»   » ಪರಭಾಷಾ ವಿರೋಧಿ ಮಂಜು ತಮಿಳು ಚಿತ್ರದ ಡಿಸ್ಟ್ರಿಬ್ಯೂಟರ್

ಪರಭಾಷಾ ವಿರೋಧಿ ಮಂಜು ತಮಿಳು ಚಿತ್ರದ ಡಿಸ್ಟ್ರಿಬ್ಯೂಟರ್

Posted By:
Subscribe to Filmibeat Kannada
Producer Manju has got the distribution rights of Tamil movie
ಕನ್ನಡ ಚಿತ್ರಗಳ ಹೆಸರಾಂತ ನಿರ್ಮಾಪಕರಲ್ಲೊಬ್ಬರು ಕೊಬ್ಬರಿ ಮಂಜು ಯಾನೆ ಕೆ ಮಂಜು. ಬೇರೆಯವರ ನಿರ್ಮಾಣದ ಚಿತ್ರವನ್ನು ಮಂಜು ತನ್ನ ಮಂಜು ಫಿಲಂಸ್ ಮೂಲಕ ವಿತರಣೆ ಕೂಡಾ ಮಾಡಿದ್ದಾರೆ. ಅದಕ್ಕೆ ಇತ್ತೀಚಿನ ಉದಾಹರಣೆಯೆಂದರೆ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ರೋಮಿಯೋ.

ಡಬ್ಬಿಂಗ್ ಮತ್ತು ಪರಭಾಷಾ ವಿರೋಧಿ ಚಳುವಳಿಯಲ್ಲಿ ಮಂಚೂಣಿಯಲ್ಲಿ ಕಂಡು ಬರುವ ಮಂಜು ಪರಭಾಷಾ ಚಿತ್ರಗಳ ಡಿಸ್ತ್ರಿಬ್ಯೂಷನ್ ರೈಟ್ಸ್ ಪಡೆದು ಅಚ್ಚರಿ ಮೂಡಿಸಿದ್ದೂ ಉಂಟು.

ತಮಿಳು ನಟ ವಿಜಯ್ ಅಭಿನಯದ ವೇಲಾಯುಧ ಚಿತ್ರದ ರೈಟ್ಸ್ ಪಡೆದಿದ್ದ ಮಂಜು ಈಗ ಮತ್ತೊಂದು ತಮಿಳು ಚಿತ್ರದತ್ತ ಮುಖ ಮಾಡಿದ್ದಾರೆ.

ನಾಡೋಡಿಗಳ್ ಚಿತ್ರದ ನಾಯಕನಾಗಿದ್ದ ಶಶಿಕುಮಾರ್ ಅಭಿನಯದ ಸುಂದರ ಪಾಂಡ್ಯನ್ ಚಿತ್ರದ ಕರ್ನಾಟಕ ಹಂಚಿಕೆಯ ರೈಟ್ಸ್ ಅನ್ನು ಮಂಜು ಪಡೆದಿದ್ದಾರೆ.

ಅಲ್ಲದೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಇದೇ ಶಶಿಕುಮಾರ್ ನಾಯಕತ್ವದಲ್ಲಿ ತಮಿಳು ಚಿತ್ರವೊಂದನ್ನು ಬರುವ ಜನವರಿಯಲ್ಲಿ ನಿರ್ಮಾಣ ಮಾಡಲಿದ್ದೇನೆ ಎಂದು ಘೋಷಿಸಿದ್ದಾರೆ.

ಈ ಘೋಷಣೆ ಮಾಡಿದಾಗ ತಮಿಳು ನಟ ಶಶಿಕುಮಾರ್ ಪಕ್ಕದಲ್ಲೇ ಕೂತಿದ್ದರು. ಶಶಿಕುಮಾರ್ ಸುಬ್ರಮಣ್ಯಪುರಂ, ನಾಡೋಡಿಗಳ್, ಪೋರಾಳಿ ಸಿನಿಮಾಗಳ ಮೂಲಕ ತಮಿಳುನಾಡಿನಲ್ಲಿ ತನ್ನದೇ ಆದ ಜನಪ್ರಿಯತೆ ಗಳಿಸಿದವರು.

ಈಗ ಅವರ ಶಿಷ್ಯನೊಬ್ಬನ ನಿರ್ದೇಶನದಲ್ಲಿ ಮಂಜು ನಿರ್ಮಾಣದ ಈ ಚಿತ್ರಕ್ಕೆ ಬಣ್ಣ ಹಚ್ಚಲು ಒಪ್ಪಿಗೆ ಸೂಚಿಸಿದ್ದಾರೆ.

ಹೀಗೊಂದು ಪ್ರಯತ್ನದ ಮೂಲಕ ಮಂಜು ತಮಿಳು ಸಿನಿಮಾ ನಿರ್ಮಾಣದಲ್ಲಿ ತನಗೊಂದು ಗಟ್ಟಿ ನೆಲೆ ಸ್ಥಾಪಿಸಿಕೊಂಡರೆ ಅದರಲ್ಲಿ ಅಚ್ಚರಿ ಪಡಬೇಕಾಗಿಲ್ಲ. ಯಾಕೆಂದರೆ ಮಂಜುಗೆ ಇಂಥಹ ಹತ್ತು ಹಲವು ಮಹತ್ವಾಕಾಂಕ್ಷೆಗಳಿವೆ.

ಒಟ್ಟಿನಲ್ಲಿ ಕೆ ಮಂಜುವಿನ ಸಾಹಸಗಳನ್ನು ಗಾಂಧಿನಗರ ಬೆಚ್ಚಿ ಬಿದ್ದು ನೋಡುತ್ತಿದೆ ಅನ್ನೋದು ಸತ್ಯ. [ಮಂಜು ಇನ್ನೊಂದು ಸಾಹಸ ಇಲ್ಲಿದೆ ನೋಡಿ]

English summary
Noted Kannada film producer K Manju has got the Karnataka distribution rights of Tamil movie Sundara Pandyan.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada