For Quick Alerts
  ALLOW NOTIFICATIONS  
  For Daily Alerts

  ಸಹ ನಟನ ಮೇಲೆ ದರ್ಶನ್ ಹಲ್ಲೆ ಮಾಡಿದ್ದು ನಿಜಾನಾ.? ಬಿ ಸುರೇಶ್ ಏನಂದ್ರು.?

  By Bharath Kumar
  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹನಟನ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಇಂದು ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿದೆ. ದರ್ಶನ್ ಅಭಿನಯಿಸುತ್ತಿರುವ 'ಯಜಮಾನ' ಚಿತ್ರದ ಚಿತ್ರೀಕರಣದ ವೇಳೆ ಈ ಘಟನೆ ಸಂಭವಿಸಿದ್ದು, ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಕಾರಣ ಸಹ ನಟನ ಮೇಲೆ ದರ್ಶನ್ ಕೈ ಮಾಡಿದ್ದಾರೆ ಎನ್ನಲಾಗಿದೆ.

  ಬೆಂಗಳೂರಿನ ತಾವರೆಕೆರೆಯ ನೈಸ್ ರಸ್ತೆಯ ಬಳಿ ಶೂಟಿಂಗ್ ನಡೆಯುತ್ತಿದ್ದು, ಇಲ್ಲಿ ಸಹ ನಟನಾಗಿ ಭಾಗವಹಿಸಿದ್ದ ಶಿವಕುಮಾರ್ ಹಲ್ಲೆಗೊಳಗಾಗಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಶಿವಕುಮಾರ್ ಅವರು ಪೊಲೀಸ್ ದೂರು ನೀಡಲು ಮುಂದಾಗಿದ್ದಾರೆ.

  ದರ್ಶನ್ 51ನೇ ಚಿತ್ರದ ನಿರ್ಮಾಪಕರು ನಾವೇ, ಗೊಂದಲ ಬೇಡ ಎಂದ ಬಿ.ಸುರೇಶ್ ದರ್ಶನ್ 51ನೇ ಚಿತ್ರದ ನಿರ್ಮಾಪಕರು ನಾವೇ, ಗೊಂದಲ ಬೇಡ ಎಂದ ಬಿ.ಸುರೇಶ್

  ಮತ್ತೊಂದೆಡೆ 'ಯಜಮಾನ' ಚಿತ್ರದ ಚಿತ್ರೀಕರಣ ಸೆಟ್ ನಲ್ಲಿದ್ದ ನಿರ್ಮಾಪಕ ಬಿ ಸುರೇಶ್ ಅವರು ಹೇಳೋದೆ ಬೇರೆ. ಈ ಬಗ್ಗೆ ಮಾಧ್ಯಮಗಳಿಗೆ ಬಿ ಸುರೇಶ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಅಲ್ಲಿ ನಿಜಕ್ಕೂ ಆಗಿದ್ದೇನು ಎಂಬುದನ್ನ ತಿಳಿಸಿದ್ದಾರೆ. ಮುಂದೆ ಓದಿ....

  ವಿಡಿಯೋ ಮಾಡಿದ್ದಕ್ಕೆ ಬುದ್ದಿವಾದ

  ವಿಡಿಯೋ ಮಾಡಿದ್ದಕ್ಕೆ ಬುದ್ದಿವಾದ

  ''ಯಜಮಾನ' ಚಿತ್ರದ ಹಾಡಿನ ಚಿತ್ರೀಕರಣ ನಡೆಯುತ್ತಿದೆ. ಸುಮಾರು 400 ಕ್ಕೂ ಅಧಿಕ ಜನರು ಕೆಲಸ ಮಾಡ್ತಿದ್ದಾರೆ. ಈ ವೇಳೆ ಅಲ್ಲೊಬ್ಬರು ವಿಡಿಯೋ ಚಿತ್ರೀಕರಣ ಮಾಡುತ್ತಿದ್ದರು. ಅವರನ್ನ ಕಂಡ ದರ್ಶನ್ ಅವರಿಗೆ ಬುದ್ದಿವಾದ ಹೇಳಿದ್ದಾರೆ ಅಷ್ಟೇ''

  'ಯಜಮಾನ'ನಾದ ಡಿ ಬಾಸ್ : ಅಂದು ವಿಷ್ಣು ಇಂದು ದರ್ಶನ್'ಯಜಮಾನ'ನಾದ ಡಿ ಬಾಸ್ : ಅಂದು ವಿಷ್ಣು ಇಂದು ದರ್ಶನ್

  ಈ ರೀತಿ ಮಾಡಬಾರದು ಎಂದರು ಅಷ್ಟೇ

  ಈ ರೀತಿ ಮಾಡಬಾರದು ಎಂದರು ಅಷ್ಟೇ

  ''ನಿರ್ಮಾಪಕರು ಕೋಟಿ ಕೋಟಿ ಬಂಡವಾಳ ಹಾಕಿ ಸಿನಿಮಾ ಮಾಡ್ತಾರೆ, ನೀವು ಈಗ ವಿಡಿಯೋ ಮಾಡಿ, ಫೇಸ್ ಬುಕ್ ನಲ್ಲಿ ಹಾಕಿಬಿಟ್ರೆ, ಥಿಯೇಟರ್ ಗೆ ಯಾರ ಬರಬೇಕು. ಹೀಗೆ ಮಾಡಬಾರದು. ಇದು ತಪ್ಪು ಎಂದು ಅವರಿಗೆ ಬರಿ ಮಾತಿನಲ್ಲಿ ಬುದ್ದಿವಾದ ಹೇಳಿದ್ದಾರೆ. ಅದು ಎರಡು ಬಾರಿ ವಿಡಿಯೋ ಮಾಡಿದ್ದನ್ನ ಕಂಡು ನಂತರ ದರ್ಶನ್ ಹೇಳಿದ್ದು'' - ಬಿ ಸುರೇಶ್

  ದರ್ಶನ್ ಜೊತೆಗೆ ನಟಿಸೋದು ಖುಷಿಯ ವಿಚಾರ ಎಂದ ಸಿಂಗಂ ವಿಲನ್ದರ್ಶನ್ ಜೊತೆಗೆ ನಟಿಸೋದು ಖುಷಿಯ ವಿಚಾರ ಎಂದ ಸಿಂಗಂ ವಿಲನ್

  ಹಲ್ಲೆಯೂ ಮಾಡಿಲ್ಲ, ಕೈ ಮಾಡಿಲ್ಲ

  ಹಲ್ಲೆಯೂ ಮಾಡಿಲ್ಲ, ಕೈ ಮಾಡಿಲ್ಲ

  ''ದರ್ಶನ್ ಹಲ್ಲೆ ಮಾಡಿದ್ದಾರೆ ಎನ್ನುವುದು ಸುಳ್ಳು. ನಾವು ಶೂಟಿಂಗ್ ಸೆಟ್ ನಲ್ಲೇ ಇದ್ದೀವಿ. ಈಗಲೂ ಹಾಡಿನ ಚಿತ್ರೀಕರಣ ನಡೆಯುತ್ತಿದೆ. ಯಾವುದೇ ತೊಂದರೆಯಾಗಿಲ್ಲ. ಯಾರಿಗೂ ದೈಹಿಕ ಹಲ್ಲೆ ಆಗಿದ್ದನ್ನ ನಾನು ಕಂಡಿಲ್ಲ'' ಎಂದು ನಿರ್ಮಾಪಕ ಬಿ ಸುರೇಶ್ ಸ್ಪಷ್ಟನೆ ನೀಡಿದ್ದಾರೆ.

  ಶಂಕರ್ ಅಶ್ವಥ್ ಮುಖದಲ್ಲಿ ನಗು ಮೂಡಿಸಿದ ದಾಸ ದರ್ಶನ್ಶಂಕರ್ ಅಶ್ವಥ್ ಮುಖದಲ್ಲಿ ನಗು ಮೂಡಿಸಿದ ದಾಸ ದರ್ಶನ್

  ಶಿವಕುಮಾರ್ ದೂರು ನೀಡ್ತಾರಂತೆ

  ಶಿವಕುಮಾರ್ ದೂರು ನೀಡ್ತಾರಂತೆ

  ಆದ್ರೆ, ಹಲ್ಲೆಯಾಗಿದೆ ಎಂದು ಆರೋಪ ಮಾಡುತ್ತಿರುವ ಶಿವಕುಮಾರ್ ಅವರು ''ಯಾರೋ ಫೋಟೋ ಕ್ಲಿಕ್ ಮಾಡಿದ್ದಕ್ಕೆ ಕಲಾವಿದರನ್ನ ಕರೆದುಕೊಂಡ ಬಂದ ನನಗೆ ಹೊಡೆದಿದ್ದಾರೆ. ನಮ್ಮ ಸಂಘಕ್ಕೆ ಮಾಹಿತಿ ನೀಡಿದ್ದೇನೆ. ನಾನು ಪೊಲೀಸ್ ಗೆ ದೂರು ನೀಡುತ್ತೇನೆ ಎಂದು ಆರೋಪ ಮಾಡುತ್ತಿದ್ದಾರೆ.

  English summary
  Challenging Star Darshan has allegedly attacked co-artist Shiva Shankar on the sets of Yajamana movie. now, producer b suresh has clarified about this issue.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X