For Quick Alerts
  ALLOW NOTIFICATIONS  
  For Daily Alerts

  ಮದುಮಗಳಿಗೆ ಶುಭಕೋರಿದ ಪ್ರಿಯಾಂಕ ಚೋಪ್ರಾ

  By Pavithra
  |

  ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಭಾವನಾ ಮತ್ತು ನವೀನ್ ಅವರಿಗೆ ಚಿತ್ರರಂಗ ಹಾಗೂ ಅಭಿಮಾನಿಗಳ ಕಡೆಯಿಂದ ಶುಭಾಶಯಗಳು ಹರಿದು ಬರುತ್ತಿವೆ. ಮಲೆಯಾಳಂ ಹಾಗೂ ಕನ್ನಡ ಸಿನಿಮಾರಂಗದಲ್ಲಿ ಸಾಕಷ್ಟು ಪ್ರಖ್ಯಾತಿ ಪಡೆದಿರುವ ನಟಿ ಭಾವನ ಮದುವೆಗೆ ಬಿ ಟೌನ್ ನ ಬೆಡಗಿ ಪ್ರಿಯಾಂಕ ಚೋಪ್ರಾ ಶುಭ ಹಾರೈಸಿದ್ದಾರೆ.

  "ಭಾವನಾ ಹಾಗೂ ನವೀನ್ ನಿಮ್ಮಿಬ್ಬರಿಗೂ ಮದುವೆಯ ಶುಭಾಶಯಗಳು, ಮದುವೆ ಎನ್ನುವುದು ಜೀವನದ ಮತ್ತೊಂದು ಹಂತ. ಈ ಪ್ರಯಾಣದಲ್ಲಿ ನಿಮಗೆ ಒಳ್ಳೆದಾಗಲಿ. ಭಾವನಾ ನೀವು ಅತ್ಯುತ್ತಮ ನಟಿ ಹಾಗೂ ಬುದ್ದಿವಂತ ಮಹಿಳೆ. ನಾನು ನಿಮ್ಮನ್ನ ಇಷ್ಟ ಪಡುತ್ತೇನೆ". ಎಂದು ವಿಡಿಯೋ ಮಾಡಿ ಟ್ವಿಟ್ಟರ್ ನಲ್ಲಿ ಹಾಕಿದ್ದಾರೆ ನಟಿ ಪ್ರಿಯಾಂಕ ಚೋಪ್ರಾ.

  ಹಸೆಮಣೆ ಏರಿದ ಖ್ಯಾತ ನಟಿ 'ಜಾಕಿ' ಭಾವನಾ

  ಸದ್ಯ ಈ ವಿಡಿಯೋ ಎಲ್ಲೆಡೆ ಸುದ್ದಿ ಆಗಿದೆ. ಇದರಿಂದ ಖುಷಿ ಆಗಿರುವ ಭಾವನಾ ಅಭಿಮಾನಿಗಳು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ವಿಡಿಯೋ ಶೇರ್ ಮಾಡುತ್ತಿದ್ದಾರೆ.

  ಭಾವನಾ ಹಾಗೂ ನವೀನ್ ಮದುವೆಯ ನಂತರ ಕೇರಳದಲ್ಲಿ ಚಿಕ್ಕದಾಗಿ ಆರತಕ್ಷತೆಯನ್ನ ಮಾಡಿಕೊಂಡಿದ್ದಾರೆ. ನಟಿ ಭಾಮಾ, ಶಮ್ನಾ ಕಾಸಿಮ್, ಚಾಂದಿನಿ ಶ್ರೀಧರನ್ ಹೀಗೆ ಇನ್ನೂ ಅನೇಕರು ಮದುವೆ ಸಂಭ್ರಮದಲ್ಲಿ ಭಾಗಿ ಆಗಿ ವಧುವರರಿಗೆ ಶುಭಾಶಯ ಕೋರಿದ್ದಾರೆ.

  ಚಿತ್ರಗಳು: 'ಜಾಕಿ' ಭಾವನಾ ಮದುವೆ ಸಂಭ್ರಮ

  ಸಂಜೆ ಮಲೆಯಾಳಂ ಚಿತ್ರರಂಗದ ಗಣ್ಯರಿಗೆ ಮತ್ತು ಅಭಿಮಾನಿಗಳಿಗಾಗಿ ಭಾವನಾ ಹಾಗೂ ನವೀನ್ ಅವರ ಅದ್ಧೂರಿ ಆರತಕ್ಷತೆಗೆ ತಯಾರಿ ಮಾಡಿಕೊಳ್ಳಲಾಗಿದೆ. ಬೆಂಗಳೂರಿನಲ್ಲಿ ಫೆಬ್ರವರಿ 4ರಂದು ಮತ್ತೊಂದು ಆರತಕ್ಷತೆ ನಡೆಯಲಿದೆ.

  English summary
  Priyanka Chopra sends wedding wishes to actress Bhavana. video of actress Priyanka Chopra congratulating the happy couple went viral. In the video, which has been shared by several fan clubs.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X