ನಟ ಸುದೀಪ್ ಸಾಧನೆ ಕಂಡು ಪತ್ನಿ ಪ್ರಿಯಾ ಆಡಿದ ಮಾತುಗಳು ಹೀಗಿವೆ..

By Naveen

ನಟ ಕಿಚ್ಚ ಸುದೀಪ್ ಬೆಳೆಯುತ್ತಿರುವ ರೀತಿ ಎಲ್ಲರಿಗೂ ಖುಷಿ ಕೊಡುವ ವಿಷಯ. ಕನ್ನಡದ ಸ್ಟಾರ್ ನಟನಾಗಿ ಹಿಂದಿ, ತೆಲುಗು, ತಮಿಳು ಸಿನಿಮಾ ರಂಗದಲ್ಲೂ ಸುದೀಪ್ ತಮ್ಮ ಪ್ರತಿಭೆಯನ್ನು ತೋರಿಸಿ ಬಂದಿದ್ದಾರೆ.

ತಮ್ಮ ಟ್ಯಾಲೆಂಟ್ ಮೂಲಕ ಕಿಚ್ಚ ದಿನೇ ದಿನೇ ಬೆಳೆಯುತ್ತಲೇ ಇದ್ದಾರೆ. ಅದನೇ ಇದ್ದರೂ ಈಗ ಸುದೀಪ್ ಅವರ ಈ ಬೆಳವಣಿಗೆ ಪತ್ನಿ ಪ್ರಿಯಾ ಅವರಿಗೆ ಬಹಳ ಖುಷಿ ಕೊಟ್ಟಿದೆ.

ಸುದೀಪ್ ಸಾಧನೆ ಬಗ್ಗೆ ಇತ್ತೀಚಿಗಷ್ಟೆ ಪತ್ನಿ ಪ್ರಿಯಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಮುಂದೆ ಓದಿ...

'ಪ್ರಿಯಾ' ಶುಭಾಶಯ

'ಪ್ರಿಯಾ' ಶುಭಾಶಯ

ಇತ್ತೀಚಿಗಷ್ಟೆ ನಟ ಸುದೀಪ್ ಅವರ ಟ್ವಿಟ್ಟರ್ ಫಾಲೋವರ್ಸ್ ಗಳ ಸಂಖ್ಯೆ 1 ಮಿಲಿಯನ್ ಗಡಿ ದಾಟಿತ್ತು. ಈ ವೇಳೆ ಸುದೀಪ್ ಪತ್ನಿ ಪ್ರಿಯಾ ಕೂಡ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಸುದೀಪ್ ಗೆ ಶುಭಾಶಯ ತಿಳಿಸಿದರು.

ಪ್ರಿಯಾ ಮಾಡಿರುವ ಟ್ವೀಟ್ ಇದು

ಪ್ರಿಯಾ ಮಾಡಿರುವ ಟ್ವೀಟ್ ಇದು

''ಎಲ್ಲ ಅಡೆತಡೆಗಳ ಹೊರತಾಗಿಯೂ ನೀವು ಇದನ್ನು ಸಾಧಿಸಿದ್ದೀರಿ. ನಿಮ್ಮ ಈ ದೃಢತೆ ಇತರರಿಗೆ ಸ್ಫೂರ್ತಿ. ಇದು ಬಹುಕಾಲ ಉಳಿಯಲಿದೆ. ನಾನು ಮತ್ತು ಸಾನು (ಮಗಳು) ನಿಮ್ಮ ಬಗ್ಗೆ ಹೆಮ್ಮೆ ಪಡುತ್ತಿದೇವೆ'' ಎಂದು ಪ್ರಿಯಾ ಟ್ವೀಟ್ ಮಾಡಿದ್ದಾರೆ.

ಸ್ಪೆಷಲ್ ವಿಶ್

ಸ್ಪೆಷಲ್ ವಿಶ್

ಸುದೀಪ್ ಟ್ವಿಟ್ಟರ್ ಫಾಲೋವರ್ಸ್ 1 ಮಿಲಿಯನ್ ಆದ ಸಂದರ್ಭದಲ್ಲಿ ಅದೆಷ್ಟೋ ಶುಭಾಶಯಗಳು ಅವರಿಗೆ ಬಂದಿದೆ. ಆದರೆ ಅವುಗಳ ಪೈಕಿ ಪತ್ನಿ ಪ್ರಿಯಾ ಮಾಡಿದ ವಿಶ್ ತುಂಬ ಸ್ಪೆಷಲ್ ಆಗಿದೆ.

ಅಭಿಮಾನಿಗಳ ಸಂತೋಷ

ಅಭಿಮಾನಿಗಳ ಸಂತೋಷ

ಪ್ರಿಯಾ ಅವರ ಟ್ವೀಟ್ ನೋಡಿದ ಅನೇಕ ಸುದೀಪ್ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ. ಅದನ್ನು ತಮ್ಮ ಕಾಮೆಂಟ್ ಗಳ ಮೂಲಕ ಪ್ರಿಯಾ ಅವರಿಗೆ ವ್ಯಕ್ತ ಪಡಿಸಿದ್ದಾರೆ.

ಸುದೀಪ್ ಸಂತಸ

ಸುದೀಪ್ ಸಂತಸ

ಈ ಹಿಂದೆ ಸುದೀಪ್ ಮತ್ತು ಪ್ರಿಯಾ ದಂಪತಿಯ ಮುದ್ದಿನ ಮಗಳು ಸಾನ್ವಿ ''School Prefect'' (ಶಾಲೆಯ ಲೀಡರ್) ಆಗಿ ಆಯ್ಕೆ ಆಗಿದ್ದ ಸಂದರ್ಭದಲ್ಲಿ ಸುದೀಪ್ ಇದೇ ರೀತಿ ತಮ್ಮ ಸಂತಸವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದರು.

More from Filmibeat

English summary
Priya Sudeep has taken her twitter account to appreciate her husband Actor Sudeep.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X