For Quick Alerts
  ALLOW NOTIFICATIONS  
  For Daily Alerts

  ಸಂಭಾವನೆ ವಿಷ್ಯದಲ್ಲಿ ನಿರ್ಮಾಪಕರಿಗೆ 'ಹೀಗೂ' ಹೇಳಿದ್ದಾರೆ ನಟ ದರ್ಶನ್.!

  |

  ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಪೈಕಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಒಬ್ಬರು. 'ದಾಸ' ದರ್ಶನ್ ಸಿನಿಮಾ ಅಂದ್ರೆ ಕೋಟಿಗಟ್ಟಲೆ ಹಣ ಸುರಿಯಬೇಕಾಗುತ್ತದೆ, ಹೆಚ್ಚು ಬಜೆಟ್ ಬೇಕಾಗುತ್ತದೆ ಅನ್ನೋದೆಲ್ಲಾ ಸತ್ಯ. ಹಾಗಂತ, ನಿರ್ಮಾಪಕರಿಂದ ನಟ ದರ್ಶನ್ ಅನಗತ್ಯವಾಗಿ ದುಡ್ಡು ಖರ್ಚು ಮಾಡಿಸುವುದಿಲ್ಲ.!

  ಸುಮ್ ಸುಮ್ನೆ ದುಡ್ಡು ವೇಸ್ಟ್ ಮಾಡುವುದು ನಟ ದರ್ಶನ್ ಗೆ ಸ್ವಲ್ಪ ಕೂಡ ಇಷ್ಟ ಆಗಲ್ಲ. ವಿನಾಕಾರಣ ಹೆಚ್ಚು ಹಣ ಸುರಿಯುವ ಬದಲು, ಒಳ್ಳೆಯ ಕೆಲಸಕ್ಕೆ ವಿನಿಯೋಗಿಸಲು ನಿರ್ಮಾಪಕರಿಗೆ ದರ್ಶನ್ ಸಲಹೆ ನೀಡುತ್ತಾರೆ. ಅದಕ್ಕೆ ಸಾಕ್ಷಿ 'ರಾಬರ್ಟ್' ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಆಡಿರುವ ಮಾತುಗಳು.

  'ರಾಬರ್ಟ್' ಚಿತ್ರದ ಪ್ರೊಡಕ್ಷನ್ ವೇಳೆ, ನಿರ್ಮಾಪಕರಿಗೆ ಎಷ್ಟೋ ಬಾರಿ ನಟ ದರ್ಶನ್ ದುಡ್ಡು ಉಳಿಸಿಕೊಟ್ಟಿದ್ದಾರಂತೆ. ಅಲ್ಲದೆ, ತಮಗೆ ಸಂಭಾವನೆ ಕಮ್ಮಿ ಕೊಟ್ಟರೂ ಪರ್ವಾಗಿಲ್ಲ. ತರುಣ್ ಸುಧೀರ್ ಮತ್ತು ವಿನೋದ್ ಪ್ರಭಾಕರ್ ಗೆ ''ಒಳ್ಳೆ ಪೇಮೆಂಟ್'' ಕೊಡಿ ಅಂತ ನಿರ್ಮಾಪಕರಿಗೆ ಹೇಳಿ ಹೃದಯವಂತಿಕೆ ಮೆರೆದಿದ್ದಾರೆ.

  ಕಾಸ್ಟ್ಯೂಮ್ ಗೆ ದುಡ್ಡು ವೇಸ್ಟ್ ಮಾಡಬೇಡಿ.!

  ಕಾಸ್ಟ್ಯೂಮ್ ಗೆ ದುಡ್ಡು ವೇಸ್ಟ್ ಮಾಡಬೇಡಿ.!

  ದರ್ಶನ್ ಧರಿಸುವ ಜೀನ್ಸ್ ಪ್ಯಾಂಟ್ ಬ್ರ್ಯಾಂಡ್ ಟ್ರೂ ರಿಲಿಜನ್. ಇದರ ಒಂದು ಪ್ಯಾಂಟ್ ಬೆಲೆ 50 ಸಾವಿರದಿಂದ 1 ಲಕ್ಷ ರೂಪಾಯಿ. 'ರಾಬರ್ಟ್' ಚಿತ್ರದಲ್ಲಿ ನಟ ದರ್ಶನ್ ಜೀನ್ಸ್ ಪ್ಯಾಂಟ್ ಗಳನ್ನೇ ಹೆಚ್ಚಾಗಿ ಧರಿಸಬೇಕಾದ ಕಾರಣ, 15-20 ಜೀನ್ಸ್ ಪ್ಯಾಂಟ್ ಗಳನ್ನು ಕೊಳ್ಳಲು ನಿರ್ಮಾಪಕರು ಪ್ಲಾನ್ ಮಾಡಿದ್ರಂತೆ. ಆದ್ರೆ, ಅದಕ್ಕೆ ದರ್ಶನ್ ಬಿಲ್ ಕುಲ್ ನೋ ಎಂದಿದ್ದರು.

  ಅಭಿಮಾನಿಗಳಿಗೆ ಹೊಸ ಚಾಲೆಂಜ್ ನೀಡಿದ ಆಶಾ ಭಟ್ಅಭಿಮಾನಿಗಳಿಗೆ ಹೊಸ ಚಾಲೆಂಜ್ ನೀಡಿದ ಆಶಾ ಭಟ್

  ಪ್ರೊಡಕ್ಷನ್ ಕಾಸ್ಟ್ ಕಮ್ಮಿ ಮಾಡಿಕೊಟ್ಟಿದ್ದಾರೆ.!

  ಪ್ರೊಡಕ್ಷನ್ ಕಾಸ್ಟ್ ಕಮ್ಮಿ ಮಾಡಿಕೊಟ್ಟಿದ್ದಾರೆ.!

  ''ನಮ್ಮ ಸಿನಿಮಾದಲ್ಲಿ ದರ್ಶನ್ ಹಾಕುವ ಜೀನ್ಸ್ ಪ್ಯಾಂಟ್ ಗಾಗಿ 20 ಲಕ್ಷ ಬೇಕಾಗಿತ್ತು. ಆದ್ರೆ, ''ನನ್ನ ಬಳಿಯೇ ಸುಮಾರು ಜೀನ್ಸ್ ಇವೆ. ಅಷ್ಟೊಂದು ಜೀನ್ಸ್ ತೆಗೆದುಕೊಳ್ಳಬೇಡಿ. 4-5 ತೆಗೆದುಕೊಂಡು ಬನ್ನಿ ಸಾಕು. ಸುಮ್ಮನೆ ವೇಸ್ಟ್ ಮಾಡಬೇಡಿ'' ಅಂತ ದರ್ಶನ್ ಹೇಳಿದರು. ಈ ತರಹ ಹಲವು ಬಾರಿ ದರ್ಶನ್ ಪ್ರೊಡಕ್ಷನ್ ಕಾಸ್ಟ್ ಕಮ್ಮಿ ಮಾಡಿಕೊಟ್ಟಿದ್ದಾರೆ'' ಎಂದು ಹೇಳಿದ್ದಾರೆ 'ರಾಬರ್ಟ್' ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ.

  'ರಾಬರ್ಟ್'ನಲ್ಲಿ ಮೈಸೂರು ಹುಡುಗಿ: ಯಾರೀ ಸುಂದರಿ?'ರಾಬರ್ಟ್'ನಲ್ಲಿ ಮೈಸೂರು ಹುಡುಗಿ: ಯಾರೀ ಸುಂದರಿ?

  ಸಂಭಾವನೆ ವಿಷ್ಯದಲ್ಲಿ ಹೀಗೂ ಹೇಳಿದ್ದಾರೆ ನಟ ದರ್ಶನ್.!

  ಸಂಭಾವನೆ ವಿಷ್ಯದಲ್ಲಿ ಹೀಗೂ ಹೇಳಿದ್ದಾರೆ ನಟ ದರ್ಶನ್.!

  ''ನಾನು ಚೆನ್ನಾಗಿದ್ದೇನೆ. ವಿನೋದ್ ಪ್ರಭಾಕರ್ ಇನ್ನೂ ಬೆಳೆಯುತ್ತಿದ್ದಾರೆ. ಹೀಗಾಗಿ, ಮೊದಲು ಹೋಗಿ ಅವರಿಗೆ ಪೇಮೆಂಟ್ ಕೊಡಿ. ತರುಣ್ ಸುಧೀರ್, ವಿನೋದ್ ಗೆಲ್ಲಾ ಒಳ್ಳೆಯ ಪೇಮೆಂಟ್ ಕೊಡಿ. ನನಗೆ ಬೇಕಾದರೆ ಕಮ್ಮಿ ಕೊಡಿ'' ಎಂದು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡಗೆ ನಟ ದರ್ಶನ್ ಹೇಳಿದ್ರಂತೆ.

  'ರಾಬರ್ಟ್' ಟೀಸರ್ ಯಶಸ್ಸಿನ ಹಿಂದಿರುವ ಈ ಗೌತಮ್ ರಾಜ್ ಯಾರು?'ರಾಬರ್ಟ್' ಟೀಸರ್ ಯಶಸ್ಸಿನ ಹಿಂದಿರುವ ಈ ಗೌತಮ್ ರಾಜ್ ಯಾರು?

  ಫೈಟರ್ಸ್ ಬಗ್ಗೆ ದರ್ಶನ್ ಕಳಕಳಿ

  ಫೈಟರ್ಸ್ ಬಗ್ಗೆ ದರ್ಶನ್ ಕಳಕಳಿ

  ''ದರ್ಶನ್ ಸಿನಿಮಾ ಅಂದ್ಮೇಲೆ, ಸೆಟ್ ನಲ್ಲಿ ಪ್ರತಿದಿನ ನಾನ್ ವೆಜ್ ಇರಬೇಕು. ಫೈಟ್ ಸನ್ನಿವೇಶಗಳು ಇದ್ದಾಗಲ್ಲಂತೂ, ಫೈಟರ್ ಗಳದ್ದು ಡೈಲಿ ಪೇಮೆಂಟ್ ಸೆಟಲ್ ಆಗಬೇಕು. ಅವರು ಕಷ್ಟ ಪಡುತ್ತಾರೆ ಅಂತ ಹೇಳ್ತಾರೆ ನಟ ದರ್ಶನ್'' - ಉಮಾಪತಿ ಶ್ರೀನಿವಾಸ್ ಗೌಡ

  ದರ್ಶನ್ ದೊಡ್ಡ ಗುಣ

  ದರ್ಶನ್ ದೊಡ್ಡ ಗುಣ

  ದರ್ಶನ್ ರವರ 'ಕರಿಯ' ಸಿನಿಮಾ ನೋಡಿ ಫ್ಯಾನ್ ಆಗಿದ್ದ ಉಮಾಪತಿ ಶ್ರೀನಿವಾಸ್ ಗೌಡ ಇದೀಗ ದರ್ಶನ್ ಗಾಗಿಯೇ 'ರಾಬರ್ಟ್' ಚಿತ್ರ ನಿರ್ಮಾಣ ಮಾಡಿದ್ದಾರೆ. ತಾವು ಬೆಳೆಯುವ ಜೊತೆಗೆ ಯುವ ಪ್ರತಿಭೆಗಳನ್ನೂ ಬೆಳೆಸುತ್ತಿರುವ ದರ್ಶನ್ ದೊಡ್ಡ ಗುಣಕ್ಕೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಸಲಾಂ ಹೊಡೆಯುತ್ತಾರೆ.

  English summary
  Producer Umapathi Srinivas Gowda speaks about Kannada Actor Darshan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X