandari, Actor Nirup Bandari and Avantika Shetty's statement on Rajaratha's audience.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X