»   » 'ರಣವಿಕ್ರಮ' ಬಳಿಕ ಮತ್ತೆ ಪುನೀತ್ ಜೊತೆ ಪವನ್ ಒಡೆಯರ್ ಸಿನಿಮಾ

'ರಣವಿಕ್ರಮ' ಬಳಿಕ ಮತ್ತೆ ಪುನೀತ್ ಜೊತೆ ಪವನ್ ಒಡೆಯರ್ ಸಿನಿಮಾ

Posted By:
Subscribe to Filmibeat Kannada
ಪುನೀತ್ ಜೊತೆ ಪವನ್ ಒಡೆಯರ್ 'ರಣವಿಕ್ರಮ' ಬಳಿಕ ಮತ್ತೊಂದು ಸಿನಿಮಾ ಮಾಡೋದು ಫಿಕ್ಸ್ | Filmibeat Kananda

ನಿರ್ದೇಶಕ ಪವನ್ ಓಡೆಯರ್ ಇತ್ತೀಚಿಗಷ್ಟೆ ನಟ ದರ್ಶನ್ ಜೊತೆಗೆ ಸಿನಿಮಾ ಮಾಡುತ್ತಾರೆ ಎಂಬ ಸುದ್ದಿ ಇತ್ತು. ಆ ಬಳಿಕ ಅಂಬರೀಶ್ ಪುತ್ರನಿಗೆ ಪವನ್ ಓಡೆಯರ್ ಆಕ್ಷನ್ ಕಟ್ ಹೇಳುತ್ತಾರೆ ಎಂದು ಹೇಳಲಾಗಿತ್ತು. ಆದರೆ ಈಗ ಮತ್ತೆ ಪವನ್ ಓಡೆಯರ್ ತಮ್ಮ ಸಿನಿಮಾ ಮೂಲಕ ಸುದ್ದಿ ಮಾಡುತ್ತಿದ್ದಾರೆ.

ಪವನ್ ಒಡೆಯರ್ ನಿರ್ದೇಶಕರಾಗಿದ್ದರ ಹಿಂದಿನ ಒಂದು ಕುತೂಹಲಕಾರಿ ಕಥೆ

ಪವನ್ ಓಡೆಯರ್ ನಟ ಪುನೀತ್ ರಾಜ್ ಕುಮಾರ್ ಅವರಿಗೆ ಸಿನಿಮಾ ನಿರ್ದೇಶನ ಮಾಡಲಿದ್ದಾರಂತೆ. ಈ ಹಿಂದೆ ಪುನೀತ್ ಮತ್ತು ಪವನ್ ಒಡೆಯರ್ ಕಾಂಬಿನೇಶನ್ ನಲ್ಲಿ ಬಂದಿದ್ದ 'ರಣವಿಕ್ರಮ' ಸಿನಿಮಾ ಸೂಪರ್ ಹಿಟ್ ಆಗಿತ್ತು. ಆ ನಂತರ ಮತ್ತೆ ಪವನ್ ಒಡೆಯರ್ ಪುನೀತ್ ರಾಜ್ ಕುಮಾರ್ ಜೊತೆಗೆ ಸಿನಿಮಾ ಮಾಡಲಿದ್ದಾರಂತೆ. ಪುನೀತ್ ಮತ್ತು ಪವನ್ ಒಡೆಯರ್ ಚಿತ್ರದ ಬಗ್ಗೆ ರಾಕ್ ಲೈನ್ ವೆಂಕಟೇಶ್ ಹೇಳಿಕೊಂಡಿದ್ದಾರೆ. ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಈ ಹೊಸ ಚಿತ್ರಕ್ಕೆ ಬಂಡವಾಳ ಹಾಕಲಿದ್ದಾರೆ.

Producer Rockline Venkatesh confirms his next with Puneet Rajkumar

ಸದ್ಯಕ್ಕೆ ಈ ಸಿನಿಮಾ ಬರುವುದು ಪಕ್ಕಾ ಆಗಿದೆ. ಆದರೆ ಚಿತ್ರದ ಮುಹೂರ್ತದ ದಿನ ಫಿಕ್ಸ್ ಆದ ನಂತರ ಚಿತ್ರದ ಇನಷ್ಟು ವಿಚಾರಗಳನ್ನು ಹೇಳುವುದಾಗಿ ರಾಕ್ ಲೈನ್ ವೆಂಕಟೇಶ್ ಹೇಳಿದ್ದಾರೆ. ಸದ್ಯ ಪುನೀತ್ ರಾಜ್ ಕುಮಾರ್ 'ಅಂಜನಿಪುತ್ರ' ನಂತರ ಶಶಾಂಕ್ ನಿರ್ದೇಶನದ ಸಿನಿಮಾ ಮತ್ತು ಸಂತೋಷ್ ಆನಂದ್ ರಾಮ್ ಸಿನಿಮಾದಲ್ಲಿ ನಟಿಸಲಿದ್ದಾರೆ.

English summary
Kannada producer Rockline Venkatesh confirms his next with Actor Puneet Rajkumar. The movie will be directed by Pawan Wadeyar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X