twitter
    For Quick Alerts
    ALLOW NOTIFICATIONS  
    For Daily Alerts

    ಹೊಸ ಸರ್ಕಾರಕ್ಕೆ ಲಾರ್ಡ್ ಪ್ರಥಮ್ ಮನವಿ

    By Pavithra
    |

    Recommended Video

    ಮೆಚ್ಚುವಂತ ಮಾತನಾಡಿದ್ದಾರೆ ಒಳ್ಳೆ ಹುಡ್ಗ ಪ್ರಥಮ್ | Filmibeat Kannada

    ನಿನ್ನೆಯಷ್ಟೇ ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರ ಬಿದ್ದಿದೆ ಸರ್ಕಾರ ರಚನೆ ಯಾರು ಮಾಡುತ್ತಾರೆ ಎನ್ನುವುದು ಇನ್ನೂ ಕೂಡ ನಿರ್ದಿಷ್ಟವಾಗಿ ಖಚಿತವಾಗಿಲ್ಲ .ಆದರೆ ಹೊಸ ಸರ್ಕಾರಕ್ಕೆ ರಚನೆ ಆಗುವ ಮುನ್ನವೇ ನಟ ಹಾಗೂ ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಹೊಸ ಸರ್ಕಾರಕ್ಕೆ ಒಂದು ಮನವಿ ಇಟ್ಟಿದ್ದಾರೆ .

    ಚುನಾವಣೆಯಲ್ಲಿ ಯಾರೇ ಗೆದ್ದರೂ ಖುಷಿ ಎಂದಿದ್ದ ಪ್ರಥಮ್ ಸರ್ಕಾರ ರಚನೆಗೂ ಮುನ್ನವೇ ಮಾಡಿರುವ ಮನವಿ ಚಿತ್ರರಂಗಕ್ಕೆ ಸಂಬಂಧಪಟ್ಟದ್ದು ಎನ್ನುವುದು ವಿಶೇಷ. ನಿನ್ನೆ ಅಷ್ಟೇ ಹಿರಿಯ ಕಲಾವಿದರಾದ ಅಕ್ಕಿ ಚನ್ನಬಸಪ್ಪನವರು ನಿಧನರಾದರು. ಕೊನೆಯಕಾಲದಲ್ಲಿ ಯಾರೂ ಆಶ್ರಯವಿಲ್ಲದೆ ಅನಾಥಾಶ್ರಮದಲ್ಲಿ ಅಕ್ಕಿ ಚೆನ್ನಬಸಪ್ಪ ತಮ್ಮ ಕೊನೆಯುಸಿರೆಳೆದರು.

    'ಎಂಎಲ್ಎ' ಬೆಂಬಲಕ್ಕೆ ನಿಂತ ಚಾಲೆಂಜಿಂಗ್ ಸ್ಟಾರ್ ದರ್ಶನ್'ಎಂಎಲ್ಎ' ಬೆಂಬಲಕ್ಕೆ ನಿಂತ ಚಾಲೆಂಜಿಂಗ್ ಸ್ಟಾರ್ ದರ್ಶನ್

    ಇದರಿಂದ ಬೇಸರಗೊಂಡ ಪ್ರಥಮ್ "ತುಂಬಾ ಬೇಜಾರಾಗುತ್ತೆ ಸರ್ಕಾರ ಹಿರಿಯ ಕಲಾವಿದರ ರಕ್ಷಣೆಗೆ ಏನಾದರೂ ಮಾಡಲೇಬೇಕು. ನಾವಂತೂ ಇಲ್ಲೇ ಇರ್ತೀನಿ ಒದ್ದಾಡಿಕೊಂಡು ಸಾಯ್ತೀನಿ ನಮ್ಮ ಕರ್ಮ ಇದು. ಆದರೆ ಹಿರಿಯ ರಂಗಭೂಮಿ ಕಲಾವಿದರ ಪಾಡೇನು ದಯವಿಟ್ಟು ಯಾವುದೇ ಸರ್ಕಾರ ಬರಲಿ ಇಂತಹ ಕಲಾವಿದರ ಕೊನೆ ದಿನಗಳಲ್ಲಿ ನೆಮ್ಮದಿಯಾಗಿ ಜೀವಿಸಲು ನೆರವಾಗಿ" ಎಂದು ಮನವಿ ಮಾಡಿಕೊಂಡಿದ್ದಾರೆ .

    Pratham has made an appeal in front of the states new government

    ಚಿತ್ರರಂಗದಲ್ಲಿ ಇದು ಮೊದಲೇನಲ್ಲ ಹಿರಿಯ ನಟ‌ ಸುದರ್ಶನ್ ಅವರು ನಿಧನರಾದಾಗಲೂ ಇದೇ ಪರಿಸ್ಥಿತಿ ‌ಎದುರಾಗಿತ್ತು. ಆಗ‌ ಕಲಾವಿದರೆಲ್ಲರು ಸೇರಿ ಅಂತ್ಯಕ್ರಿಯೆಗೆ ನೆರವಾಗಿದ್ದರು. ಆದರೆ ಇಂತಹ ಪರಿಸ್ಥಿತಿ ಪದೇ ಪದೇ ಎದುರಾಗುತ್ತಿದೆ.

    ಸದ್ಯ ಪ್ರಥಮ್ ಮಾಡಿರುವ ಈ ಮನವಿ ನಿಜಕ್ಕೂ ಸಿನಿಮಾರಂಗದವರು ಮೆಚ್ಚಲೇ ಬೇಕಾಗಿರುವುದು. ಆದರೆ ಈ ಮನವಿಗೆ ಚಿತ್ರರಂಗದ ಎಲ್ಲರೂ ಒಕ್ಕೊರಲಿನಿಂದ ಕೈ ಜೋಡಿಸಬೇಕಾಗಿದೆ. ಆಗ‌ ಮಾತ್ರ ಸರ್ಕಾರ ಈ ಬಗ್ಗೆ ಗಮನಹರಿಸಲು ‌ಚಿಂತನೆ ನಡೆಸುತ್ತೆ.

    ಕಾಪ್ಟರ್ ನಲ್ಲಿ ಬಂದಿಳಿದ ಬಿಗ್ ಬಾಸ್ ಪ್ರಥಮ್ಕಾಪ್ಟರ್ ನಲ್ಲಿ ಬಂದಿಳಿದ ಬಿಗ್ ಬಾಸ್ ಪ್ರಥಮ್

    English summary
    Kannada actor Pratham has made an appeal in front of the state's new government. Pratham has requested government to arrange help for senior artists ಕ
    Wednesday, May 16, 2018, 9:44
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X