»   » ಪೊಲೀಸ್ ಬಗ್ಗೆ ಸ್ಟಡಿ ಮಾಡ್ತಿದ್ದಾರೆ ಪ್ರಿಯಾಂಕಾ! ಏನ್ ಬುಕ್ ಬರೀತಿದಾರಾ?

ಪೊಲೀಸ್ ಬಗ್ಗೆ ಸ್ಟಡಿ ಮಾಡ್ತಿದ್ದಾರೆ ಪ್ರಿಯಾಂಕಾ! ಏನ್ ಬುಕ್ ಬರೀತಿದಾರಾ?

Posted By:
Subscribe to Filmibeat Kannada

'ಮಮ್ಮಿ ಸೇವ್ ಮಿ' ಚಿತ್ರದ ಯಶಸ್ಸಿನಲ್ಲಿರುವ ನಟಿ ಪ್ರಿಯಾಂಕಾ ಉಪೇಂದ್ರ ಈಗ ಅದೇ ಖುಷಿಯಲ್ಲಿ ಪೊಲೀಸರ ಬಗ್ಗೆ ಸ್ಟಡಿ ಮಾಡ್ತಿದ್ದಾರಂತೆ. ಈಗಂತ ವಿಷಯ ಕೇಳಿ ಈಗ ಸ್ಯಾಂಡಲ್ ವುಡ್ ಸಿನಿ ರಸಿಕರಿಗೆ ಈಗ ಪ್ರಶ್ನೆಗಳು ಹುಟ್ಟಿಕೊಂಡಿವೆ.[ದಾಖಲೆ ಬೆಲೆಗೆ ಸೇಲ್ ಆದ 'ಮಮ್ಮಿ' ಹಿಂದಿ ಡಬ್ಬಿಂಗ್ ರೈಟ್ಸ್.!]

ಪ್ರಿಯಾಂಕಾ ಮೇಡಂ ಪೊಲೀಸ್ ಬಗ್ಗೆ ಸ್ಟಡಿ ಮಾಡ್ತಿರೋದು ಏನ್ ಬುಕ್ ಬರೆಯೋಕಾ, ಹಾಗಿದ್ರೆ ಬುಕ್ ಬರೆದು ಮುಗಿಯುವ ವರೆಗೆ ಸಿನಿಮಾ ಮಾಡೋದಿಲ್ವಾ ಅನ್ನೋ ಪ್ರಶ್ನೆಗಳು ಹಲವರನ್ನಾ ಕಾಡುತ್ತಿವೆ. ಆದ್ರೆ ಖಂಡಿತಾ ಅವರು ಪೊಲೀಸ್ ಸ್ಟಡಿ ಮಾಡ್ತಿರೋದು ಬುಕ್ ಬರೆಯೋಕೆ ಅಲ್ಲಾ.. ಮತ್ಯಾಕೆ? ಉತ್ತರ ಇಲ್ಲಿದೆ. ನೋಡಿ.

ಪೊಲೀಸ್ ಅಧಿಕಾರಿಯಾಗಿ ನಟಿಸಲಿದ್ದಾರೆ ಪ್ರಿಯಾಂಕಾ

ಹೌದು, 'ಮಮ್ಮಿ ಸೇವ್ ಮಿ' ಚಿತ್ರದ ಯಶಸ್ಸಿನಲ್ಲಿರುವ ನಟಿ ಪ್ರಿಯಾಂಕ ಉಪೇಂದ್ರ ಈಗ ಮತ್ತೊಂದು ಸಿನಿಮಾಗೆ ಸೈನ್ ಮಾಡಿದ್ದಾರೆ. ಈ ಸಿನಿಮಾದಲ್ಲಿ ಲೇಡಿ ಪೊಲೀಸ್ ಆಫೀಸರ್ ಆಗಿ ಪ್ರಿಯಾಂಕಾ ಮಿಂಚಲಿದ್ದಾರಂತೆ. ಆದ್ದರಿಂದ ಪೊಲೀಸ್ ಬಗ್ಗೆ ಸ್ಟಡಿ ಮಾಡ್ತಿದ್ದಾರಂತೆ. ಸಿನಿಮಾ ಯಾವುದು ತಿಳಿಯಲು ಮುಂದೆ ಓದಿ.[ಯಶ್, ಉಪೇಂದ್ರ ಮನೆಯಲ್ಲಿ ಸಂಕ್ರಾಂತಿ ಸಡಗರ ಹೇಗಿತ್ತು ಗೊತ್ತಾ?]

ಪೊಲಿಟಿಕಲ್ ಥ್ರಿಲ್ಲರ್ ಚಿತ್ರ

ಅಂದಹಾಗೆ ಪ್ರಿಯಾಂಕಾ ಅವರು ನಟಿಸಲು ಸಹಿ ಮಾಡಿರುವುದು ಯೋಗಿ ದೇವಗಂಗೆ ನಿರ್ದೇಶನದ ಪೊಲಿಟಿಕಲ್ ಥ್ರಿಲ್ಲರ್ ಚಿತ್ರವೊಂದಕ್ಕೆ. ಆದರೆ ಆ ಸಿನಿಮಾದ ಟೈಟಲ್ ಇನ್ನೂ ಫಿಕ್ಸ್ ಆಗಿಲ್ಲವಂತೆ.[ಚಿತ್ರಗಳು: 'ಉಪೇಂದ್ರ-ಪ್ರಿಯಾಂಕಾ' ದಂಪತಿಯ 13ನೇ ವಿವಾಹ ವಾರ್ಷಿಕೋತ್ಸವ]

ಯೋಗಿ ದೇವಗಂಗೆ ಅವರ ಮಹಿಳಾ ಪ್ರಧಾನ ಚಿತ್ರ

ಯೋಗಿ ದೇವಗಂಗೆ ಆಕ್ಷನ್ ಕಟ್ ನಲ್ಲಿ ಮೂಡಿ ಬರಲಿರುವ ಈ ಚಿತ್ರ ಮಹಿಳಾ ಪ್ರಧಾನವಾಗಿದ್ದು, ತುಂಬಾ ಡಿಫರೆಂಟ್ ಮತ್ತು ಮಮ್ಮಿ ರೀತಿ ಫೀಲ್ ಕೊಡುವ ಸಿನಿಮಾ ಅಂತೆ. ಬೆಂಗಳೂರಿನಲ್ಲಿ ನಡೆಯುವ ದೌರ್ಜನ್ಯ ಘಟನೆಗಳ ಬಗ್ಗೆ ಕತೆ ಆಧಾರಿತವಾಗಿದ್ದು, ನೈಜ ಘಟನೆಯಿಂದ ಸ್ಫೂರ್ತಿ ಪಡೆದ ಸಿನಿಮಾ ಎನ್ನಲಾಗಿದೆ.

ರಿಯಾಲಿಸ್ಟಿಕ್ ಸಿನಿಮಾ

ಸೋಷಿಯಲ್ ಸಬ್ಜೆಕ್ಟ್ ಹೊಂದಿರುವ ಈ ಚಿತ್ರ ಪೊಲಿಟಿಕಲ್ ಥ್ರಿಲ್ಲರ್ ಕತೆ ಹೊಂದಿದೆ. ಹಾಗಂತ ಈ ಚಿತ್ರಗಳಲ್ಲಿ ಹೆಚ್ಚಾಗಿ ಆಕ್ಷನ್ ಸೀನ್‌ ಗಳಿಲ್ಲ, ಹಾಗೆ ಕಮರ್ಷಿಯಲ್ ಸಿನಿಮಾಗಳ ರೀತಿ ದೊಡ್ಡ ದೊಡ್ಡ ಫೈಟ್‌ ಗಳು ಸಹ ಇರೋದಿಲ್ಲ. ಬದಲಿಗೆ ರಿಯಾಲಿಸ್ಟಿಕ್ ಚಿತ್ರ ಮೂಡಿ ಬರಲಿದೆಯಂತೆ.

ಪ್ರಿಯಾಂಕಾ ವರ್ಕೌಟ್ ಜೋರಂತೆ..

ಖಡಕ್ ಮಹಿಳಾ ಪೊಲೀಸ್ ಅಧಿಕಾರಿ ಪಾತ್ರಕ್ಕೆ ಫಿಟ್‌ ನೆಸ್ ಬೇಕಿರುವುದರಿಂದ ಪ್ರಿಯಾಂಕಾ ಅವರು ಸ್ಲಿಮ್ ಆಗಲು ವರ್ಕೌಟ್ ಮಾಡ್ತಿದ್ದಾರಂತೆ. ಅಲ್ಲದೇ ಪೊಲೀಸ್ ಅಧಿಕಾರಿಗಳ ಬಾಡಿ ಲಾಂಗ್ವೇಜ್, ಜನಪ್ರಿಯ ಮಹಿಳಾ ಪೊಲೀಸ್ ಅಧಿಕಾರಿಗಳ ಲೈಫ್ ಸ್ಟೈಲ್ ಸ್ಟಡಿ ಮಾಡ್ತಿದ್ದಾರಂತೆ.

ಮುಂದಿನ ವರ್ಷ ಮಮ್ಮಿ-2 ತೆರೆಗೆ

ಯೋಗಿ ದೇವಗಂಗೆ ಅವರ ಚಿತ್ರ ಮುಗಿಸಿದ ನಂತರ 'ಮಮ್ಮಿ ಸೇವ್ ಮಿ' ಖ್ಯಾತ ನಿರ್ದೇಶಕ ಲೋಹಿತ್ ಅವರ ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ನಟಿಸಲಿದ್ದಾರಂತೆ. ಈ ಚಿತ್ರದ ನಂತರ ಮುಂದಿನ ವರ್ಷ 'ಮಮ್ಮಿ-2' ಚಿತ್ರ ತೆರೆಗೆಬರಲಿದೆಯಂತೆ.

English summary
Basking in the success of the movie Mummy , Priyanka Upendra will be seen in a cop avatar in a yet-to-be-titled movie, directed by debutant Yogi Devagange, who has worked as an associate for Yogaraj Bhat and Suri.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X