»   » ಮದುವೆ ನಂತರ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಪ್ರಿಯಾಮಣಿ

ಮದುವೆ ನಂತರ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಪ್ರಿಯಾಮಣಿ

Posted By:
Subscribe to Filmibeat Kannada
ಪ್ರಿಯಾಮಣಿ ಮದುವೆಯಾದಮೇಲೆ ರಾಜಕೀಯಕ್ಕೆ ಧುಮುಕಿದ್ದಾರಾ? | Filmibeat Kannada

ಬಹುಭಾಷಾ ನಟಿ ಪ್ರಿಯಾಮಣಿ ಕಳೆದ ವರ್ಷದ ಅಂತ್ಯದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಜಯನಗರದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸರಳವಾಗಿ ಮುಸ್ತಾಫ್ ರಾಜ್ ಅವರೊಂದಿಗೆ ವಿವಾಹವಾಗಿದ್ದರು. ದಾಂಪತ್ಯ ಜೀವನಕ್ಕೆ ಕಾಲಿಟ್ಟು ಹೊಸ ಜೀವನ ಆರಂಭಿಸಿರುವ ಪ್ರಿಯಾಮಣಿ ಈಗ ರಾಜಕೀಯಕ್ಕೆ ಧುಮುಕಿದ್ದಾರೆ.

ಸಿನಿಮಾ ಕಲಾವಿದರು ರಾಜಕೀಯಕ್ಕೆ ಬರೋದು ವಿಶೇಷವೇನು ಅಲ್ಲ. ಈಗಾಗಲೇ ರಮ್ಯಾ, ಅಂಬರೀಷ್, ಜಗ್ಗೇಶ್, ರಕ್ಷಿತಾ, ಶ್ರುತಿ, ಪೂಜಾ ಗಾಂಧಿ, ತಾರಾ, ಮಾಳವಿಕ ಅವಿನಾಶ್, ಶಿಲ್ಪಾ ಗಣೇಶ್, ಗೀತಾ ಶಿವರಾಜ್ ಕುಮಾರ್, ಜಯಮಾಲ ಸೇರಿದಂತೆ ಹಲವರು ನಟ-ನಟಿಯರು ರಾಜಕೀಯದಲ್ಲಿ ತೊಡಗಿಕೊಂಡಿದ್ದಾರೆ.

ಸಿಂಪಲ್ ಆಗಿ ನೆರವೇರಿತು ಪ್ರಿಯಾಮಣಿ-ಮುಸ್ತಫಾ ರಾಜ್ ವಿವಾಹ

ಇದೀಗ, ಬಹುಭಾಷಾ ನಟಿ ಪ್ರಿಯಾಮಣಿ ಈಗ ಹೊಸದಾಗಿ ರಾಜಕೀಯಕ್ಕೆ ಪ್ರವೇಶ ಮಾಡಿದ್ದು, ಜನಶಕ್ತಿ ಪಕ್ಷದಿಂದ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಅಷ್ಟಕ್ಕೂ, ಪ್ರಿಯಾಮಣಿ ರಾಜಕೀಯಕ್ಕೆ ಬರೋದು ನಿಜಾನ? ಯಾವ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ? ಏನಿದು ಪ್ರಿಯಾ ಬಗ್ಗೆ ಹೊಸ ಸುದ್ದಿ ಎಂದು ತಿಳಿದುಕೊಳ್ಳಲು ಮುಂದೆ ಓದಿ.....

ಜನಶಕ್ತಿ ಪಕ್ಷದ ಅಭ್ಯರ್ಥಿಯಾದ ಪ್ರಿಯಾಮಣಿ

ಅಶೋಕ್ ಕಶ್ಯಪ್ ನಿರ್ದೇಶನ ಮಾಡುತ್ತಿರುವ 'ಧ್ವಜ' ಚಿತ್ರದಲ್ಲಿ ಪ್ರಿಯಾಮಣಿ ನಟಿಸುತ್ತಿರುವುದು ಗೊತ್ತಿರುವ ವಿಚಾರ. ಇದೊಂದು ರಾಜಕೀಯ ಸುತ್ತ ತಯಾರಾಗಿರುವ ಚಿತ್ರವಾಗಿದ್ದು, ಈ ಚಿತ್ರದಲ್ಲಿ ಪ್ರಿಯಾಮಣಿ ಜನಶಕ್ತಿ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.

ಮೂರೇ ತಿಂಗಳಿಗೆ ತವರಿನವರಿಗೆ ಸಿಹಿಸುದ್ದಿ ಕೊಟ್ಟ ನಟಿ ಪ್ರಿಯಾಮಣಿ.!

ಗಮನ ಸೆಳೆಯುತ್ತಿದೆ ಪೋಸ್ಟರ್

'ಧ್ವಜ' ಚಿತ್ರದ ಪೋಸ್ಟರ್ ಗಳು ಬಿಡುಗಡೆಯಾಗಿದ್ದು, ಗಮನ ಸೆಳೆಯುತ್ತಿದೆ. ನಿಜ ಜೀವನದ ರಾಜಕಾರಣಿಯಂತೆ ಸೀರೆಯುಟ್ಟು, ಕೈ ಮುಗಿದು ಪೋಸ್ ಕೊಟ್ಟಿರುವ ಪ್ರಿಯಾಮಣಿ ಅವರ ಗೆಟಪ್ ಮೋಡಿ ಮಾಡುತ್ತಿದೆ.

ಚಿತ್ರೀಕರಣ ಕಂಪ್ಲೀಟ್

ಸುಧಾ ಬಸವೇಗೌಡ ರವರು ನಿರ್ಮಾಣ ಮಾಡುತ್ತಿರುವ ಧ್ವಜ ಸಿನಿಮಾದ ಚಿತ್ರೀಕರಣ ಕಂಪ್ಲೀಟ್ ಆಗಿದೆ. ಸದ್ಯ, ಪೋಸ್ಟರ್ ಗಳ ಮೂಲಕ ಆಕರ್ಷಣೆ ಮಾಡುತ್ತಿರುವ ಈ ಸಿನಿಮಾ ಆದಷ್ಟೂ ಬೇಗ ತೆರೆಕಾಣಲಿದೆ.

'ಹುಲಿರಾಯ' ಚೆಲುವೆಗೆ ಒಲಿದು ಬಂತು ದೊಡ್ಡ ಅವಕಾಶ!

ಪ್ರತಿಭಾನ್ವಿತ ಕಲಾವಿದರ 'ಧ್ವಜ'

ಪ್ರಿಯಾಮಣಿ ಜೊತೆಯಲ್ಲಿ ರವಿ ಗೌಡ ಹಾಗೂ ದಿವ್ಯ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಇನ್ನುಳಿದಂತೆ ಟಿ.ಎನ್ ಸೀತಾರಾಮ್, ತಬಲ ನಾಣಿ, ವೀಣಾ ಸುಂದರ್ ಕೂಡ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಂತೋಷ್ ನಾರಾಯಣ್ ಅವರ ಸಂಗೀತ ಮತ್ತು ಮಂಜು ಮಾಂಡವ್ಯ ಅವರ ಸಂಭಾಷಣೆ ಈ ಚಿತ್ರಕ್ಕಿದೆ.

English summary
Kannada actress Priyamani starrer new movie 'dwaja' is completes shooting and ready to release. the movie directed by ashok kashyap and produced by suda basave gowda.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X