»   » ಪ್ರೀತಿಯ ಪತ್ನಿ ಮತ್ತು ಮಗಳ ಜೊತೆ ಕಿಚ್ಚನ ಹೊಸ ವರ್ಷಾಚರಣೆ

ಪ್ರೀತಿಯ ಪತ್ನಿ ಮತ್ತು ಮಗಳ ಜೊತೆ ಕಿಚ್ಚನ ಹೊಸ ವರ್ಷಾಚರಣೆ

Posted By:
Subscribe to Filmibeat Kannada

ಹೊಸ ವರ್ಷ 2018ನ್ನು ಎಲ್ಲರೂ ಸಂಭ್ರಮದಿಂದ ಬರಮಾಡಿಕೊಂಡಿದ್ದಾರೆ. ಸಿನಿಮಾ ತಾರೆಯರು ಕೂಡ ಅದಷ್ಟು ತಮ್ಮ ಸಿನಿಮಾ ಕೆಲಸಗಳನ್ನು ದೂರ ಇಟ್ಟು ಮನೆಯರ ಮತ್ತು ಗೆಳೆಯ ಗೆಳತಿಯರ ಜೊತೆ ಸಂಭ್ರಮಾಚರಣೆ ಮಾಡಿದ್ದಾರೆ. ನಟ ಕಿಚ್ಚ ಸುದೀಪ್ ಕೂಡ ಸಂತೋಷದಿಂದ ಈ ವರ್ಷವನ್ನು ಶುರು ಮಾಡಿದ್ದಾರೆ.

ನಟ ಸುದೀಪ್ ಸಾಧನೆ ಕಂಡು ಪತ್ನಿ ಪ್ರಿಯಾ ಆಡಿದ ಮಾತುಗಳು ಹೀಗಿವೆ..

ತಮ್ಮ ಸಿನಿಮಾ ಮತ್ತು ಸಿ.ಸಿ.ಎಲ್ ಪಂದ್ಯದಲ್ಲಿ ಬಿಜಿ ಇದ್ದ ಸುದೀಪ್ ಹೊಸ ವರ್ಷವನ್ನು ತಮ್ಮ ಕುಟುಂಬದೊಂದಿಗೆ ಆಚರಣೆ ಮಾಡುವುದನ್ನು ಮರೆಯಲಿಲ್ಲ. ಹೊಸ ವರ್ಷದ ದಿನ ಸುದೀಪ್ ತಮ್ಮ ಪತ್ನಿ ಪ್ರಿಯಾ ಮತ್ತು ಮಗಳು ಸಾನ್ವಿ ಜೊತೆ ಸಂತಸದ ಕ್ಷಣಗಳನ್ನು ಕಳೆದಿದ್ದಾರೆ. ಅಂದಹಾಗೆ, ಸುದೀಪ್ ಪತ್ನಿ ಪ್ರಿಯಾ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಈ ಖುಷಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಸುದೀಪ್ ಮತ್ತು ಮಗಳು ಸಾನ್ವಿ ಜೊತೆ ಇರುವ ಫೋಟೋ ಹಾಕಿ ಹೊಸ ವರ್ಷಕ್ಕೆ ಶುಭ ಕೋರಿದ್ದಾರೆ. ಈ ರೀತಿಯಲ್ಲಿ ಹೊಸ ವರ್ಷವನ್ನು ಸುದೀಪ್ ಕುಟುಂಬ ವೆಲ್ ಕಮ್ ಮಾಡಿದೆ.

ಸುದೀಪ್ ಮತ್ತು ಪತ್ನಿ ಪ್ರಿಯಾ ನಡುವೆ ಇದ್ದ ಮುನಿಸು ವಿಚ್ಚೇದನದ ವರೆಗೆ ಹೋಗಿತ್ತು. ಆದರೆ ಕೋರ್ಟ್ ನಲ್ಲಿ ಇನ್ನು ವಿಚ್ಚೇದನದ ಕೇಸ್ ಇರುವಾಗಲೇ ಈ ಜೋಡಿ ಮತ್ತೆ ಒಂದಾಗಿ ಹೊಸ ಜೀವನ ಶುರು ಮಾಡಿದರು. ಮತ್ತೆ ಸುದೀಪ್ ಅವರ ಶಾಂತಿ ನಿವಾಸದಲ್ಲಿ ಶಾಂತಿ ನೆಲೆಸಿತು. ಇನ್ನು ಇದೀಗ ಸುದೀಪ್ ಮತ್ತು ಪ್ರಿಯಾ ಹೊಸ ವರ್ಷ ಆಚರಣೆಗೆ ಅನೇಕ ಅಭಿಮಾನಿಗಳು ಶುಭ ಕೋರಿದ್ದಾರೆ. ಸುದೀಪ್ ಅವರ ಸಾವಿರಾರೂ ಫ್ಯಾನ್ಸ್ ಟ್ವಿಟ್ಟರ್ ನಲ್ಲಿ ವಿಶ್ ಮಾಡಿದ್ದಾರೆ.

Priya Sudeep has taken her twitter account to wish for new year

ಉಳಿದಂತೆ ಸುದೀಪ್ 'ದಿ ವಿಲನ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಮೊದಲ ಬಾರಿಗೆ ಶಿವಣ್ಣ ಮತ್ತು ಸುದೀಪ್ ಒಟ್ಟಿಗೆ ಅಭಿನಯಿಸುತ್ತಿದ್ದಾರೆ. ಅದರ ಜೊತೆಗೆ 'ಅಂಬಿ ನಿಂಗೆ ವಯಸ್ಸಾಯ್ತೋ' ಚಿತ್ರಕ್ಕೆ ಕಿಚ್ಚ ಬಂಡವಾಳ ಹಾಕಿದ್ದಾರೆ. ಈ ವರ್ಷವೂ ಸುದೀಪ್ ಸಿಕ್ಕಾಪಟ್ಟೆ ಬಿಜಿ ಇದ್ದು, 'ಕೋಟಿಗೊಬ್ಬ 3' ಮತ್ತು 'ಪೈಲ್ವಾನ್' ಚಿತ್ರಗಳು ಈ ವರ್ಷ ಶುರು ಆಗಲಿದೆ.

English summary
Kannada actor Sudeep wife Priya Sudeep has taken her twitter account to wish for new year. She posted a photo with Sudeep and her daughter Sanvi.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X