For Quick Alerts
  ALLOW NOTIFICATIONS  
  For Daily Alerts

  ಕನ್ನಡ ಸಿನಿಮಾರಂಗದಲ್ಲಿ ಮತ್ತೊಬ್ಬ 'ನಟಭಯಂಕರ'ನ ಆರ್ಭಟ ಶುರು

  By Pavithra
  |
  ಕನ್ನಡ ಸಿನಿಮಾರಂಗದಲ್ಲಿ ಮತ್ತೊಬ್ಬ 'ನಟಭಯಂಕರ'ನ ಆರ್ಭಟ ಶುರು | FIlmibeat Kannada

  ಕನ್ನಡ ಸಿನಿಮಾರಂಗದಲ್ಲಿ ನಟ ಭಯಂಕರ ಎಂದರೆ ಮೊದಲಿಗೆ ನೆನಪಾಗುವುದು ದಿವಂಗತ ನಟ ವಜ್ರಮುನಿ. ತಮ್ಮ ನಟನೆಯಿಂದಲೇ ಅಪಾರ ಸಂಖ್ಯೆಯ ಅಭಿಮಾನಿಗಳನ್ನ ಪಡೆದಿದ್ದ ನಟ ವಜ್ರಮುನಿ. ವಜ್ರಮುನಿ ಅವರ ಅಭಿನಯವನ್ನು ನೋಡಿ ಅಭಿಮಾನಿಗಳು ಅವರನ್ನ ನಟಭಯಂಕರ ಅಂತಾನೇ ಕರೆಯಲು ಆರಂಭ ಮಾಡಿದ್ದರು.

  ಸಾಮಾಜಿಕ ಕಳಕಳಿ ಇರುವ ಸಿನಿಮಾಗಳಾಗಲಿ, ಪೌರಾಣಿಕ ಚಿತ್ರಗಳಲ್ಲಿ ಆಗಲಿ ಪಾತ್ರಕ್ಕೆ ತಕ್ಕನಾದ ನ್ಯಾಯ ಒದಗಿಸುವ ಸಾಮರ್ಥ್ಯ ವಜ್ರಮುನಿ ಅವರಲ್ಲಿ ಇತ್ತು. ನಟಭಯಂಕರ ಈಗ ನಮ್ಮ ಜೊತೆಯಲ್ಲಿ ಇಲ್ಲ. ಆದರೆ ಅವರ ಸಿನಿಮಾ ಹಾಗೂ ಅಭಿನಯ ಮಾತ್ರ ಆಗಾಗ ನೋಡಲು ಅವಕಾಶ ಸಿಗುತ್ತೆ. ಸದ್ಯ ಕನ್ನಡ ಸಿನಿಮಾರಂಗಕ್ಕೆ ಹೊಸ ನಟಭಯಂಕರ ಸಿಕ್ಕಿದ್ದಾನೆ.

  ಬಿಗ್ ಬಾಸ್ ಪ್ರಥಮ್ ಗೆ ಸಾಥ್ ನೀಡಲಿರುವ 'ಡಿ ಬಾಸ್'ಬಿಗ್ ಬಾಸ್ ಪ್ರಥಮ್ ಗೆ ಸಾಥ್ ನೀಡಲಿರುವ 'ಡಿ ಬಾಸ್'

  ವಜ್ರಮುನಿ ಅವರಿಗೆ ನೀಡಿದ್ದ ಬಿರುದಿನ ಹೆಸರಿನಲ್ಲಿ ಸಿನಿಮಾ ಸೆಟ್ಟೇರಲು ಸಿದ್ದವಾಗಿದೆ. ಚಿತ್ರದ ಮಹೂರ್ತ ಇನ್ನ ಕೆಲವೇ ದಿನಗಳಲ್ಲಿ ನಡೆಯುತ್ತಿದ್ದು ಚಿತ್ರದಲ್ಲಿ ಬಿಗ್ ಸ್ಟಾರ್ ಗಳು ಭಾಗಿ ಆಗುತ್ತಿದ್ದಾರೆ. ಹಾಗಾದರೆ ಯಾರು ಆ ಹೊಸ ನಟಭಯಂಕರ? ಇದೇ ಟೈಟಲ್ ಸಿನಿಮಾಗೆ ಸೂಕ್ತ ಎನ್ನಿಸಲು ಕಾರಣವೇನು? ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.

  ಕನ್ನಡದಲ್ಲಿ ಮತ್ತೊಬ್ಬ ನಟಭಯಂಕರ

  ಕನ್ನಡದಲ್ಲಿ ಮತ್ತೊಬ್ಬ ನಟಭಯಂಕರ

  ನಟಭಯಂಕರ ಕನ್ನಡದ ಸಿನಿಮಾರಂಗದಲ್ಲಿ ಹೊಸದಾಗಿ ಆರಂಭ ಆಗುತ್ತಿರುವ ಸಿನಿಮಾ. ತೆರೆ ಮೇಲೆ ನಟಭಯಂಕರನಾಗಿ ಕಾಣಿಸಿಕೊಳ್ಳುತ್ತಿರುವ ಕಲಾವಿದ ಬಿಗ್ ಬಾಸ್ ಖ್ಯಾತಿಯ ಪ್ರಥಮ್.

  ನಟಭಯಂಕರನಾದ ಪ್ರಥಮ್

  ನಟಭಯಂಕರನಾದ ಪ್ರಥಮ್

  ಪ್ರಥಮ್ ನಟಿಸಿ ನಿರ್ದೇಶನ ಮಾಡುತ್ತಿರುವ ಪ್ರಥಮ್ಸ್ ಬಿಲ್ಡಪ್ ಚಿತ್ರದ ಟೈಟಲ್ ಬದಲಾಗಿದೆ. ಪ್ರಥಮ್ಸ್ ಬಿಲ್ಡಪ್ ಬದಲಾಗಿ ಸಿನಿಮಾಗೆ ನಟಭಯಂಕರ ಎಂದು ಟೈಟಲ್ ಫಿಕ್ಸ್ ಆಗಿದೆ.

  ಮಹೂರ್ತಕ್ಕೆ ಸಿದ್ದತೆಗಳು

  ಮಹೂರ್ತಕ್ಕೆ ಸಿದ್ದತೆಗಳು

  ನಟ ಭಯಂಕರ ಸಿನಿಮಾದ ಮಹೂರ್ತ ಮುಂದಿನವಾರ ನಡೆಯಲಿದ್ದು ಚಿತ್ರಕ್ಕೆ ಕ್ಲಾಪ್ ಮಾಡಲು ಬಾಲಿವುಡ್ ಅಥವಾ ಟಾಲಿವುಡ್ ನಿಂದ ಬಿಗ್ ಸ್ಟಾರ್ ಬರುತ್ತಿದ್ದಾರೆ. ದೇಶದಲ್ಲೇ ಪ್ರಖ್ಯಾತಿ ಪಡೆದುಕೊಂಡಿರುವ ಗಣ್ಯರನ್ನೇ ಆಹ್ವಾನ ಮಾಡಲಾಗಿದ್ಯಂತೆ.

  ಪ್ರಥಮ್ ಜೊತೆಯಾದ ಕುರಿ ಪ್ರತಾಪ್

  ಪ್ರಥಮ್ ಜೊತೆಯಾದ ಕುರಿ ಪ್ರತಾಪ್

  ನಟಭಯಂಕರ ಫ್ಯಾಂಟಸಿ ಆಕ್ಷನ್ ಕಥಾಹಂದರವಿರುವ ಚಿತ್ರ. ಸಿನಿಮಾದಲ್ಲಿ ಪ್ರಥಮ್ ಜೊತೆಯಲ್ಲಿ ಕುರಿ ಪ್ರತಾಪ್ ಕೂಡ ಅಭಿನಯಿಸುತ್ತಿದ್ದಾರೆ. ನಾಯಕಿಯಾಗಿ ಡಿಂಕ್ ಚಕ್ ಪೂಜಾ ಕಾಣಿಸಿಕೊಳ್ಳಲಿದ್ದು ಕನ್ನಡದ ಟೈಟಲ್ ಇರಲಿ ಎನ್ನುವ ಕಾರಣದಿಂದ ನಟಭಯಂಕರ ಎಂದು ಶೀರ್ಷಿಕೆ ಬದಲಾವಣೆ ಮಾಡಲಾಗಿದೆ.

  ಸಿನಿಮಾ ನಿರ್ದೇಶನಕ್ಕೆ ಕಿಚ್ಚನೇ ಸ್ಫೂರ್ತಿ

  ಸಿನಿಮಾ ನಿರ್ದೇಶನಕ್ಕೆ ಕಿಚ್ಚನೇ ಸ್ಫೂರ್ತಿ

  ಕಿಚ್ಚ ಸುದೀಪ್ ಬಿಗ್ ಬಾಸ್ ವೇದಿಕೆ ಮೇಲೆ ಪ್ರಥಮ್ ಅವರಿಗೆ ಹೇಳಿದ ಮಾತುಗಳನ್ನ ಕೇಳಿದ ಪ್ರಥಮ್ ನಿರ್ದೇಶನ ಮಾಡಬೇಕು ಎಂದು ನಿರ್ಧಾರ ಮಾಡಿದ್ದಾರೆ. ಅದೇ ಕಾರಣದಿಂದ ಒಂದು ವರ್ಷಗಳ ಕಾಲ ಶ್ರಮ ವಹಿಸಿ ಸ್ಕ್ರೀಪ್ಟ್ ಮಾಡಿಕೊಂಡು ಆಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ. ಸ್ವಾರಸ್ಯ ಸಿನಿ ಕ್ರಿಯೇಷನ್ಸ್ ನಿಂದ ಚಿತ್ರ ನಿರ್ಮಾಣ ಆಗುತ್ತಿದೆ.

  ಒಳ್ಳೆ ಹುಡ್ಗನ ಹೇರ್ ಸ್ಟೈಲ್ ನೋಡಿ ಮೆಚ್ಚಿದ ಸಿ ಎಂ ಸಿದ್ದರಾಮಯ್ಯಒಳ್ಳೆ ಹುಡ್ಗನ ಹೇರ್ ಸ್ಟೈಲ್ ನೋಡಿ ಮೆಚ್ಚಿದ ಸಿ ಎಂ ಸಿದ್ದರಾಮಯ್ಯ

  English summary
  Kannada actor Pratham starrer prathams builup movie tital has changed the Vajramuni. The film shooting going to be start next weekend, Dink Chak Pooja and Kuri Prathap are playing the lead roles.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X