For Quick Alerts
  ALLOW NOTIFICATIONS  
  For Daily Alerts

  ತೆರೆ ಮೇಲೆ ಬರಲಿದ್ಯಂತೆ ನಟಿ 'ಸೌಂದರ್ಯ' ಜೀವನ ಕಥೆ

  By Pavithra
  |

  ನಟಿ ಸೌಂದರ್ಯ ಇಡೀ ಕನ್ನಡ ಸಿನಿಮಾ ಅಭಿಮಾನಿಗಳನ್ನು ಅಗಲಿ ಸಾಕಷ್ಟು ವರ್ಷಗಳು ಕಳೆದಿವೆ. ಮುದ್ದಾದ ನಗುವಿನಿಂದಲೇ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದ ಸೌಂದರ್ಯ ಅವರ ಜೀವನ ಕಥೆ ತೆರೆ ಮೇಲೆ ತರುವ ಪ್ರಯತ್ನ ನಡೆಯುತ್ತಿದೆಯಂತೆ.

  ಮಹಾನಟಿ ಸಿನಿಮಾ ಬಿಡುಗಡೆ ಆಗಿ ಪ್ರಖ್ಯಾತಿ ಪಡೆದುಕೊಂಡಿರುವುದೇ ಇದಕ್ಕೆ ಕಾರಣ. ಸಿನಿಮಾ ನಟಿ ಸಾವಿತ್ರಿ ಅವರ ಜೀವನ ಚರಿತ್ರೆಯನ್ನಿಟ್ಟುಕೊಂಡು ತಯಾರಾದ ಮಹಾನಟಿ ಸಿನಿಮಾವನ್ನ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ.

  ನಟಿ ಸೌಂದರ್ಯರನ್ನು ಜೀವಂತವಾಗಿಟ್ಟ ಅತ್ತಿಗೆ ನಿರ್ಮಲಾ

  ಅದರಂತೆಯೇ ಸೌಂದರ್ಯ ಅವರ ಕಥೆಯನ್ನು ತೆರೆ ಮೇಲೆ ತಂದರೆ ಜನರು ಇಷ್ಟ ಪಡುತ್ತಾರೆ ಎನ್ನುವ ಲೆಕ್ಕಾಚಾರ ನಿರ್ಮಾಪಕರದ್ದು. ತೆಲುಗಿನಲ್ಲಿ ಪೆಳ್ಳಿಚೂಪುಲು, ಮೆಂಟಲ್ ಮಧಿಲೋ ಚಿತ್ರಗಳನ್ನು ನಿರ್ಮಾಣ ಮಾಡಿದ್ದ ನಿರ್ಮಾಪಕ ರಾಜ್, ಸೌಂದರ್ಯ ಅವರ ಕಥೆಯನ್ನು ತೆರೆ ಮೇಲೆ ತರಲು ಉತ್ಸಾಹ ತೋರಿಸಿದ್ದಾರೆ.

  ಸದ್ಯ ಈ ಬಗ್ಗೆ ಆಲೋಚನೆ ಮಾಡಿರುವ ನಿರ್ಮಾಪಕ ರಾಜ್ ಸೌಂದರ್ಯ ಅವರ ಮನೆಯವರ ಅನುಮತಿ ಪಡೆದುಕೊಂಡ ನಂತರ ಚಿತ್ರವನ್ನ ನಿರ್ಮಾಣ ಮಾಡುವ ತಯಾರಿ ಮಾಡಿಕೊಳ್ಳಲಿದ್ದಾರೆ. ಹಾಗೆನಾದರೂ ಸೌಂದರ್ಯ ಅವರ ಜೀವನ ಕಥೆ ತೆರೆ ಮೇಲೆ ಬಂದರೆ ನಾಯಕಿ ಯಾರಾಗುತ್ತಾರೆ ಎನ್ನುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

  English summary
  Tollywood Producer Raj, who produced pictures of Pelli Chupulu is enthusiastic to bring Kannada actress Soundarya's life story on screen

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X