»   » ಎಕ್ಸ್ ಕ್ಲೂಸಿವ್: ಪ್ರಿಯಾಮಣಿ ಮದುವೆ ವಿಡಿಯೋ ನೋಡಿ

ಎಕ್ಸ್ ಕ್ಲೂಸಿವ್: ಪ್ರಿಯಾಮಣಿ ಮದುವೆ ವಿಡಿಯೋ ನೋಡಿ

Posted By:
Subscribe to Filmibeat Kannada

ದಕ್ಷಿಣ ಭಾರತದ ಖ್ಯಾತ ನಟಿ ಪ್ರಿಯಾಮಣಿ ಮುಂಬೈ ಮೂಲದ ಉದ್ಯಮಿ ಮುಸ್ತಫಾ ರಾಜ್ ಜೊತೆ ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಪ್ರಿಯಾಮಣಿ ಮದುವೆಯ ವಿಡಿಯೋ ನಿಮ್ಮ ಫಿಲ್ಮಿಬೀಟ್ ಗೆ ಲಭ್ಯವಾಗಿದೆ.

ಮೊದಲೇ ಹೇಳಿದಂತೆ ನಟಿ ಪ್ರಿಯಾಮಣಿ ಅವರ ವಿವಾಹ ಸರಳವಾಗಿ ರಿಜಿಸ್ಟರ್ ಕಚೇರಿಯಲ್ಲಿ ನಡೆದಿದೆ. ನಿರೀಕ್ಷೆಯಂತೆ ಟಿವಿ ಮಾಧ್ಯಮಗಳಲ್ಲಿ ಪ್ರಿಯಾಮಣಿ ಮದುವೆಯ ಅದ್ಭುತ ಕ್ಷಣದ ದೃಶ್ಯಗಳನ್ನ ನೋಡಬಹುದು ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ನಿರಾಸೆ ಆಗಿದೆ. ಯಾಕಂದ್ರೆ, ಮಾಧ್ಯಮದವರಿಗೆ ಪ್ರಿಯಾಮಣಿಯ ಅವರ ಮದುವೆಗೆ ಪ್ರವೇಶ ನೀಡಿರಲಿಲ್ಲ. ಆದ್ರೆ, ರಿಜಿಸ್ಟರ್ ಕಚೇರಿಯಿಂದಲೇ ಪ್ರಿಯಾಮಣಿ ಮತ್ತು ಮುಸ್ತಫಾ ರಾಜ್ ಅವರು ಮದುವೆಯ ವಿಡಿಯೋ ಲೀಕ್ ಆಗಿದ್ದು, ಮದುವೆಯ ಕ್ಷಣಗಳನ್ನ ಇಲ್ಲಿ ನೋಡಬಹುದು.

Priyamani Marraige Date Fixed | Watch Video For Complete Details | Filmibeat Kannada

ಸಿಂಪಲ್ ಆಗಿ ನೆರವೇರಿತು ಪ್ರಿಯಾಮಣಿ-ಮುಸ್ತಫಾ ರಾಜ್ ವಿವಾಹ

ನಟಿ ಪ್ರಿಯಾಮಣಿ ಹಸಿರು ಮತ್ತು ಹಳದಿ ಬಣ್ಣದ ಸೀರೆಯಲ್ಲಿ ಕಂಗೊಳಿಸಿದ್ರೆ, ಬಿಳಿ ಬಣ್ಣದ ವಸ್ತ್ರದಲ್ಲಿ ಮುಸ್ತಫಾ ರಾಜ್ ಮಿಂಚಿದ್ದಾರೆ. ಜಯನಗರದ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಕಾನೂನಿನ ಪ್ರಕಾರ ಮದುವೆ ಕಾರ್ಯಗಳನ್ನ ಪೂರ್ಣಗೊಳಿಸಿದ ನವ ಜೋಡಿಗಳು ನೂತನ ಬಾಳಿಗೆ ಹೆಜ್ಜೆ ಇಟ್ಟಿದ್ದಾರೆ.

ಮದುವೆ ಬಳಿಕ ನಟಿ ಪ್ರಿಯಾಮಣಿ ಸಿನಿಮಾ ಮಾಡೇ ಮಾಡ್ತಾರೆ.!

ಪ್ರಿಯಾಮಣಿ ಮತ್ತು ಮುಸ್ತಫಾ ರಾಜ್ ಅವರು ಮದುವೆ ಎಕ್ಸ್ ಕ್ಲೂಸಿವ್ ವಿಡಿಯೋ ಇಲ್ಲಿದೆ ನೋಡಿ.....

English summary
Kannada Actress Priyamani weds Mustafa Raj. Here is the exclusive video of Priyamani marriage
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada