Just In
Don't Miss!
- News
ರೆಮಿಡಿಸ್ವಿರ್ ಔಷಧ ದುರ್ಬಳಕೆ ಮಾಡಿದರೆ ಹುಷಾರ್!: ಬೊಮ್ಮಾಯಿ ಖಡಕ್ ಎಚ್ಚರಿಕೆ
- Finance
25,000 ಹೊಸ ಉದ್ಯೋಗಿಗಳನ್ನ ನೇಮಕ ಮಾಡಿಕೊಳ್ಳಲಿದೆ ಇನ್ಫೋಸಿಸ್
- Sports
ಐಪಿಎಲ್ 2021: ಟಿ20 ಕ್ರಿಕೆಟ್ನಲ್ಲಿ ಮಹತ್ವದ ಮೈಲಿಗಲ್ಲು ದಾಟಲು ಅಶ್ವಿನ್ ಸಜ್ಜು
- Automobiles
ಹೊಸ ಫೀಚರ್ಸ್ಗಳೊಂದಿಗೆ ಬಜಾಜ್ ಸಿಟಿ110ಎಕ್ಸ್ ಬೈಕ್ ಬಿಡುಗಡೆ
- Education
Kalaburagi Mahanagara Palike Recruitment 2021: 219 ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ
- Lifestyle
ರಂಜಾನ್ 2021: ಉಪವಾಸದ ಈ ತಿಂಗಳಿನಲ್ಲಿ ಹೀಗೆ ಮಾಡಿದರೆ ರೋಗ ನಿರೋಧಕ ಶಕ್ತಿ ವೃದ್ಧಿಸುವುದು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ದೀಪು'ವಿನಿಂದ 'ಬಾದ್‌ಷಾ' ಸುದೀಪ್‌ವರೆಗೂ ಪ್ರತ್ಯಕ್ಷ ಸಾಕ್ಷಿಯಾಗಿದ್ದೇನೆ- ಪ್ರಿಯಾ
ಭಾರತೀಯ ಚಿತ್ರರಂಗದಲ್ಲಿ ಕಿಚ್ಚ ಸುದೀಪ್ ಅವರು 25 ವರ್ಷ ಪೂರೈಸಿದ್ದಾರೆ. ಸ್ಯಾಂಡಲ್‌ವುಡ್ ಬಾದ್‌ಷಾ ಸಾಧನೆಯನ್ನು ಕೊಂಡಾಡಲು ಫ್ಯಾಂಟಮ್ ಚಿತ್ರತಂಡ ಬಹಳ ವಿಶೇಷವಾದ ಕಾರ್ಯಕ್ರಮವನ್ನು ಆಯೋಜಿಸಿದೆ. ಪ್ರಪಂಚದ ಅತಿ ಎತ್ತರದ ಬುರ್ಜ್ ಖಲೀಫ ಕಟ್ಟಡದ ಮೇಲೆ ಸುದೀಪ್ ಅವರ ಕಟೌಟ್ ಪ್ರದರ್ಶನ ಮಾಡುತ್ತಿದೆ.
ಜನವರಿ 31ರ ರಾತ್ರಿ 9 ಗಂಟೆಗೆ ಈ ಕಾರ್ಯಕ್ರಮ ನಿಗದಿಯಾಗಿದ್ದು, ಕಿಚ್ಚನ ಅಭಿಮಾನಿಗಳು ಬಹಳ ಥ್ರಿಲ್ ಆಗಿದ್ದಾರೆ. ಸುದೀಪ್, ಅನೂಪ್ ಭಂಡಾರಿ, ಸುದೀಪ್ ಪತ್ನಿ ಪ್ರಿಯಾ, ನಿರ್ಮಾಪಕ ಜಾಕ್ ಮಂಜು ಸೇರಿದಂತೆ ಕಿಚ್ಚನ ತಂಡ ದುಬೈ ತಲುಪಿದೆ. ಇದೀಗ, ಸುದೀಪ್ ಪತ್ನಿ ಕಿಚ್ಚನ ಸಾಧನೆ ಕುರಿತು ಟ್ವಿಟ್ಟರ್‌ನಲ್ಲಿ ಸಂತಸ ಹಂಚಿಕೊಂಡಿದ್ದಾರೆ. ಮುಂದೆ ಓದಿ...

ದೀಪುವಿನ ಸಾಧನೆಗೆ ಪ್ರತ್ಯಕ್ಷ ಸಾಕ್ಷಿ
''ನಂಬಲಾಗದ ರೀತಿಯಲ್ಲಿ ನಿಮ್ಮ ಬೆಳವಣಿಗೆಯನ್ನು ಫಿಲ್ಮ್ ನೆಗೆಟಿವ್ನಿಂದ ಡಿಜಿಟಲ್ ವರೆಗೂ, ಸಿಂಗಲ್ ಸ್ಕ್ರೀನ್ನಿಂದ ಮಲ್ಟಿಪ್ಲೆಕ್ಸ್ ವರೆಗೂ, ತಾಯವ್ವ ಸಿನಿಮಾದ ರಾಮು ಇಂದ ವಿಕ್ರಾಂತ್ ರೋಣವರೆಗೂ, ಕಬ್ಬಿಣದ ಕಾಲಿನಿಂದ ಚಿನ್ನದ ಕಾಲಿಗೂ, ಸರೋವರ ಹೋಟೆಲ್ ನಿಂದ ಬುರ್ಜ್ ಖಲೀಫಾವರೆಗೂ ನನ್ನ ಪ್ರೀತಿಯ "ದೀಪು" ವಿನಿಂದ ಬಾದಷಾ ಕಿಚ್ಚ ಸುದೀಪ್ ವರೆಗೂ ಪ್ರತ್ಯಕ್ಷವಾಗಿ ಸಾಕ್ಷಿಯಾಗಿದ್ದೇನೆ. 25 ವರ್ಷಗಳು ಅಷ್ಟೇ ಅಲ್ಲ, ಇನ್ನೂನು ಬೇಕಾಗಿದೆ.'' ಎಂದು ಸುದೀಪ್ ಪತ್ನಿ ಪ್ರಿಯಾ ಟ್ವೀಟ್ ಮಾಡಿದ್ದಾರೆ.
10 ಸಾವಿರ ಬುರ್ಜ್ ಖಲೀಫಾ ಕೊಟ್ರು ಆ ಒಂದು ಕ್ಷಣವನ್ನು ರಿಪ್ಲೇಸ್ ಮಾಡಲು ಸಾಧ್ಯವಿಲ್ಲ- ಸುದೀಪ್

ಕಾಮನ್ ಡಿಪಿ ಬಿಡುಗಡೆ ಮಾಡಿದ ಪ್ರಿಯಾ
ಸುದೀಪ್ ಅವರು 25 ವರ್ಷ ಪೂರೈಸಿದ ವಿಶೇಷ ಸಂದರ್ಭದ ಪ್ರಯುಕ್ತ, ಪ್ರಿಯಾ ಸುದೀಪ್ ಕಾಮನ್ ಡಿಪಿ ಬಿಡುಗಡೆ ಮಾಡಿದ್ದಾರೆ. ನಟ, ನಿರ್ದೇಶಕ, ನಿರ್ಮಾಪಕ, ಗಾಯಕ, ಕ್ರೀಡಾಪಟು ಹೀಗೆ ಪರಿಪೂರ್ಣ ಕಲಾವಿದ ಎಂದು ಬಿಂಬಿಸುವಂತ ಫೋಟೋ ಅನಾವರಣಗೊಂಡಿದೆ.

ಟ್ವಿಟ್ಟರ್‌ನಲ್ಲಿ ಹೆಸರು ಬದಲಾಯಿಸಿಕೊಂಡ ಪತ್ನಿ
ಕಿಚ್ಚ ಸುದೀಪ್ ಅವರ ಸಾಧನೆಯ ಸ್ಮರಣಾರ್ಥ ಪ್ರಿಯಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿರುವ ಹೆಸರು ಬದಲಾಯಿಸಿಕೊಂಡಿದ್ದಾರೆ. ಈ ಮೊದಲು ಪ್ರಿಯಾ ರಾಧಕೃಷ್ಣನ್ (priya radhakrishnan) ಎಂದಿತ್ತು. ಈಗ, ''Baadshah Kichcha Priya/ಬಾದಷಾ ಕಿಚ್ಚ ಪ್ರಿಯ'' ಎಂದು ಬದಲಾಗಿದೆ.
ಸುದೀಪ್ 'ಫ್ಯಾಂಟಮ್' ಸಿನಿಮಾ 'ವಿಕ್ರಾಂತ್ ರೋಣ' ಆಗಿದ್ದೇಕೆ? ನಿರ್ದೇಶಕರು ಹೇಳಿದ್ದೇನು?

ಸುದೀಪ್ ಮುಂದಿನ ಚಿತ್ರಗಳು?
ಅನೂಪ್ ಭಂಡಾರಿ ನಿರ್ದೇಶನದ ವಿಕ್ರಾಂತ್ ರೋಣ ಬಿಡುಗಡೆಯಾಗಬೇಕಿದೆ. ಸೂರಪ್ಪ ಬಾಬು ನಿರ್ಮಾಣದ ಕೋಟಿಗೊಬ್ಬ 3 ಚಿತ್ರವೂ ತೆರೆಕಾಣಲು ಸಜ್ಜಾಗಿದೆ. ಆರ್ ಚಂದ್ರು ಮತ್ತು ಉಪೇಂದ್ರ ಕಾಂಬಿನೇಷನ್‌ನ ಕಬ್ಜ ಸಿನಿಮಾದಲ್ಲೂ ಸುದೀಪ್ ಅತಿಥಿ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ನಡುವೆ ಸುದೀಪ್ ನಿರ್ದೇಶನದ ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ.