For Quick Alerts
  ALLOW NOTIFICATIONS  
  For Daily Alerts

  ಟ್ರೈಲರ್: 'ಎಂಎಲ್ಎ' ಬಂದ್ರು ದಾರಿ ಬಿಡಿ

  By Bharath Kumar
  |

  ಇಷ್ಟು ದಿನ ನಿಮ್ಮ ಏರಿಯಾ 'ಎಂಎಲ್ಎ'ಗಳನ್ನ, ಟಿವಿಯಲ್ಲಿ ಪೇಪರ್ ನಲ್ಲಿ ಮಿನಿಸ್ಟರ್ ಗಳನ್ನ ನೋಡಿ ಸ್ವಲ್ಪ ಬೋರ್ ಆಗಿರಬಹುದು. ಈಗ ನಿಮ್ಮನ್ನು ನಕ್ಕು ನಗಿಸಲು ಒಳ್ಳೆ ಹುಡುಗ ಪ್ರಥಮ್ 'ಎಂಎಲ್ಎ' ಅವತಾರದಲ್ಲಿ ಬರ್ತಿದ್ದಾನೆ ದಾರಿ ಬಿಡಿ.

  ಹೌದು, ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಅಭಿನಯದ 'ಎಂಎಲ್ಎ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಇಷ್ಟು ದಿನ ಟೈಟಲ್, ಪೊಸ್ಟರ್ ನಿಂದ ಸದ್ದು ಮಾಡುತ್ತಿದ್ದ ಈ ಸಿನಿಮಾ ಈಗ ಟ್ರೈಲರ್ ಬಿಟ್ಟು ಮತ್ತಷ್ಟು ಕಿಕ್ ಹೆಚ್ಚಿಸಿದೆ.

  ಪ್ರಥಮ್ 'ಎಂಎಲ್ಎ' ನೋಡಿ ಥ್ರಿಲ್ ಆದ ಗೋಲ್ಡನ್ ಸ್ಟಾರ್ಪ್ರಥಮ್ 'ಎಂಎಲ್ಎ' ನೋಡಿ ಥ್ರಿಲ್ ಆದ ಗೋಲ್ಡನ್ ಸ್ಟಾರ್

  ಇದೊಂದು ಪಕ್ಕಾ ಪೊಲಿಟಿಕಲ್ ಎಂಟರ್ ಟೈನ್ಮೆಂಟ್ ಎನ್ನುವುದು ಈ ಚಿತ್ರದ ಟ್ರೈಲರ್ ಪ್ರೂವ್ ಮಾಡಿದೆ. ಒಂದು ಕಡೆ ಪ್ರಥಮ್ ಮತ್ತೊಂದೆಡೆ ಸ್ಪರ್ಶಾ ರೇಖಾ ಪೊಲಿಟಿಶಿಯನ್ ಗಳಾಗಿ ಮಿಂಚಿದ್ದಾರೆ. ಇಬ್ಬರು ರಾಜಕಾರಣಿಗಳಾಗಿ ಪ್ರೇಕ್ಷಕರನ್ನ ರಂಜಿಸಲಿದ್ದಾರೆ.

  ಸಾಮಾನ್ಯ ವ್ಯಕ್ತಿಯೊಬ್ಬ ಶಾಸಕಿಯೊಬ್ಬರ ಅಕ್ರಮದ ವಿರುದ್ಧ ಸಿಡಿದೆದ್ದು, ತಾನೇ ಎಂಎಲ್ಎ ಆಗುವ ಕಥೆ ಇದು. ಈಗಾಗಲೇ 'ಎಂಎಲ್ಎ' ಚಿತ್ರದ ಶೂಟಿಂಗ್ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಚಿತ್ರದ ಬಹುತೇಕ ಚಿತ್ರೀಕರಣವನ್ನು ಹೈದ್ರಾಬಾದ್ ನಲ್ಲಿ ನಡೆಸಿದ್ದು ಅಲ್ಲಿಯವರೇ ಆದ ವೆಂಕಟೇಶ್ ರೆಡ್ಡಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

  ಪ್ರಥಮ್ ನಾಯಕನಾಗಿರುವ ಚಿತ್ರದಲ್ಲಿ ಸೋನಾಲ್ ಮಾಂಟೇರಿಯೋ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಮಾಳವಿಕಾ ಅವಿನಾಶ್, ಚಂದ್ರಕಲಾ ಮತ್ತಿತ್ತರರು ಅಭಿನಯಿಸಿದ್ದಾರೆ. ಇನ್ನು ಹಾಡುಗಳು ಬಿಡುಗಡೆಯಾಗಿದ್ದು, ಹಾಡುಗಳು ಗಮನ ಸೆಳೆದಿದೆ.

  English summary
  Bigg boss kannada fame pratham starrer Mla movie trailer released. the movie directed by mourya.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X