»   » ಪ್ರಿಯಾಂಕ ಉಪೇಂದ್ರಗೆ ಬಯಸದೆ ಬಂದ ಭಾಗ್ಯ

ಪ್ರಿಯಾಂಕ ಉಪೇಂದ್ರಗೆ ಬಯಸದೆ ಬಂದ ಭಾಗ್ಯ

Posted By:
Subscribe to Filmibeat Kannada

ಉಪೇಂದ್ರ ಮಡದಿ ಪ್ರಿಯಾಂಕ ಉಪೇಂದ್ರ ಈಗ ಫುಲ್ ಫ್ಲೆಜ್ಡ್ ಹೀರೋಯಿನ್ ಆಗಿ ಮರಳಿ ಸ್ಯಾಂಡಲ್ ವುಡ್ ನಲ್ಲಿ ಸಿನಿಮಾ ಮಾಡೋಕೆ ನಿರ್ಧರಿಸಿದ್ದಾರೆ. ಮದುವೆ ಆಯ್ತು, ಪತಿಯೊಂದಿಗೆ 'ಶ್ರೀಮತಿ' ಅಂತ ಸಿನಿಮಾ ಮಾಡಿದ್ದೂ ಆಯ್ತು. ಈಗೇನಿದ್ದರೂ ಒಬ್ಬ ಕಲಾವಿದೆಯಾಗಿ ತಮ್ಮ ಕನಸಿನ ಪಾತ್ರಗಳನ್ನ ಮಾಡುವ ಹಂಬಲದತ್ತ ಸಾಗಿದೆ ಪ್ರಿಯಾಂಕ ಉಪೇಂದ್ರ ಚಿತ್ತ.

ಹೌದು, ರಂಗೀನ್ ಲೋಕದ ಸೆಳೆತ ಪ್ರಿಯಾಂಕ ಉಪೇಂದ್ರ ರವರಿಗೂ ಇದೆ. ಬೆಂಗಾಲಿ ಬೆಡಗಿ ಪ್ರಿಯಾಂಕ, ರಿಯಲ್ ಸ್ಟಾರ್ ಉಪೇಂದ್ರ ಕೈಹಿಡಿದ ಮೇಲೆ ಬಣ್ಣದ ಲೋಕದಿಂದ ಕೊಂಚ ದೂರ ಉಳಿದಿದ್ದರು. ಇದೀಗ ಎಲ್ಲವೂ ಹಂತ ಹಂತವಾಗಿ ಸೆಟಲ್ ಆಗುತ್ತಿರುವುದರಿಂದ ಪ್ರಿಯಾಂಕ ಹಳೇ ಫಾರ್ಮ್ ಗೆ ಮರಳಿದ್ದಾರೆ.


Priyanka upendra starrer new movie titled as Priyanka

ಇತ್ತೀಚೆಗಷ್ಟೆ, ಅಂದ್ರೆ ಪ್ರಿಯಾಂಕ ಉಪೇಂದ್ರ ಹುಟ್ಟುಹಬ್ಬದಂದು 'ಮಮ್ಮಿ..ಸೇವ್ ಮಿ' ಅನ್ನುವ ಹಾರರ್ ಚಿತ್ರ ಅನೌನ್ಸ್ ಆಗಿತ್ತು. ಅದರಲ್ಲಿ ಏಳು ತಿಂಗಳ ಗರ್ಭಿಣಿ ಪಾತ್ರದಲ್ಲಿ ಪ್ರಿಯಾಂಕ ಉಪೇಂದ್ರ ಅಭಿನಯಿಸುತ್ತಿದ್ದಾರೆ. ಈ ಚಿತ್ರ ಇನ್ನೂ ಪ್ಲಾನಿಂಗ್ ಹಂತದಲ್ಲಿರುವಾಗಲೇ ಮತ್ತೊಂದು ಸಿನಿಮಾಗೆ ಪ್ರಿಯಾಂಕ ಹ್ಹೂಂ ಅಂದಿದ್ದಾರೆ. [ಪ್ರಿಯಾಂಕಾ ಉಪೇಂದ್ರ ಈಗ 7 ತಿಂಗಳ ಗರ್ಭಿಣಿ..!]


ಆ ಚಿತ್ರ ಯಾವ್ದು ಗೊತ್ತಾ? 'ಪ್ರಿಯಾಂಕ' ಅಂತ..! ಯೆಸ್, ಪ್ರಿಯಾಂಕ ಹೆಸರಲ್ಲೇ 'ಪ್ರಿಯಾಂಕ' ಅನ್ನುವ ಸಿನಿಮಾದಲ್ಲಿ ಪ್ರಿಯಾಂಕ ನಟಿಸಲಿದ್ದಾರೆ. ಚಿತ್ರಕ್ಕೆ ಖ್ಯಾತ ನಿರ್ದೇಶಕ ದಿನೇಶ್ ಬಾಬು ಆಕ್ಷನ್ ಕಟ್ ಹೇಳಲಿದ್ದಾರೆ.


ಇದೂ ಕೂಡ ಥ್ರಿಲ್ಲರ್ ಸಿನಿಮಾ ಆಗಿದ್ದು, 'ಪ್ರಿಯಾಂಕ' ಅನ್ನುವ ಟೈಟಲ್ ನ ದಿನೇಶ್ ಬಾಬೂ ಫಿಕ್ಸ್ ಮಾಡಿದ್ದಾರೆ. ''ಉಪೇಂದ್ರ ಹೆಸರಲ್ಲೂ ಒಂದು ಸಿನಿಮಾ ಬಂದಿದೆ. ನಿಮ್ಮ ಹೆಸರಲ್ಲೂ ನೀವು ಯಾಕೆ ಸಿನಿಮಾ ಮಾಡಬಾರದು'' ಅಂತ ಪ್ರಿಯಾಂಕ ಬಳಿ ಮಾತುಕತೆ ನಡೆಸಿದಾಗ ದಿನೇಶ್ ಬಾಬು ಒಮ್ಮೆ ಜೋಕ್ ಮಾಡಿದ್ದರಂತೆ. ಅದೀಗ ನಿಜವಾಗಿದೆ.


Priyanka upendra starrer new movie titled as Priyanka

'ಪ್ರಿಯಾಂಕ' ಹೀರೋಯಿನ್ ಓರಿಯೆಂಟೆಡ್ ಸಿನಿಮಾ. ಲವ್, ಸೆಂಟಿಮೆಂಟ್, ಥ್ರಿಲ್ಲರ್ ಎಲ್ಲವೂ ಹದವಾಗಿ ಬೆರಿತಿರುವ ಸಿನಿಮಾ. ಇಂತಹ ಅವಕಾಶ ಬಯಸದೇ ಬಂದಿರುವ ಕಾರಣ ಪ್ರಿಯಾಂಕ, ತಮ್ಮ ಹೆಸರಿನ ಚಿತ್ರಕ್ಕೆ ಓಕೆ ಅಂದಿದ್ದಾರೆ. ['ಉಪ್ಪಿ-2' ಹೀರೋಯಿನ್ ಪ್ರಿಯಾಂಕಾ ಉಪೇಂದ್ರ]


ಸದ್ಯಕ್ಕೆ 'ಉಪ್ಪಿ-2' ಪ್ರೊಡಕ್ಷನ್ ನಲ್ಲಿ ಬಿಜಿಯಿರುವ ಪ್ರಿಯಾಂಕ ಅದು ಮುಗಿದ ಬಳಿಕ 'ಮಮ್ಮಿ...ಸೇವ್ ಮಿ' ಮತ್ತು 'ಪ್ರಿಯಾಂಕ' ಚಿತ್ರಗಳಿಗೆ ಚಾಲನೆ ನೀಡಲಿದ್ದಾರೆ. (ಏಜೆನ್ಸೀಸ್)

English summary
Priyanka Upendra is back in action again. Along with 'Mummy...Save me', Priyanka Upendra has signed a new directorial venture of Dinesh Baboo's 'Priyanka'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada