»   » ವಿಷ್ಣು ಅಭಿಮಾನಿಗಳಿಗೆ ಸ್ಪೆಷಲ್ ಗಿಫ್ಟ್ ಕೊಟ್ಟ 'ಚಮಕ್' ಗಣೇಶ್.!

ವಿಷ್ಣು ಅಭಿಮಾನಿಗಳಿಗೆ ಸ್ಪೆಷಲ್ ಗಿಫ್ಟ್ ಕೊಟ್ಟ 'ಚಮಕ್' ಗಣೇಶ್.!

Posted By:
Subscribe to Filmibeat Kannada

ಎಲ್ಲರಿಗೂ ಗೊತ್ತಿರುವಾಗೆ, ಗೋಲ್ಡನ್ ಸ್ಟಾರ್ ಗಣೇಶ್ ಸಾಹಸ ಸಿಂಹ, ಅಭಿನವ ಭಾರ್ಗವ ಡಾ.ವಿಷ್ಣುವರ್ಧನ್ ಅವರ ದೊಡ್ಡ ಅಭಿಮಾನಿ. ಇದೀಗ, ವಿಷ್ಣು ಅಭಿಮಾನಿಗಳಿಗೆ ಗಣೇಶ್ ವಿಶೇಷವಾದ ಉಡುಗೊರೆ ನೀಡುತ್ತಿದ್ದಾರೆ.

ಸಿಂಪಲ್ ಸುನಿ ನಿರ್ದೇಶನ ಮಾಡುತ್ತಿರುವ 'ಚಮಕ್' ಚಿತ್ರದಲ್ಲಿ ಗಣೇಶ್ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದ ಮೂಲಕ ವಿಷ್ಣು ಫ್ಯಾನ್ಸ್ ಗೆ ಗಿಫ್ಟ್ ಕೊಡಲು ಚಿಂತಿಸಿದ್ದಾರೆ ಗೋಲ್ಡನ್ ಸ್ಟಾರ್.

'ಚಮಕ್' ಚಿತ್ರದಲ್ಲಿ ವಿಷ್ಣು ಅಭಿಮಾನಿಗಳಿಗೆ ಏನಿರಬಹುದು ಗುಡ್ ನ್ಯೂಸ್? ಎಂದು ತಿಳಿದುಕೊಳ್ಳಲು ಮುಂದೆ ಓದಿ.....

'ಚಮಕ್' ಚಿತ್ರದಲ್ಲಿ ವಿಷ್ಣು ಸಾಂಗ್

ಗಣೇಶ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯಿಸುತ್ತಿರುವ ಚಮಕ್ ಚಿತ್ರದಲ್ಲಿ ವಿಷ್ಣುವರ್ಧನ್ ಅವರ ಸೂಪರ್ ಹಿಟ್ ಹಾಡೊಂದನ್ನ ರಿಮಿಕ್ಸ್ ಮಾಡಲಾಗುತ್ತಿದೆ.

ಯಾವುದು ಆ ಹಾಡು?

ವಿಷ್ಣುವರ್ಧನ್ ಅಭಿನಯದಲ್ಲಿ 1986ರಲ್ಲಿ ಬಿಡುಗಡೆಯಾಗಿದ್ದ 'ಕರ್ಣ' ಚಿತ್ರದ 'ಪ್ರೀತಿಯೇ ನನ್ನುಸಿರು' ಹಾಡನ್ನ ಗಣೇಶ್ ಮತ್ತೆ ಬಳಸಲಿದ್ದಾರಂತೆ. ಈ ಹಾಡಿನಲ್ಲಿ ವಿಷ್ಣು ಅವರ ಜೊತೆ ಸುಮಲತಾ ಹೆಜ್ಜೆ ಹಾಕಿದ್ದರು. ಎಂ.ರಂಗರಾವ್ ಸಂಗೀತ ಸಂಯೋಜಿಸಿದ್ದು, ಎಸ್.ಪಿ.ಬಿ ಮತ್ತು ಜಾನಕಿ ಧ್ವನಿಯಾಗಿದ್ದರು.

ಆಡಿಯೋ ಕಂಪನಿ ಜೊತೆ ಮಾತುಕತೆ

ಅಂದ್ಹಾಗೆ, ಕನ್ನಡದಲ್ಲಿ ಮೂಡಿಬಂದಿದ್ದ 'ಪ್ರೀತಿಯೇ ನನ್ನುಸಿರು' ಹಾಡು, ಹಿಂದಿಯಲ್ಲಿ 'ಪ್ಯಾರ್ ಬಿನ್ ಚೆನ್' ಹಾಡಿನಿಂದ ಅಳವಡಿಸಿಕೊಳ್ಳಲಾಗಿತ್ತು. ಇದೀಗ, ಈ ಎರಡು ಭಾಷೆಯ ಆಡಿಯೋ ಮಾಲೀಕರ ಬಳಿ ರಿಮಿಕ್ಸ್ ಮಾಡುವ ಬಗ್ಗೆ ಚಮಕ್ ಚಿತ್ರತಂಡ ಮಾತುಕತೆ ಮಾಡುತ್ತಿದೆಯಂತೆ.

ಗಣೇಶ್ ಗೂ ಸಿಕ್ಕಾಪಟ್ಟೆ ಇಷ್ಟ.!

ಹೇಳಿ ಕೇಳಿ ಗಣೇಶ್ ಮೊದಲೇ ವಿಷ್ಣುದಾದ ಅಭಿಮಾನಿ. ಇನ್ನು ಅವರ ಹಾಡನ್ನ ರಿಮಿಕ್ಸ್ ಮಾಡುವ ಚಿಂತನೆ ನಡೆಸಿರುವುದಕ್ಕೆ ತುಂಬ ಖುಷಿಯಾಗಿದ್ದಾರೆ.

English summary
Ganesh's Chamak Movie Team has planning to include a remix version of 'Preethiya Nan Husiru' from the 1986 movie 'Karna'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada