For Quick Alerts
  ALLOW NOTIFICATIONS  
  For Daily Alerts

  ಪ್ರಿಯಾಂಕ ಉಪೇಂದ್ರ ಮನೆಯಲ್ಲಿ ಭೀಮನ ಅಮಾವಾಸ್ಯೆ ಸಂಭ್ರಮ

  By Naveen
  |

  ನಿನ್ನೆ (ಆಗಸ್ಟ್ 11) ರಂದು ನಾಡಿನ ಜನತೆ ಶ್ರದ್ಧೆ ಭಕ್ತಿಯಿಂದ ಭೀಮನ ಅಮಾವಾಸ್ಯೆ ಹಬ್ಬವನ್ನು ಆಚರಣೆ ಮಾಡಿದ್ದಾರೆ. ಹೆಣ್ಣು ಮಕ್ಕಳು ತಮ್ಮ ಪತಿಯ ಆರೋಗ್ಯ, ಆಯಸ್ಸು ಹಾಗೂ ತಮ್ಮ ಮಾಂಗಲ್ಯ ಭಾಗ್ಯ ಶಾಶ್ವತವಾಗಿರಲಿ ಎಂದು ಈ ವ್ರತವನ್ನು ಮಾಡುತ್ತಾರೆ. ಇನ್ನು ನಟಿ ಪ್ರಿಯಾಂಕ ಉಪೇಂದ್ರ ಕೂಡ ನಿನ್ನೆ ಈ ಹಬ್ಬವನ್ನು ಆಚರಣೆ ಮಾಡಿದ್ದಾರೆ.

  ಪ್ರಿಯಾಂಕ ಉಪೇಂದ್ರ ಅವರಿಗೆ ದೇವರ ಬಗ್ಗೆ ನಂಬಿಕೆ ಜಾಸ್ತಿ. ಪ್ರತಿ ಹಬ್ಬವನ್ನು ತುಂಬ ಚೆನ್ನಾಗಿ ತಮ್ಮ ಮನೆಯಲ್ಲಿ ಅವರು ಆಚರಿಸುತ್ತಾರೆ. ಎಲ್ಲ ಹಬ್ಬದಲ್ಲಿ ದೇವರ ಆರಾಧನೆ ಬಹಳ ಜೋರಾಗಿ ನಡೆಯುತ್ತದೆ. ನಿನ್ನೆ ಕೂಡ ಪ್ರಿಯಾಂಕ ಭೀಮನ ಅಮಾವಾಸ್ಯೆಯನ್ನು ಆಚರಿಸಿದ್ದಾರೆ. ಜೊತೆಗೆ ತಮ್ಮ ಫೇಸ್ ಬುಕ್ ಖಾತೆಯ ಮೂಲಕ ಎಲ್ಲರಿಗೆ ಹಬ್ಬದ ಶುಭಾಶಯ ತಿಳಿಸಿದ್ದಾರೆ.

  ಪತಿಯ ಆಯುಷ್ಯವೃದ್ಧಿಗಾಗಿ ಇಂದು ಭೀಮನ ಅಮಾವಾಸ್ಯೆ ವ್ರತ: ಹಿನ್ನೆಲೆ ಏನು?

  ಪ್ರಿಯಾಂಕ ತಮ್ಮ ಪ್ರೀತಿಯ ಪತಿ ನಟ ಉಪೇಂದ್ರ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ. ಉಪೇಂದ್ರ ಹಾಗೂ ತಮ್ಮ ಇಡೀ ಕುಟುಂಬ ಖುಷಿಯಾಗಿ ಇರಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದ್ದಾರೆ. ಹಬ್ಬದ ದಿನ ಉಪೇಂದ್ರ ಅವರ ಜೊತೆಗೆ ತೆಗೆಸಿಕೊಂಡ ಫೋಟೋವನ್ನು ಫೇಶ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

  priyanka upendra celebrated bheemana amavasya festival

  ಸದ್ಯ, ಪ್ರಿಯಾಂಕ ಉಪೇಂದ್ರ 'ಸೆಕೆಂಡ್ ಹಾಫ್' ಸಿನಿಮಾದ ನಂತರ 'ಹೌರಾ ಬ್ರಿಡ್ಜ್' ಚಿತ್ರದಲ್ಲಿ ಬ್ಯುಸಿ ಇದ್ದಾರೆ. ಇತ್ತ ಉಪೇಂದ್ರ 'ಐ ಲವ್ ಯೂ' ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿದ್ದಾರೆ.

  English summary
  Kannada Actress, Actor Upendra's wife Priyanka Upendra celebrated Bheemana Amavasya festival.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X