Just In
Don't Miss!
- News
ಮಾರ್ಚ್ 4ರಂದು ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ?
- Education
DFCCIL Recruitment 2021: 1099 ಜ್ಯೂನಿಯರ್ ಮ್ಯಾನೇಜರ್ ಮತ್ತು ಎಕ್ಸಿಕ್ಯುಟಿವ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Sports
ಭಾರತ vs ಇಂಗ್ಲೆಂಡ್: ಧೋನಿ ದಾಖಲೆ ಸರಿದೂಗಿಸಿದ ವಿರಾಟ್ ಕೊಹ್ಲಿ
- Lifestyle
ಈ 7 ಬಗೆಯ ಆಹಾರಗಳು ಕೂದಲು ಉದುರುವ ಸಮಸ್ಯೆ ಹೆಚ್ಚಿಸುವುದು
- Automobiles
ಬಿಡುಗಡೆಯ ನಂತರ ಎರಡನೇ ಬಾರಿಗೆ ಬೆಲೆ ಹೆಚ್ಚಳ ಪಡೆದುಕೊಂಡ ನಿಸ್ಸಾನ್ ಮ್ಯಾಗ್ನೈಟ್
- Finance
ಚಿನ್ನದ ಬೆಲೆ ಇಳಿಕೆ: ಗರಿಷ್ಠ ಮಟ್ಟಕ್ಕಿಂತ 11,500 ರೂ. ಕಡಿಮೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮಾವನ 'ಪ್ರೇಮ ಬರಹ'ಕ್ಕೆ ಶಾಕ್ ಕೊಟ್ಟ ಚಿರಂಜೀವಿ ಸರ್ಜಾ

ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರ ಮಗಳು ಐಶ್ವರ್ಯ ಅಭಿನಯದ 'ಪ್ರೇಮ ಬರಹ' ಸಿನಿಮಾದ ರಿಲೀಸ್ ದಿನಾಂಕ ಘೋಷಿಸಿದ್ದು, ಚಿತ್ರಪ್ರೇಮಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ಫೆಬ್ರವರಿ 9 ರಂದು ಗಾಂಧಿನಗರದಲ್ಲಿ 'ಪ್ರೇಮ ಬರಹ' ಮೊಳಗಲಿದ್ದು, ಸರ್ಜಾ ಕುಟುಂಬದ ಕುಡಿಯನ್ನ ಕನ್ನಡಕ್ಕೆ ಸ್ವಾಗತಿಸಲು ಸ್ಯಾಂಡಲ್ ವುಡ್ ಸಜ್ಜಾಗಿದೆ.
ಇಷ್ಟು ದಿನ ಅರ್ಜುನ್ ಸರ್ಜಾ ಅವರ ಸೋದರಳಿಯರಾದ ಚಿರಂಜೀವಿ ಸರ್ಜಾ, ಧ್ರುವ ಸರ್ಜಾ ಇಬ್ಬರು 'ಪ್ರೇಮ ಬರಹ' ಚಿತ್ರಕ್ಕೆ ಸಂಪೂರ್ಣ ಬೆಂಬಲ ನೀಡಿದ್ದರು. ಆದ್ರೆ, ಈಗೊಂದು ಅಚ್ಚರಿಯ ಅಂಶ ಹೊರಬಿದ್ದಿದೆ.
ಹನುಮ ಗೀತೆ ಹಾಡಲಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಸರ್ಜಾ ಫ್ಯಾಮಿಲಿ
ಅರ್ಜುನ್ ಸರ್ಜಾ ಪುತ್ರಿಯನ್ನ ಸ್ವಾಗತಿಸಲು ಸಜ್ಜಾಗುತ್ತಿದ್ದ ಚಿರು ಸರ್ಜಾ, ಈಗ ಸೋದರ ಮಾವನ ಎದುರು ಕಾಂಪಿಟೇಶನ್ ಮಾಡಬೇಕಾಗಿದೆ. ಬಾಕ್ಸ್ ಆಫೀಸ್ ನಲ್ಲಿ ಇಬ್ಬರು ಕಿತ್ತಾಡಬೇಕಿದೆ. ಏನಿದು ಹೊಸ ವಿಷ್ಯ? ಮುಂದೆ ಓದಿ....

'ಪ್ರೇಮ ಬರಹ'ಕ್ಕೆ ಚಿರು ಶಾಕ್
ಫೆಬ್ರವರಿ 9 ರಂದು ಬಿಡುಗಡೆಯಾಗಲಿರುವ 'ಪ್ರೇಮ ಬರಹ' ಚಿತ್ರಕ್ಕೆ ನಟ ಚಿರಂಜೀವಿ ಸರ್ಜಾ ಶಾಕ್ ನೀಡಿದ್ದಾರೆ. ಸೋದರ ಮಾವನ ಚಿತ್ರದ ಎದುರು ತಮ್ಮ ಚಿತ್ರವನ್ನ ಬಿಡುಗಡೆ ಮಾಡುತ್ತಿದ್ದಾರೆ ಚಿರು ಸರ್ಜಾ.

ಅದೇ ದಿನ ಬರ್ತಿದೆ 'ಸಂಹಾರ'
ಐಶ್ವರ್ಯ ಅರ್ಜುನ್ ಸರ್ಜಾ ಅಭಿನಯದ ಚೊಚ್ಚಲ ಸಿನಿಮಾದ ಜೊತೆಯಲ್ಲೇ ಚಿರು ಸರ್ಜಾ ಅಭಿನಯದ 'ಸಂಹಾರ' ಸಿನಿಮಾ ರಿಲೀಸ್ ಆಗುತ್ತಿದೆ. ಇತ್ತೀಚೆಗಷ್ಟೇ ಸೆನ್ಸಾರ್ ಮುಗಿಸಿರುವ 'ಸಂಹಾರ', ಯು/ಎ ಸರ್ಟಿಫಿಕೇಟ್ ಪಡೆದುಕೊಂಡಿದೆ.
'ಪ್ರೇಮ ಬರಹ'ಕ್ಕೆ ದರ್ಶನ್, ಅಂಬಿ ಬರಮಾಡಿಕೊಳ್ಳುವ ಆ ಸೆಲೆಬ್ರಿಟಿ ಯಾರು.?

ಸರ್ಜಾ ಕುಟುಂಬದ ಸಿನಿಮಾಗಳು
ಇದು ಕಾಂಪಿಟೇಶನ್ ಎನ್ನುವುದಕ್ಕಿಂತ ಚಿತ್ರಪ್ರೇಮಿಗಳಿಗೆ ಡಬಲ್ ಟ್ರೀಟ್ ಎನ್ನಬಹುದು. ಒಂದೇ ದಿನ, ಒಂದೇ ಕುಟುಂಬದ ಎರಡು ಚಿತ್ರಗಳು ತೆರೆ ಮೇಲೆ ನೋಡುವುದು ಅಭಿಮಾನಿಗಳಿಗೆ ಖುಷಿಯ ವಿಚಾರ.

'ಸಂಹಾರ' ಚಿತ್ರದ ಬಗ್ಗೆ
ಗುರುದೇಶಪಾಂಡೆ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಕುರುಡನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಹರಿಪ್ರಿಯಾ ಚಿತ್ರಕ್ಕೆ ನಾಯಕಿ. ರವಿ ಬಸ್ರೂರ್ ಅವರ ಸಂಗೀತ ಚಿತ್ರಕ್ಕಿದೆ. ವಿಶೇಷ ಪಾತ್ರದಲ್ಲಿ ಚಿಕ್ಕಣ್ಣ ಕೂಡ ಕಾಣಿಸಿಕೊಂಡಿದ್ದಾರೆ.