For Quick Alerts
  ALLOW NOTIFICATIONS  
  For Daily Alerts

  ಡ್ರಗ್ಸ್‌ ಪ್ರಕರಣ ಆರೋಪಿ ರಾಹುಲ್ ಅನ್ನು 'ಒಳ್ಳೆ ಹುಡುಗ' ಎಂದ ನಿರ್ಮಾಪಕ ಕೆ.ಮಂಜು

  |

  ಡ್ರಗ್ಸ್ ಪ್ರಕರಣದಲ್ಲಿ ಈಗಾಗಲೇ ಸಂಜನಾ ಗಲ್ರಾನಿ, ರಾಗಿಣಿ ಬಂಧನಕ್ಕೆ ಒಳಗಾಗಿದ್ದಾರೆ. ಇವರಿಬ್ಬರಿಗೂ ಬಹು ಆಪ್ತರಾಗಿದ್ದ ರವಿಶಂಕರ್ ಹಾಗೂ ಸಂಜನಾ ಆಪ್ತ ರಾಹುಲ್ ಅನ್ನೂ ಬಂಧಿಸಲಾಗಿದೆ.

  ರಾಗಿಣಿ ಆಪ್ತ ರವಿಶಂಕರ್ ಜಯನಗರದ ಆರ್‌ಟಿಓ ಕಚೇರಿಯಲ್ಲಿ ನೌಕರನಾಗಿದ್ದಾನೆ. ರಾಗಿಣಿ ಮತ್ತೊಬ್ಬ ಆಪ್ತ ಶಿವಪ್ರಕಾಶ್ ಸಹ ಬಂಧನಕ್ಕೆ ಒಳಗಾಗಿದ್ದು ಆತ ಬ್ಯುಸಿನೆಸ್‌ಮನ್ ಹಾಗೂ ನಿರ್ಮಾಪಕ ಆಗಿದ್ದಾರೆ.

  14 ದಿನ ನ್ಯಾಯಾಂಗ ಬಂಧನ: ಪರಪ್ಪನ ಅಗ್ರಹಾರ ಜೈಲಿಗೆ ನಟಿ ರಾಗಿಣಿ14 ದಿನ ನ್ಯಾಯಾಂಗ ಬಂಧನ: ಪರಪ್ಪನ ಅಗ್ರಹಾರ ಜೈಲಿಗೆ ನಟಿ ರಾಗಿಣಿ

  ಇನ್ನು ಸಂಜನಾ ಆಪ್ತ ರಾಹುಲ್ ಹೆಚ್ಚು ಕುತೂಹಲ ಕೆರಳಿಸಿದ್ದು ಆತ ಸಿನಿಮಾ ರಂಗದಲ್ಲಿ ಸಾಕಷ್ಟು ಸಂಪರ್ಕ ಹೊಂದಿದ್ದಾನೆ. ಅಷ್ಟೇ ಅಲ್ಲ ಪೊಲೀಸ್ ಇಲಾಖೆಯಲ್ಲಿಯೂ ಸಂಪರ್ಕ ಹೊಂದಿದ್ದಾನೆ ಎಂಬ ಅನುಮಾನ ವ್ಯಕ್ತವಾಗಿದೆ.

  ಸೆಲೆಬ್ರಿಟಿಗಳ ಜೊತೆಗೆ ರಾಹುಲ್ ಚಿತ್ರ

  ಸೆಲೆಬ್ರಿಟಿಗಳ ಜೊತೆಗೆ ರಾಹುಲ್ ಚಿತ್ರ

  ಕನ್ನಡ ಸಿನಿಮಾದ ಹಲವು ಸ್ಟಾರ್‌ಗಳ ಜೊತೆಗೆ ರಾಹುಲ್ ಚಿತ್ರ ಹರಿದಾಡುತ್ತಿದೆ. ನಿರ್ಮಾಪಕ ಕೆ.ಮಂಜು ಅವರೊಂದಿಗೆ ರಾಹುಲ್ ಅತ್ಯಾಪ್ತವಾಗಿರುವ ಚಿತ್ರ ಸಹ ಹರಿದಾಡುತ್ತಿದ್ದು, ರಾಹುಲ್ ಬಗ್ಗೆ ನಿರ್ಮಾಪಕ ಮಂಜು ಮಾಧ್ಯಮವೊಂದರ ಜೊತೆಗೆ ಮಾತನಾಡಿದ್ದಾರೆ.

  ಕೈತುತ್ತು ತಿನ್ನಿಸುತ್ತಿರುವ ಕೆ.ಮಂಜು

  ಕೈತುತ್ತು ತಿನ್ನಿಸುತ್ತಿರುವ ಕೆ.ಮಂಜು

  ಆರೋಪಿ ರಾಹುಲ್‌ ಗೆ ಕೈತುತ್ತು ತಿನ್ನಿಸುತ್ತಿರುವ ಚಿತ್ರ ವೈರಲ್ ಆಗಿದ್ದು, ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಕೆ.ಮಂಜು,'ರಾಹುಲ್ ಒಳ್ಳೆಯ ಹುಡುಗ, ಒಳ್ಳೆಯ ಕುಟುಂಬ ಹಿನ್ನೆಲೆ ಇರುವಂಥಹವನು. ಆತನಿಗೆ ಇಂಥಹಾ ಲಿಂಕ್ ಇರುವುದು ಗೊತ್ತಿರಲಿಲ್ಲ' ಎಂದಿದ್ದಾರೆ ಕೆ.ಮಂಜು.

  ಸಂಜನಾ ಗೆ ಮದುವೆ ಆಗಿದ್ಯಾ? ಯಾರಿದು ವೈದ್ಯ ಅಜೀಜ್?ಸಂಜನಾ ಗೆ ಮದುವೆ ಆಗಿದ್ಯಾ? ಯಾರಿದು ವೈದ್ಯ ಅಜೀಜ್?

  ಭಾಸ್ಕರ್ ರಾವ್ ಜೊತೆಗೆ ಚಿತ್ರ

  ಭಾಸ್ಕರ್ ರಾವ್ ಜೊತೆಗೆ ಚಿತ್ರ

  ರಾಹುಲ್ ವಿವಿಧ ಸೆಲೆಬ್ರಿಟಿಗಳ ಜೊತೆಗೆ ಇರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ರಾಹುಲ್, ಬೆಂಗಳೂರು ಪೊಲೀಸ್ ಕಮೀಷನರ್ ಆಗಿದ್ದ ಭಾಸ್ಕರ್ ರಾವ್ ಅವರೊಟ್ಟಿಗೆ ಸಹ ರಾಹುಲ್ ಚಿತ್ರವಿದೆ. ರಾಹುಲ್‌ ಗೆ ಪೊಲೀಸ್ ಇಲಾಖೆಯಲ್ಲಿಯೂ ಸಂಪರ್ಕವಿದೆಯಾ ಎಂಬ ಅನುಮಾನ ಈ ಚಿತ್ರದಿಂದ ವ್ಯಕ್ತವಾಗಿದೆ.

  DIRECTORS DAIRY : ನಾನು ಇಡ್ಲಿ ನೋಡಿದ್ದೇ ಬೆಂಗಳೂರಿಗೆ ಬಂದ್ಮೇಲೆ | R Chandru | Filmibeat Kannada
  ರಾಹುಲ್‌ ಗೆ ನ್ಯಾಯಾಂಗ ಬಂಧನ

  ರಾಹುಲ್‌ ಗೆ ನ್ಯಾಯಾಂಗ ಬಂಧನ

  ಸಂಜನಾ ಗೆ ಆಪ್ತವಾಗಿರುವ ರಾಹುಲ್ ಗೆ ಇಂದು ನ್ಯಾಯಾಂಗ ಬಂಧನ ವಿಧಿಸಲಾಗಿದೆ. ರಾಹುಲ್, ರಾಗಿಣಿ ಹಾಗೂ ಇತರ ಕೆಲವರು ಇಂದಿನಿಂದ ಹದಿನಾಲ್ಕು ದಿನಗಳ ಕಾಲ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿಗಳಾಗಿ ಇರಲಿದ್ದಾರೆ.

  English summary
  Producer K Manju said He is a good boy about drug case accused Rahul. K Manju and Rahul photos got viral on social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X