For Quick Alerts
  ALLOW NOTIFICATIONS  
  For Daily Alerts

  ಮಕ್ಕಳಿಗೆ ಅಡುಗೆ ಹೇಳಿಕೊಡುತ್ತಿದ್ದಾರೆ ನಟಿ ಪ್ರಿಯಾಂಕಾ ಉಪೇಂದ್ರ

  |

  "ಮನೆಯೇ ಮೊದಲ ಪಾಠ ಶಾಲೆ. ತಾಯಿಯೇ ಮೊದಲ ಗುರು" ಎಂದು ಹೇಳುತ್ತಾರೆ. ಈ ಪದಕ್ಕೆ ಅರ್ಥ ತುಂಬುತ್ತಿದ್ದಾರೆ ಸ್ಯಾಂಡಲ್ ವುಡ್ ನಟಿ ಪ್ರಿಯಾಂಕಾ ಉಪೇಂದ್ರ. ಕಿಲ್ಲರ್ ಕೊರೊನಾ ಹಾವಳಿಯ ಪರಿಣಾಮ ಎಲ್ಲರೂ ಮನೆಯಲ್ಲಿ ಇರುವ ಸ್ಥಿತಿ ನಿರ್ಮಾಣವಾಗಿದೆ. ಎಲ್ಲರೂ ಕುಟುಂಬದ ಜೊತೆ ಕಾಲಕಳೆಯುತ್ತಿದ್ದಾರೆ.

  ಇದೆ ಸಮಯವನ್ನು ಬಳಸಿಕೊಂಡು ಅನೇಕ ಸೆಲೆಬ್ರಿಟಿಗಳು ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ. ಕೃಷಿ, ಸಮಾಜಿಕ ಕಾರ್ಯ, ಕಥೆ ಬರೆಯುವುದು, ಓದುವುದು, ಸಿನಿಮಾ ನೋಡುವುದು ಹೀಗೆ ಒಬ್ಬರು ಒಂದೊಂದು ಹವ್ಯಾಸಗಳನ್ನು ಬೆಳಸಿಕೊಂಡಿದ್ದಾರೆ. ನಟಿ ಪ್ರಿಯಾಂಕಾ ಉಪೇಂದ್ರ ಈ ಸಮಯದಲ್ಲಿ ಮಕ್ಕಳಿಗೆ ಮನೆಯ ಪಾಠ ಹೇಳಿಕೊಡುತ್ತಿದ್ದಾರೆ. ಮುಂದೆ ಓದಿ...

  ಅಡುಗೆ ಹೇಳಿ ಕೊಡುತ್ತಿರುವ ಪ್ರಿಯಾಂಕಾ

  ಅಡುಗೆ ಹೇಳಿ ಕೊಡುತ್ತಿರುವ ಪ್ರಿಯಾಂಕಾ

  ಪ್ರಿಯಾಂಕಾ ಉಪೇಂದ್ರ ಮುದ್ದಿನ ಮಗಳು ಐಶ್ವರ್ಯಾಗೆ ಮನೆಯಲ್ಲಿ ಅಡುಗೆ ಹೇಳಿಕೊಡುತ್ತಿದ್ದಾರೆ. ಸದ್ಯ ಐಶ್ವರ್ಯಾಗೂ ಶಾಲೆ ರಜೆ ಇದೆ. ಈ ಸಮಯವನ್ನು ಬಳಸಿಕೊಂಡು ಪ್ರಿಯಾಂಕಾ ಮಗಳಿಗೆ ರುಚಿಯಾದ ಅಡುಗೆ ತಯಾರಿಸುವುದನ್ನು ಕಲಿಸಿಕೊಡುತ್ತಿದ್ದಾರೆ. ಅಮ್ಮ ಹೇಳಿಕೊಡುತ್ತಿರುವ ಅಡುಗೆಯ ಪಾಠವನ್ನು ಕೇಳಿಕೊಂಡು ತಾನೆ ಅಡುಗೆ ತಯಾರಿಸುತ್ತಿದ್ದಾರೆ ಐಶ್ವರ್ಯ.

  ಮಗಳಿಗೆ ಮಾತ್ರವಲ್ಲ, ಮಗನಿಗೂ ಅಡುಗೆ ಪಾಠ

  ಮಗಳಿಗೆ ಮಾತ್ರವಲ್ಲ, ಮಗನಿಗೂ ಅಡುಗೆ ಪಾಠ

  ಅಡುಗೆ ಮನೆ ಹೆಣ್ಣು ಮಕ್ಕಳಿಗೆ ಮಾತ್ರ ಸೀಮಿತ, ಹೆಣ್ಣುಮಕ್ಕಳು ಮಾತ್ರ ಅಡುಗೆ ಕಲಿಯಬೇಕು ಎನ್ನುವ ಕಾಲ ಬದಲಾಗಿದೆ. ಈಗ ಗಂಡು ಮಕ್ಕಳು ಅಡುಗೆ ಕಲಿಯುತ್ತಾರೆ. ಹಾಗೂ ತುಂಬಾ ಚೆನ್ನಾಗಿಯೇ ಅಡುಗೆ ಮಾಡುತ್ತಾರೆ. ಪ್ರಿಯಾಂಕಾ ಮಗಳಿಗೆ ಮಾತ್ರವಲ್ಲದೆ ಮಗ ಆಯೂಷ್ ಗೂ ಅಡುಗೆ ಮನೆ ಪಾಠ ಹೇಳಿಕೊಡುತ್ತಿದ್ದಾರೆ. ಅಡುಗೆ ಜೊತೆಗೆ ಆಯೂಷ್ ಪಾತ್ರೆಗಳನ್ನು ತೊಳೆಯುತ್ತಿದ್ದಾರೆ.

  ಕನ್ನಡ ಪುಸ್ತಕ ಇಲ್ವಾ? ನೆಟ್ಟಿಗರ ಪ್ರಶ್ನೆ

  ಕನ್ನಡ ಪುಸ್ತಕ ಇಲ್ವಾ? ನೆಟ್ಟಿಗರ ಪ್ರಶ್ನೆ

  ಪ್ರಿಯಾಂಕಾ ಉಪೇಂದ್ರ ಮಗಳು ಐಶ್ವರ್ಯಾ ಅಡುಗೆ ಜೊತೆಗೆ ಪುಸ್ತಕಗಳನ್ನು ಓದುತ್ತಿದ್ದಾರೆ. ಅಂದ್ಹಾಗೆ ಐಶ್ವರ್ಯ ಓದಿನಲ್ಲಿಯೂ ತುಂಬಾ ಚುರುಕಿದ್ದಾರೆ. ಬಿಡುವಿನ ವೇಳೆಯಲ್ಲಿ ಪುಸ್ತಕಗಳನ್ನು ಓದುತ್ತಿರುತ್ತಾರೆ. ಸದ್ಯ ಐಶ್ವರ್ಯಾ ಓದುತ್ತಿರುವ ಪುಸ್ತಕ ನೋಡಿ ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ. ಇಂಗ್ಲೀಷ್ ಪುಸ್ತಕಗಳನ್ನು ಓದುತ್ತಿರುವ ಉಪ್ಪಿ ಮಗಳಿಗೆ ನೆಟ್ಟಿಗರು ಕನ್ನಡ ಪುಸ್ತಕ ಇಲ್ವಾ, ಮೊದಲು ಕನ್ನಡ ಪುಸ್ತಕ ಓದಲು ಕೊಡಿ ಎಂದು ಹೇಳುತ್ತಿದ್ದಾರೆ.

  ಸಿನಿಮಾದಲ್ಲೂ ಅಭಿನಯಿಸಿದ್ದಾರೆ ಐಶ್ವರ್ಯ

  ಸಿನಿಮಾದಲ್ಲೂ ಅಭಿನಯಿಸಿದ್ದಾರೆ ಐಶ್ವರ್ಯ

  ಉಪೇಂದ್ರ ಮಗಳು ಐಶ್ವರ್ಯ ಈಗಾಗಲೆ ಬಣ್ಣದ ಲೋಕಕ್ಕೂ ಕಾಲಿಟ್ಟಿದ್ದಾರೆ. ಪ್ರಿಯಾಂಕಾ ಅಭಿನಯದ ದೇವಕಿ ಸಿನಿಮಾ ಮೂಲಕ ಐಶ್ವರ್ಯ ಮೊದಲ ಬಾರಿಗೆ ಬಣ್ಣ ಹಚ್ಚಿದ್ದಾರೆ. ಬಾಲನಟಿಯಾಗಿ ಅಮ್ಮನ ಸಿನಿಮಾ ಮೂಲಕವೇ ಎಂಟ್ರಿ ಕೊಟ್ಟಿದ್ದಾರೆ. ಮಗಳ ಅಭಿನಯಕ್ಕೆ ಸಿನಿಪ್ರಿಯರಿಂದ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗಿದೆ.

  ಕೃಷಿ ಮಾಡುತ್ತಿರುವ ಉಪೇಂದ್ರ

  ಕೃಷಿ ಮಾಡುತ್ತಿರುವ ಉಪೇಂದ್ರ

  ಮಕ್ಕಳಿಬ್ಬರು, ಅಡುಗೆ, ಓದು ಅಂತ ಬ್ಯುಸಿಯಾಗಿದ್ದಾರೆ ರಿಯಲ್ ಸ್ಟಾರ್ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ತಮ್ಮದೆ ಜಮೀನಿನಲ್ಲಿ ಉಪೇಂದ್ರ ಕೃಷಿ ಮಾಡುತ್ತಿದ್ದಾರೆ. ಮೆಣಸಿನ ಗಿಡಗಳನ್ನು ನೆಡುತ್ತಿರುವ ಉಪೇಂದ್ರ ವಿಡಿಯೋ ವೈರಲ್ ಆಗಿದೆ. ಜೊತೆಗೆ ಸಾವಯವ ಕೃಷಿ, ವೈಜ್ಞಾನಿಕ ಕೃಷಿ ಬಗ್ಗೆ ಅಧ್ಯಯನ ಮಾಡುತ್ತಿದ್ದಾರೆ.

  English summary
  Actress Priyanka Upendra teach cooking to her Children. Priyanka Daughter Aishwarya and son Ayush are cooking.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X