For Quick Alerts
  ALLOW NOTIFICATIONS  
  For Daily Alerts

  ಪ್ರೇಮ್ ಅಡ್ಡ ಸಿನೆಮಾ ನಾಳೆಯಿಂದ ಶುರು ಗುರು

  By Rajendra
  |

  ಪ್ರೇಮ್ ಅಡ್ಡ ಚಿತ್ರ ಇದೇ ಶುಕ್ರವಾರ (ಡಿಸೆಂಬರ್ 7) ತೆರೆಕಾಣುತ್ತಿದೆ. ಪ್ರೇಮ್ ಅದೃಷ್ಟ ನೋಡಿ. ತಮ್ಮ ಅಡ್ಡ ಚಿತ್ರಕ್ಕೆ ಯಾವುದೇ ಚಿತ್ರಗಳು ಅಡ್ಡ ಬರುತ್ತಿಲ್ಲ. ಪ್ರತಿವಾರ ಮೂರು ನಾಲ್ಕು ಚಿತ್ರಗಳು ತೆರೆಕಂಡು ಥಿಯೇಟರ್ ಸಮಸ್ಯೆ ಆ ಪ್ರಾಬ್ಲಂ ಈ ಪ್ರಾಬ್ಲಂ ಎಂದಿದ್ದರೆ. ಈ ಬಾರಿ ಪ್ರೇಮ್ ಅಡ್ಡಗೆ ಯಾವುದೇ ಪ್ರಾಬ್ಲಂ ಇಲ್ಲ.

  ಈಗಾಗಲೆ ಚಿತ್ರದ ಹಾಡುಗಳು ಸೂಪರ್ ಹಿಟ್ ಆಗಿವೆ. ತಮಿಳು ಸುಬ್ರಹ್ಮಣ್ಯಪುರಂ ಚಿತ್ರದ ಟ್ಯೂನ್ ಗಳನ್ನು ಹಾಗೆಯೇ ಕನ್ನಡಕ್ಕೆ ವರ್ಗಾವಣೆಯಾಗಿವೆ. ಚಿತ್ರದ ಸಾಹಿತ್ಯ ಅಷ್ಟೇ ಇಲ್ಲಿ ಹೊಸದಾಗಿರುವುದು. ಆದರೂ ಪ್ರೇಮ್ ಚಿತ್ರದಲ್ಲಿ ಏನಾದರೂ ವಿಶೇಷ ಇದ್ದೇ ಇರುತ್ತದೆ ಎಂಬ ನಿರೀಕ್ಷೆಯಲ್ಲಿ ಪ್ರೇಕ್ಷಕರಿದ್ದಾರೆ.

  ಚಿತ್ರದ ಹಾಡುಗಳು ಸೂಪರ್ ಹಿಟ್ ಆಗಿದ್ದು ಐಂದ್ರಿತಾ ರೇ ಕುಣಿದಿರುವ ಮಸ್ತ್ ಸಾಂಗ್ ಬಸಂತಿ ನಾಚ್ ನಾಚ, ಹಾಗೂ ಸೋನು ನಿಗಂ ಹಾಗೂ ಶ್ರೇಯಾ ಘೋಷಾಲ್ ಕಂಠಸಿರಿಯಲ್ಲಿ ಹೊರಹೊಮ್ಮಿರುವ ಕಳ್ಳಿ ಇವಳು ಹಾಗೂ ಮೇಲುಕೋಟೆ (ಈಗ ಏಳುಕೋಟೆ ಆಗಿದೆ) ಹಾಡುಗಳು ಕರ್ನಾಟಕದ ಮೂಲೆಮೂಲೆಗೂ ತಲುಪಿವೆ.

  ಶಂಕರ್ ಮಹದೇವನ್ ಹಾಡಿರುವ ಅಡ್ಡ ಬಾಯ್ಸ್ ಹಾಡೂ ಅಷ್ಟೇ ಜನಪ್ರಿಯವಾಗಿದೆ. ಒಟ್ಟು 200 ಸ್ಕ್ರೀನ್ ಗಳಲ್ಲಿ ಬಿಡುಗಡೆ ಮಾಡಬೇಕೆಂದಿದ್ದರು ಪ್ರೇಮ್. ಆದರೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಡ್ರಾಮಾ ಹಾಗೂ ಎದೆಗಾರಿಕೆ ಚಿತ್ರಗಳು ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಕಾರಣ ಪ್ರೇಮ್ ಪ್ರಯತ್ನ ಸಾಕಾರವಾಗಿಲ್ಲ.

  ಈಗ ಚಿತ್ರ 150 ಚಿತ್ರಮಂದಿರಗಳಲ್ಲಷ್ಟೇ ಬಿಡುಗಡೆಯಾಗುತ್ತಿದೆ. ಹರಿಕೃಷ್ಣ ಸಂಗೀತದ ಝಲಕ್, ಮಳವಳ್ಳಿ ಸಾಯಿಕೃಷ್ಣ, ವಿ ನಾಗೇಂದ್ರ ಪ್ರಸಾದ್, ಯೋಗರಾಜ್ ಭಟ್, ಪ್ರೇಮ್ ಹಾಗೂ ತುಷಾರ್ ರಂಗನಾಥ್ ಅವರ ಸಾಹಿತ್ಯದ ವರಸೆಗಳು ಪ್ರೇಕ್ಷಕರನ್ನು ಸೆಳೆಯುತ್ತಿವೆ.

  ತಮಿಳಿನ ಯಶಸ್ವಿ ಚಿತ್ರ 'ಸುಬ್ರಹ್ಮಣ್ಯಪುರಂ' ರೀಮೇಕ್ ಚಿತ್ರ ಇದಾಗಿದೆ. ಮೂಲ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕುತ್ತು. ರೀಮೇಕ್ ಪ್ರೇಮ್ ಅಡ್ಡ ಚಿತ್ರ ಎ ಸರ್ಟಿಫಿಕೇಟ್ ಪಡೆದಿದೆ. ಕೃತಿ ಖರಬಂಧ ಚಿತ್ರದ ನಾಯಕಿ.

  ಕನ್ನಡದ ನೇಟಿವಿಟಿಗೆ ತಕ್ಕಂತೆ ಚಿತ್ರಕಥೆಯಲ್ಲಿ ಅಲ್ಪಸ್ವಲ್ಪ ಬದಲಾವಣೆಗಳನ್ನೂ ಮಾಡಿಕೊಂಡಿದ್ದೇವೆ ಎನ್ನುತ್ತಾರೆ ನಿರ್ದೇಶಕ ಮಹೇಶ್ ಬಾಬು. ಹಾಡುಗಳ ಚಿತ್ರೀಕರಣಕ್ಕೆ ಹೆಚ್ಚು ಸಮಯ ವ್ಯಯಿಸಿದ್ದೇವೆ ಎಂಬುದು ಅವರ ಮತ್ತೊಂದು ಮಾತು. ಚಿತ್ರದ ವಿಮರ್ಶೆಗಾಗಿ ನಿರೀಕ್ಷಿಸಿ. (ಒನ್ಇಂಡಿಯಾ ಕನ್ನಡ)

  English summary
  Kannada film Prem Adda releases on 07th December in about 150 theaters all over Karnataka. The film is directed by Mahesh Babu and the film music is scored by V. Harikrishna. The film is the remake of Tamil film Subramaniapuram.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X