»   » ಬಿಟ್ಟಿ ಪ್ರಚಾರಕ್ಕಾಗಿ ನಡಿತಾ ಪ್ರಥಮ್-ಭುವನ್ 'ತೊಡೆ ಕಾದಾಟ'?

ಬಿಟ್ಟಿ ಪ್ರಚಾರಕ್ಕಾಗಿ ನಡಿತಾ ಪ್ರಥಮ್-ಭುವನ್ 'ತೊಡೆ ಕಾದಾಟ'?

Posted By:
Subscribe to Filmibeat Kannada

'ಬಿಗ್ ಬಾಸ್' ಖ್ಯಾತಿಯ ಪ್ರಥಮ್ ಮತ್ತು ಭುವನ್ ನಡುವೆ ದೊಡ್ಡ ಗಲಾಟೆ ನಡೆದಿದೆ. ಪ್ರಥಮ್ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಭುವನ್ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಬಿಗ್ ಬಾಸ್ ಪ್ರಥಮ್ ಮತ್ತು ಭುವನ್ ನಡುವೆ ಗಲಾಟೆ..!

ಶನಿವಾರ ಮಧ್ಯಾಹ್ನ 'ಸಂಜು ಮತ್ತು ನಾನು' ಧಾರಾವಾಹಿಯ ಚಿತ್ರೀಕರಣದ ವೇಳೆ ಈ ಘಟನೆ ನಡೆದಿದೆ. ಪ್ರಥಮ್ ತಮ್ಮ ಸಹನಟಿ ಸಂಜನಾ ಬಗ್ಗೆ ಅಸಭ್ಯವಾಗಿ ಮಾತನಾಡಿದ್ದು, ಭುವನ್ ಮತ್ತು ಪ್ರಥಮ್ ನಡುವಿನ ಕಿತ್ತಾಟಕ್ಕೆ ಕಾರಣ ಅಂತ ಹೇಳಲಾಗಿದೆ. ಈ ಗಲಾಟೆಯಲ್ಲಿ ತನ್ನ ತೋಡೆಯನ್ನು ಪ್ರಥಮ್ ಕಚ್ಚಿದ್ದಾರೆ ಎಂದು ಭುವನ್ ಆರೋಪಿಸಿದ್ದಾರೆ.

ಭುವನ್ ಮೇಲೆ ಪ್ರಥಮ್ ಹಲ್ಲೆ: ದೂರು ದಾಖಲು

ಆದರೆ ಈಗ ಪ್ರಥಮ್ ಇಡೀ ಘಟನೆಯ ಬಗ್ಗೆ ತಮ್ಮ ಸ್ಪಷ್ಟನೆಯನ್ನು ನೀಡಿದ್ದಾರೆ. ಘಟನೆಯ ಬಗ್ಗೆ ಪ್ರಥಮ್ ಹೇಳಿಕೆ ಮುಂದಿದೆ ಓದಿ..

ನಾನು ಸಸ್ಯಹಾರಿ

''ಭುವನ್ ಏನಪ್ಪ ನಿನ್ನ ಪ್ರಾಬ್ಲಮ್? ಒಳ್ಳೆ ಬುದ್ಧಿ ಕಲಿಯಪ್ಪ...ನಾನು ಸಂಪೂರ್ಣ ಸಸ್ಯಹಾರಿ. ನಿನ್ನ ಮಾಂಸದ ಮೇಲೆ ಆಸೆ ಇಲ್ಲಪ್ಪ.'' - ಪ್ರಥಮ್

ನಾನು ದೂರು ನೀಡುತ್ತೇನೆ

''ನೀನು ರೂಮ್ ನಲ್ಲಿ ಸೇರಿಕೊಂಡು ಏನೇನೋ ಮಾಡ್ಕೊಂಡು ನನ್ನ ಮೇಲೆ ಎಗರಾಡಬೇಡಪ್ಪ. ಮೊದಲು ಕೈ ಮಾಡಿದ್ದು ನೀನು. ನಾನು ಪೊಲೀಸ್ ಕಂಪ್ಲೆಂಟ್ ಕೊಡಲಿದ್ದೇನೆ. ಶುಭವಾಗಲಿ ನಿನ್ನ ಫ್ಯೂಚರ್ ಜರ್ನಿಗೆ'' - ಪ್ರಥಮ್

ಪ್ರಚಾರದ ಹುಚ್ಚು

''ಭುವನ್ ಅವರಿಗೆ ಪ್ರಚಾರದ ಹುಚ್ಚು. ಆದರೆ ಒಂದು ಸುಳ್ಳು ಆರೋಪ ಮಾಡುವುದರಿಂದ ಏನು ಆಗಲ್ಲ. ಅದರಿಂದ ಎರಡು ದಿನ ಸುದ್ದಿ ಆಗಬಹುದು ಅಷ್ಟೆ.'' - ಪ್ರಥಮ್

ಎಲ್ಲಿ ಕಚ್ಚಿಸಿಕೊಂಡೆಯೋ

''ನೀನು ಯಾವ ನಾಯಿ ಹತ್ತಿರ ಕಚ್ಚಿಸಿಕೊಂಡೆಯೋ ಯಾವ ಹಾವು ಕಚ್ಚಿತೊ ನನಗೆ ಗೊತ್ತಿಲ್ಲ.'' - ಪ್ರಥಮ್

ಭುವನ್ ಆರೋಪ

''ಪ್ರಥಮ್ ಕಾರಣ ಇಲ್ಲದೆ ಸಂಜನಾ ಬಗ್ಗೆ ತುಂಬ ಕೆಟ್ಟದಾಗಿ ಮಾತನಾಡಿದ್ದ. ಆದರೂ ಸಂಜನಾ ಸುಮ್ಮನೆ ಇದ್ದರು, ಅದು ತಪ್ಪು. ಒಬ್ಬ ಹೆಣ್ಣೆಗೆ ಹೀಗೆ ಮಾತನಾಡಬೇಡಿ ಅಂತ ಹೇಳಿದೆ. ನಂತರ ಸುಮ್ಮನೆ ನನ್ನ ತೊಡೆಗೆ ಕಚ್ಚಿ ಹಲ್ಲೆ ನಡೆಸಿದ್ದರು.'' - ಭುವನ್

ಪ್ರಚಾರಕ್ಕೆ ಮಾಡಿದ್ರಾ ?

ಭುವನ್ ಇದನ್ನು ಪ್ರಚಾರಕ್ಕೆ ಮಾಡಿದ್ದಾರೆ ಅಂತ ಪ್ರಥಮ್ ಆರೋಪಿಸಿದ್ದಾರೆ. ಜೊತೆಗೆ ಬಿಟ್ಟಿ ಪ್ರಚಾರಕ್ಕೆ ಪ್ರಥಮ್ ಮತ್ತು ಭುವನ್ ಇಷ್ಟೆಲ್ಲ ಮಾಡಿದರಾ ಎಂಬ ಪ್ರಶ್ನೆ ಕೂಡ ಈಗ ಸೃಷ್ಟಿ ಆಗಿದೆ.

English summary
Bigg Boss Pratham Gave clarity about Bhuvan Controversy.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada