For Quick Alerts
  ALLOW NOTIFICATIONS  
  For Daily Alerts

  ಜಗ್ಗೇಶ್ ಹುಟ್ಟುಹಬ್ಬಕ್ಕೆ ಬಂತು 'ಪ್ರೀಮಿಯರ್ ಪದ್ಮಿನಿ' ಟೀಸರ್

  |

  ಸ್ಯಾಂಡಲ್ ವುಡ್ ನಲ್ಲಿ ಇಂದು ಇಬ್ಬರು ಸ್ಟಾರ್ ನಟರ ಹುಟ್ಟುಹಬ್ಬ. ಆ ಕಡೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಈ ಕಡೆ ನವರಸ ನಾಯಕ ಜಗ್ಗೇಶ್. ಬರ್ತಡೇ ದಿನ ಜಗ್ಗೇಶ್ ಪ್ರತಿವರ್ಷದಂತೆ ಈ ವರ್ಷವೂ ಮಂತ್ರಾಲಯ ಭೇಟಿ ನೀಡಿ ರಾಯರ ದರ್ಶನ ಪಡೆದುಕೊಂಡಿದ್ದಾರೆ.

  ಜಗ್ಗೇಶ್ ಅವರ ಹುಟ್ಟುಹಬ್ಬದ ಪ್ರಯುಕ್ತ ಪ್ರೀಮಿಯರ್ ಪದ್ಮಿನಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಜಗ್ಗೇಶ್ ತುಂಬಾ ವಿಶೇಷವಾದ ಪಾತ್ರವನ್ನ ನಿಭಾಯಿಸುತ್ತಿದ್ದು, ಈ ಸಿನಿಮಾದಲ್ಲಿ ಹೊಸ ಅನುಭವ ಕೊಡುವ ಸೂಚನೆ ನೀಡಿದ್ದಾರೆ.

  ದರ್ಶನ್ ಕೈಯಿಂದ ಒಂದೊಳ್ಳೆ ಕೆಲಸ ಮಾಡಿಸಿದ ನಟ ಜಗ್ಗೇಶ್

  ಜಗ್ಗೇಶ್ ಅವರ ಜೊತೆ ಹಿರಿಯ ನಟಿಯರಾದ ಮಧುಬಾಲ ಮತ್ತು ಸುಧಾರಾಣಿ ಕಾಣಿಸಿಕೊಂಡಿರುವುದು ಪ್ರೀಮಿಯರ್ ಪದ್ಮಿನಿಗೆ ಮತ್ತಷ್ಟು ಜೋಶ್ ಹೆಚ್ಚಿಸಿದೆ. ಇವರ ಜೊತೆಯಲ್ಲಿ ದತ್ತಣ್ಣ, ಪ್ರಮೋದ್ ಪಂಜು, ಹಿತಾ ಚಂದ್ರಶೇಖರ್, ವಿವೇಕ್ ಸಿಂಹ ಅಭಿನಯಿಸಿದ್ದಾರೆ.

  ರೊಚ್ಚಿಗೆದ್ದ ಜಗ್ಗೇಶ್: ನಕಲಿ ಖಾತೆ ಮಾಡಿದವರಿಗೆ ಮುಂದೈತೆ ಮಾರಿಹಬ್ಬ

  ಇನ್ನುಳಿದಂತೆ ಶ್ರುತಿ ನಾಯ್ಡು ಈ ಚಿತ್ರವನ್ನ ನಿರ್ಮಾಣ ಮಾಡಿದ್ದು, ರಮೇಶ್ ಇಂದಿರಾ ಆಕ್ಷನ್ ಕಟ್ ಹೇಳಿದ್ದಾರೆ. ಅರ್ಜುನ್ ಜನ್ಯ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಸದ್ಯ ಆಡಿಯೋ ಮತ್ತು ಟೀಸರ್ ಬಿಡುಗಡೆಯಾಗಿದ್ದು, ಸದ್ಯದಲ್ಲೇ ತೆರೆಗೆ ಬರಲಿದೆ.

  English summary
  Navarasa Nayaka Jaggesh's starrer Premier Padmini Teaser released for his birthday special today (march 17th).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X