»   » ಸೇಡಿಗೆ ಸೇಡು: ಭುವನ್ ವಿರುದ್ಧ ಪ್ರಥಮ್ ಪ್ರತಿದೂರು

ಸೇಡಿಗೆ ಸೇಡು: ಭುವನ್ ವಿರುದ್ಧ ಪ್ರಥಮ್ ಪ್ರತಿದೂರು

Posted By:
Subscribe to Filmibeat Kannada

'ನಾನು ಮತ್ತು ಸಂಜು' ಧಾರಾವಾಹಿ ಚಿತ್ರೀಕರಣ ವೇಳೆ ನಟ ಭುವನ್ ತೊಡೆಯನ್ನ ಪ್ರಥಮ್ ಕಚ್ಚಿದ್ದರು ಎಂದು ಭುವನ್ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈಗ ಭುವನ್ ವಿರುದ್ಧವೇ ಪ್ರಥಮ್ ಪ್ರತಿದೂರು ದಾಖಲಿಸಿದ್ದಾರೆ.

''ನನ್ನ ಕುತ್ತಿಗೆಗೆ ಹೊಡೆದು ಅವಾಚ್ಯ ಶಬ್ದಗಳಿಂದ ಭುವನ್ ನಿಂದಿಸಿದ್ದಾನೆ. ನೀನು ಎಲ್ಲೋ ಹೋಗ್ತೀಯಾ, ನಿನ್ನನ್ನು ಕೊಲ್ಲದೇ ಬಿಡಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾನೆ. ಹೀಗಾಗಿ ಭುವನ್ ಮೇಲೆ ಕಾನೂನಿನ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರಥಮ್ ದೂರಿನಲ್ಲಿ ತಿಳಿಸಿದ್ದಾರೆ.

ಭುವನ್ ಮೇಲೆ ಪ್ರಥಮ್ ಹಲ್ಲೆ: ದೂರು ದಾಖಲು

Pratham Files Complaint Against Bhuvan

ಇದಕ್ಕು ಮೊದಲು ಪ್ರಥಮ್ ಅವರ ವಿರುದ್ಧ ದೈಹಿಕ ಹಲ್ಲೆ ಪ್ರಕರಣವನ್ನ ಭುವನ್ ದಾಖಲಿಸಿದ್ದರು. ಈ ಸಂಬಂಧ ಪ್ರಥಮ್ ನ್ಯಾಯಾಲಯದಲ್ಲಿ ನಿರೀಕ್ಷಣ ಜಾಮೀನು ಕೂಡ ಪಡೆದುಕೊಂಡಿದ್ದರು. ಆದ್ರೆ, ಇಂದು ತಲಘಟ್ಟಪುರ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ.

ಬಿಗ್ ಬಾಸ್ ಪ್ರಥಮ್ ಗೆ ಸಿಕ್ತು ಷರತ್ತುಬದ್ಧ ಜಾಮೀನು

ಸದ್ಯ, ಭುವನ್ ಮತ್ತು ಪ್ರಥಮ್ ಇಬ್ಬರ ದೂರು, ಪ್ರತಿದೂರನ್ನ ಪೊಲೀಸರು ದಾಖಲಿಸಿಕೊಂಡಿದ್ದಾರೆ. ತನಿಖೆ ಕೈಗೊಂಡಿರುವ ಪೊಲೀಸರು ಎಲ್ಲ ರೀತಿಯಲ್ಲೂ ವಿಚಾರಣೆ ನಡೆಸುತ್ತಿದ್ದಾರೆ. ಈ ಮಧ್ಯೆ ಜುಲೈ 31 ರಂದು ಪ್ರಥಮ್ ನ್ಯಾಯಾಲಯಕ್ಕೆ ಹಾಜರಾಗಬೇಕಿದೆ.

ತೊಡೆ ಕಚ್ಚಿದ್ದ 'ಬಿಗ್ ಬಾಸ್' ಪ್ರಥಮ್ ನ್ಯಾಯಾಲಯಕ್ಕೆ ಹಾಜರು

English summary
Bigg Boss Pratham Files Complaint Against Co Star Bhuvan at Thalagatta Pura Police Station.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada