»   » 'ಬಿಗ್ ಬಾಸ್ ಕನ್ನಡ 5'ಗೆ ಪ್ರಥಮ್ ಪ್ರಕಾರ ಇವರು ಹೋಗ್ಬೇಕಂತೆ.!

'ಬಿಗ್ ಬಾಸ್ ಕನ್ನಡ 5'ಗೆ ಪ್ರಥಮ್ ಪ್ರಕಾರ ಇವರು ಹೋಗ್ಬೇಕಂತೆ.!

Posted By:
Subscribe to Filmibeat Kannada
Olle Hudga Pratham wants his father to contest in Bigg Boss Kannada 5 | Filmibeat Kannada

'ಬಿಗ್ ಬಾಸ್ ಕನ್ನಡ-5' ರಿಯಾಲಿಟಿ ಶೋಗೆ ಕೌಂಡೌನ್ ಶುರುವಾಗಿದ್ದು, ಅಕ್ಟೋಬರ್ 15 ರಿಂದ ಕಾರ್ಯಕ್ರಮ ಪ್ರಸಾರವಾಗಲಿದೆ. ಈಗಾಗಲೇ ಸುದೀಪ್ ಅವರ ಸ್ಟೈಲಿಶ್ ಪ್ರೋಮೋಗಳು ರಿಲೀಸ್ ಆಗಿದ್ದು, ಗಮನ ಸೆಳೆಯುತ್ತಿದೆ.

'ಬಿಗ್ ಬಾಸ್ ಕನ್ನಡ 5' ನಲ್ಲಿ ಸೆಲೆಬ್ರಿಟಿಗಳ ಜೊತೆ ಕಾಮನ್ ಮ್ಯಾನ್ ಗಳು ಕೂಡ ಪ್ರವೇಶ ಪಡೆಯುತ್ತಿದ್ದಾರೆ. ಹೀಗಾಗಿ, ಈ ಬಾರಿಯ ಬಿಗ್ ಬಾಸ್ ತುಂಬ ವಿಶೇಷ.

ಬಿಗ್ ಬಾಸ್ 5ನೇ ಆವೃತ್ತಿ ಬಗ್ಗೆ ಬಿಗ್ ಬಾಸ್ 4ನೇ ಆವೃತ್ತಿಯ ವಿನ್ನರ್ ಪ್ರಥಮ್ ಅವರ ಮಾತನಾಡಿದ್ದಾರೆ. ಅವರ ಪ್ರಕಾರ 'ಬಿಗ್ ಬಾಸ್'ಗೆ ಯಾರು ಹೋಗಬೇಕು ಎಂದು ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ಪ್ರಥಮ್ ತಂದೆ ಬಿಗ್ ಬಾಸ್ ಗೆ ಹೋಗ್ಬೇಕಂತೆ

ಈ ಬಾರಿಯ ಬಿಗ್ ಬಾಸ್ ಮನೆಗೆ, ಒಳ್ಳೆ ಹುಡುಗ ಪ್ರಥಮ್ ಅವರ ತಂದೆ ಮಲ್ಲಯ್ಯ ಅವರನ್ನ ಕಳುಹಿಸಿ ಎಂದು ಹಲವರು ಪ್ರಥಮ್ ಅವರಿಗೆ ಹೇಳುತ್ತಿದ್ದಾರಂತೆ.

'ಬಿಗ್ ಬಾಸ್'ನಲ್ಲಿ ಈ ಬಾರಿ ಜನಸಾಮಾನ್ಯರಿಗೆ ಹೆಚ್ಚಿನ ಪ್ರಾಮುಖ್ಯತೆ.?

ಕುಟುಂಬ ರಾಜಕಾರಣ ಮಾಡಲ್ಲ

ಇದಕ್ಕೆ ಪ್ರತಿಕ್ರಿಯಿ ನೀಡಿರುವ ಪ್ರಥಮ್ ''ನಾನು ಕುಟುಂಬ ರಾಜಕಾರಣ ತರ ಮಾಡಲಪ್ಪ. ಅದಲ್ಲದೆ ನಮ್ಮ ತಂದೆ ಸರ್ಕಾರಿ ಅಧಿಕಾರಿ. ರಜೆ ಹಾಕಿ ಬಿಗ್ ಬಾಸ್ ಮನೇಲಿ ಇರಕ್ಕಾಗಲ್ಲ, ಮುಖ್ಯವಾಗಿ ನಮ್ಮ ಮನೆಯವರನ್ನ ತಗೊಳಿ ಅಂತ ಹೇಳುವ ಯಾವ ನೈತಿಕ ಹಕ್ಕು ನನಗಿಲ್ಲ'' ಎಂದಿದ್ದಾರೆ.

ಅರ್ಹರಿಗೆ ಬಿಗ್ ಬಾಸ್ ವೇದಿಕೆಯಾಗಲಿ

''ಅರ್ಹರು ಸಾವಿರಾರು ಜನ ಬಿಗ್ ಬಾಸ್ ಮನೆಗೆ ಹೋಗಲು ಕಾಯುತ್ತಿದ್ದಾರೆ. ಪ್ರಾಮಾಣಿಕವಾಗಿ ಹೇಳುವುದಾದರೆ, ಪ್ರತಿಭಾವಂತರಿಗೆ ಈ ಬಾರಿಯೂ ಬಿಗ್ ಬಾಸ್ ಮನೆ ವೇದಿಕೆಯಾಗಲಿ. ಅರ್ಹರು ಗೆಲ್ಲಲಿ ಅಷ್ಟೆ..'' ಎಂದು ಕಳೆದ ಆವೃತ್ತಿಯ ವಿನ್ನರ್ ಪ್ರಥಮ್ ಹೇಳಿದ್ದಾರೆ.

'ಬಿಗ್ ಬಾಸ್ ಕನ್ನಡ-5': ಸ್ಪರ್ಧಿಗಳ ಪಟ್ಟಿಯಲ್ಲಿ 'ಇವರುಗಳ' ಹೆಸರು ಇದ್ಯಂತೆ.!

ನನಗೆ ಯಾರ ಬೆಂಬಲವೂ ಇರಲಿಲ್ಲ

ಇನ್ನು ಪ್ರಥಮ್ ಅವರ ಕಳೆದ ಬಾರಿ ಗಣ್ಯ ವ್ಯಕ್ತಿಗಳ ಕೃಪಾಕಟಾಕ್ಷದಿಂದ ಬಿಗ್ ಬಾಸ್ ಪ್ರವೇಶ ಮಾಡಿದ್ದರು ಎನ್ನಲಾಗಿತ್ತು. ಅದಕ್ಕೆ ಪ್ರಥಮ್ ಉತ್ತರ ಕೊಟ್ಟಿದ್ದು, ''ನನಗೆ ಯಾರನ್ನು ಬಿಗ್ಬಾಸ್ ಗೆ ಕಳುಹಿಸುವ ಶಕ್ತಿ ಇಲ್ಲ. ನಾನು ಹಾಗೆ influence ಕೂಡ ಮಾಡಿಲ್ಲ'' ಎಂದಿದ್ದಾರೆ.

English summary
Bigg boss kannada 4 Winner Pratham Talk About Bigg boss Kannada 5 Contestant. ಬಿಗ್ ಬಾಸ್ ಕನ್ನಡ 5ನೇ ಆವೃತ್ತಿದ ಸ್ಪರ್ದಿಗಳ ಬಗ್ಗೆ ಕಳೆದ ಆವೃತ್ತಿಯ ವಿನ್ನರ್ ಪ್ರಥಮ್ ಮಾತನಾಡಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X