»   » ಸದ್ದಿಲ್ಲದೇ ಮಾಲಿವುಡ್ ಗೆ ಕಾಲಿಟ್ಟ 'ಗಣಪ'ನ ನಾಯಕಿ ಪ್ರಿಯಾಂಕಾ

ಸದ್ದಿಲ್ಲದೇ ಮಾಲಿವುಡ್ ಗೆ ಕಾಲಿಟ್ಟ 'ಗಣಪ'ನ ನಾಯಕಿ ಪ್ರಿಯಾಂಕಾ

Posted By:
Subscribe to Filmibeat Kannada

'ಗಣಪ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಮಿಂಚಿದ ನಟಿ ಪ್ರಿಯಾಂಕಾ ಈಗ ಮಾಲಿವುಡ್ ನಲ್ಲಿ ಅದೃಷ್ಠ ಪರೀಕ್ಷೆಗೆ ಮುಂದಾಗಿದ್ದಾರೆ. ಕನ್ನಡದ ಒಂದೆರಡು ಚಿತ್ರಗಳಲ್ಲಿ ನಟಿಸಿದ್ದ ಪ್ರಿಯಾಂಕಾಗೆ ಮಲಯಾಳಂನಿಂದ ಆಫರ್ ಬಂದಿದ್ದು, ಈಗಾಗಲೇ ಒಂದು ಚಿತ್ರಕ್ಕೆ ಒಪ್ಪಿಗೆ ಕೂಡ ಹಾಕಿದ್ದಾರೆ.

ಮಲಯಾಳಂನ ರೋಶನ್ ಆಂಡ್ರೂಸ್ ನಿರ್ದೇಶನದ 'ಕಯಾಮುಕುಲಂ ಕೊಚುನ್ನಿ' ಚಿತ್ರದಲ್ಲಿ ಪ್ರಿಯಾಂಕಾ ನಟಿಸುತ್ತಿದ್ದು, ನಟ ನವೀನ್ ಪೌಲಿ ಮತ್ತು ಅಮಲಾ ಪೌಲ್ ಜತೆ ತೆರೆ ಹಂಚಿಕೊಳ್ಳಲಿದ್ದಾರೆ.

Priyanka to get a big launch in Mollywood

ಇದು 19ನೇ ಶತಮಾನದ ಕಥೆಯಾಧಾರಿತ ಚಿತ್ರವಾಗಲಿದ್ದು, ಸೆಪ್ಟೆಂಬರ್ ನಲ್ಲಿ ಚಿತ್ರದ ಶೂಟಿಂಗ್ ಆರಂಭಗೊಳ್ಳಲಿದೆ. ವಿಶೇಷ ಅಂದ್ರೆ, ಈ ಚಿತ್ರದ ಚಿತ್ರೀಕರಣವನ್ನ ಕರ್ನಾಟಕದ ಮಂಗಳೂರು ಮತ್ತು ಉಡುಪಿಯಲ್ಲೂ ಮಾಡಲಿದ್ದಾರೆ.

Priyanka to get a big launch in Mollywood

'ಗಣಪ' ಚಿತ್ರದ ನಂತರ ಪ್ರಿಯಾಂಕಾ, ಗಣೇಶ್ ಅಭಿನಯದ 'ಪಟಾಕಿ' ಚಿತ್ರದಲ್ಲೂ ಅಭಿನಯಿಸಿದ್ದರು. ಇದರ ಜೊತೆಗೆ ಸುನಿ ನಿರ್ದೇಶನದ 'ಜಾನ್ ಸಿನಾ' ಮತ್ತು ಕಾರ್ತಿಕ್ ಸರಗೂರ್ ನಿರ್ದೇಶನದ 'ಭೀಮ ಸೇನ ನಳ ಮಹಾರಾಜ' ಚಿತ್ರದಲ್ಲೂ ಅಭಿನಯಿಸಲಿದ್ದಾರೆ.

English summary
Kannada film Ganapa, actress Priyanka will now be testing her luck in the Malayalam film industry. she has signed her first Malayalam movie — Rosshan Andrrews upcoming directorial Kayamkulam Kochunni

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada