For Quick Alerts
  ALLOW NOTIFICATIONS  
  For Daily Alerts

  ಬರೋಬ್ಬರಿ 83 ಕಥೆ ರಿಜೆಕ್ಟ್ ಮಾಡಿದ ಆ ಖ್ಯಾತ ನಿರ್ಮಾಪಕ ಯಾರು?

  By Harshitha
  |

  ಗಾಂಧಿನಗರದಲ್ಲಂತೂ ಇತ್ತೀಚೆಗೆ ಲಾಭ ಮಾಡುತ್ತಿರುವ ನಿರ್ಮಾಪಕರ ಸಂಖ್ಯೆ ತೀರಾ ಕಡಿಮೆ. ಎಂತಹ ಸ್ಟಾರ್ ಸಿನಿಮಾ ಮಾಡಿದರೂ, 50 ದಿನ ಓಡುವುದೇ ಕಷ್ಟ ಎನ್ನುವ ಹಾಗಾಗಿದೆ ಇಂದಿನ ಸ್ಯಾಂಡಲ್ ವುಡ್ ಸ್ಥಿತಿ.

  ಇನ್ನೂ ಗಾಂಧಿನಗರದಲ್ಲಿ ಅಂಬೆಗಾಲು ಇಡುತ್ತಿರುವ ನಿರ್ಮಾಪಕರ ಗೋಳು ಯಾರಿಗೂ ಬೇಡ. ಹೊಸಬರ ಸಿನಿಮಾ ರಿಲೀಸ್ ಆದರೆ 'ಉಸ್ಸಪ್ಪಾ..' ಅಂತ ನಿಟ್ಟುಸಿರು ಬಿಡುವ ಪ್ರೊಡ್ಯೂಸರ್ಸ್ ಸಂಖ್ಯೆ ಲೆಕ್ಕವೇ ಇಲ್ಲ ಬಿಡಿ.

  ಅಂಥದ್ರಲ್ಲಿ ಒಂದು ಹಿಟ್ ಸಿನಿಮಾ ಕೊಟ್ಟು, ಕೋಟಿ ಕೋಟಿ ಲಾಭ ಮಾಡಿ, ಮತ್ತೊಂದು ಸದಭಿರುಚಿಯ ಸಿನಿಮಾ ಮಾಡಲು ಓರ್ವ ನಿರ್ಮಾಪಕರು ಬರೋಬ್ಬರಿ 83 ಕಥೆ ರಿಜೆಕ್ಟ್ ಮಾಡಿದ್ದಾರೆ ಅಂದ್ರೆ ನೀವು ನಂಬಲೇಬೇಕು.

  ಅಂದ್ಹಾಗೆ ಆ ನಿರ್ಮಾಪಕರು ಯಾರು ಅಂತ ಗೊತ್ತಾ? ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸಿ, ನಿಮಗೆ ಪರಿಚಯವಾಗುತ್ತೆ....

  ಆ ನಿರ್ಮಾಪಕರು 'ಇವರೇ'.!

  ಆ ನಿರ್ಮಾಪಕರು 'ಇವರೇ'.!

  ಬರೋಬ್ಬರಿ 83 ಕಥೆಗಳನ್ನು ರಿಜೆಕ್ಟ್ ಮಾಡಿದ ಆ ನಿರ್ಮಾಪಕರು ಕೃಷ್ಣಚೈತನ್ಯ.

  ಯಾರು ಈ ಕೃಷ್ಣಚೈತನ್ಯ?

  ಯಾರು ಈ ಕೃಷ್ಣಚೈತನ್ಯ?

  ಸ್ಯಾಂಡಲ್ ವುಡ್ ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ '6-5=2' ಚಿತ್ರದ ನಿರ್ಮಾಪಕ ಕೃಷ್ಣಚೈತನ್ಯ. ['6-5=2' ವಿಮರ್ಶೆ: ಮೀಟರ್ ಇರುವವರಿಗೆ ಮಾತ್ರ]

  '6-5=2' ಸೂಪರ್ ಹಿಟ್.!

  '6-5=2' ಸೂಪರ್ ಹಿಟ್.!

  ಹೊಸಬರ ದಂಡೇ ಕೂಡಿ ಮಾಡಿದ '6-5=2' ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸಿಕ್ಕಾಪಟ್ಟೆ ಕಲೆಕ್ಷನ್ ಮಾಡಿತ್ತು. ನಿರ್ಮಾಪಕ ಕೃಷ್ಣಚೈತನ್ಯ ಅವರಿಗೆ ಲಾಭ ಕೂಡ ಆಯ್ತು. '6-5=2' ನಂತೆ ಮತ್ತೊಂದು ಹಿಟ್ ಸಿನಿಮಾ ಕೊಡಬೇಕು ಅಂತ ಉತ್ತಮ ಕಥೆ ಹುಡುಕಾಟದಲ್ಲಿದ್ದರು ನಿರ್ಮಾಪಕ ಕೃಷ್ಣಚೈತನ್ಯ.

  83 ಕಥೆ ರಿಜೆಕ್ಟ್.!

  83 ಕಥೆ ರಿಜೆಕ್ಟ್.!

  '6-5=2' ಹಿಟ್ ಆಗ್ತಿದ್ದ ಹಾಗೆ, ಮತ್ತೊಂದು ಹಾರರ್-ಥ್ರಿಲ್ಲರ್ ಸಿನಿಮಾ ಮಾಡೋದು ಬೇಡ ಅಂತ ಕೃಷ್ಣಚೈತನ್ಯ ನಿರ್ಧರಿಸಿದ್ದರಂತೆ. ಆದ್ರೆ, ಅದೇ ಹಾರರ್-ಸಸ್ಪೆನ್ಸ್ ಕಥೆ ಹೊತ್ತು ಅನೇಕ ನಿರ್ದೇಶಕರು ಕೃಷ್ಣಚೈತನ್ಯ ರವರನ್ನ ಭೇಟಿ ಮಾಡಿದ್ರಂತೆ. ಯಾವ ಕಥೆ ಕೂಡ ಇಷ್ಟವಾಗದ ಕಾರಣ, ಬರೋಬ್ಬರಿ 83 ಕಥೆ ರಿಜೆಕ್ಟ್ ಮಾಡಿದ್ದಾರೆ ಕೃಷ್ಣಚೈತನ್ಯ.

  ಕೊನೆಗೆ ಸಿಕ್ಕವರು ನಿರ್ದೇಶಕ ನವನೀತ್

  ಕೊನೆಗೆ ಸಿಕ್ಕವರು ನಿರ್ದೇಶಕ ನವನೀತ್

  ಅದಾಗಲೇ ಒಂದು ಕಿರುಚಿತ್ರ ನಿರ್ದೇಶಿಸಿದ್ದ ನವನೀತ್ ಕೂಡ ಒಂದು ಸಸ್ಪೆನ್ಸ್ ಕಥೆಯನ್ನ ಕೃಷ್ಣಚೈತನ್ಯ ರವರಿಗೆ ಹೇಳಿದ್ರಂತೆ. ಅಲ್ಲಿವರೆಗೂ ಕೇಳಿದ್ದ 83 ಕಥೆಗಳಿಗಿಂತ ವಿಭಿನ್ನವಾಗಿದ್ದರಿಂದ 'ಕರ್ವ' ಚಿತ್ರಕ್ಕೆ ಚಾಲನೆ ಕೊಟ್ಟಿದ್ದಾರೆ ನಿರ್ಮಾಪಕ ಕೃಷ್ಣಚೈತನ್ಯ. [ಮೀಟರ್ ಇರುವವರಿಗೆ ಮತ್ತೊಂದು ಕೊಡುಗೆ 'ಕರ್ವ'.!]

  'ಕರ್ವ' ಚಿತ್ರದ ಬಗ್ಗೆ....

  'ಕರ್ವ' ಚಿತ್ರದ ಬಗ್ಗೆ....

  ಚೊಚ್ಚಲ ಬಾರಿಗೆ ನವನೀತ್ ನಿರ್ದೇಶಿಸುತ್ತಿರುವ ಸಿನಿಮಾ 'ಕರ್ವ'. ಚಿತ್ರದಲ್ಲಿ ತಿಲಕ್, ರೋಹಿತ್ ಮುಖ್ಯಭೂಮಿಕೆಯಲ್ಲಿದ್ದಾರೆ. ಅಪ್ಪಟ ಸಸ್ಪೆನ್ಸ್-ಥ್ರಿಲ್ಲರ್ ಸಿನಿಮಾ 'ಕರ್ವ'. [ರಾಕ್ ಸ್ಟಾರ್ ರೋಹಿತ್ 'ಕರ್ವ' ಹೀರೋ ಗುರು]

  'ಕರ್ವ' ಕೌತುಕ

  'ಕರ್ವ' ಕೌತುಕ

  83 ಕಥೆಯನ್ನ ರಿಜೆಕ್ಟ್ ಮಾಡಿರುವ ನಿರ್ಮಾಪಕರು 'ಕರ್ವ' ಚಿತ್ರವನ್ನು ಒಪ್ಪಿಕೊಂಡಿದ್ದಾರೆ ಅಂದ್ರೆ ಚಿತ್ರಕಥೆಯಲ್ಲಿ ಕೌತುಕ ಇರಲೇಬೇಕು. ಇದೇ ಕಾರಣಕ್ಕೆ ಸಿನಿ ಪ್ರಿಯರು 'ಕರ್ವ' ಚಿತ್ರದ ಬಿಡುಗಡೆಗಾಗಿ ಕಾದು ಕುಳಿತಿದ್ದಾರೆ.

  ಸದ್ಯದಲ್ಲೇ ಚಿತ್ರ ತೆರೆಗೆ

  ಸದ್ಯದಲ್ಲೇ ಚಿತ್ರ ತೆರೆಗೆ

  'ಕರ್ವ' ಚಿತ್ರದ ಚಿತ್ರೀಕರಣ ಊಟಿ, ಬೆಂಗಳೂರು, ಶ್ರೀಲಂಕಾ ಸೇರಿದಂತೆ ಅನೇಕ ತಾಣಗಳಲ್ಲಿ ಚಿತ್ರೀಕರಣಗೊಂಡಿದೆ. ಸದ್ಯದಲ್ಲೇ 'ಕರ್ವ' ತೆರೆಗೆ ಬರಲಿದೆ.

  English summary
  Producer Krishna Chaitanya of '6-5=2' fame had rejected 83 stories before the making of Kannada Movie 'Karva', which is directed by Navneeth.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X