twitter
    For Quick Alerts
    ALLOW NOTIFICATIONS  
    For Daily Alerts

    ಗೆದ್ದು ಬೀಗುತ್ತಿರುವ ಸ್ಯಾಂಡಲ್‌ವುಡ್‌ ಮುಂದೆ ನೂರೆಂಟು ಸವಾಲುಗಳು: ನಿರ್ಮಾಪಕರ ಆತಂಕವೇನು?

    |

    2022 ಕನ್ನಡ ಚಿತ್ರರಂಗಕ್ಕೆ ಅದೃಷ್ಟದ ವರ್ಷ. ಸ್ಯಾಂಡಲ್‌ವುಡ್ ಈ ಮಟ್ಟಿಗೆ ಇಂತಹದ್ದೊಂದು ಸಕ್ಸಸ್ ನೋಡಿರಲಿಲ್ಲ. ಕನ್ನಡ ಸಿನಿಮಾಗಳು ಈಗ ವಿಶ್ವದ ಮೂಲೆ ಮೂಲೆಗೆ ತಲುಪುತ್ತಿವೆ. 'ಕೆಜಿಎಫ್ 2'ನಿಂದ ಶುರುವಾದ ಈ ಪರ್ವ ಇನ್ನೂ ಮುಂದುವರೆಯುತ್ತಿದೆ.

    'ಕೆಜಿಎಫ್ 2', 'ಜೇಮ್ಸ್', 'ವಿಕ್ರಾಂತ್ ರೋಣ', '777 ಚಾರ್ಲಿ' ಈಗ 'ಕಾಂತಾರ' ವಿಶ್ವದಾದ್ಯಂತ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿವೆ. ಬೇರೆ ಯಾವುದೇ ಚಿತ್ರರಂಗವೂ ಮಾಡದ ಸಾಧನೆಯನ್ನು ಈ ವರ್ಷ ಕನ್ನಡ ಚಿತ್ರರಂಗ ಮಾಡಿ ತೋರಿಸಿದೆ. ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡಿ ಗೆದ್ದಿರುವ ಸ್ಯಾಂಡಲ್‌ವುಡ್‌ನ ಮುಂದಿನ ಹಾದಿ ಸುಗಮವಾಗಿಲ್ಲ.

    'ಕಾಂತಾರ' ಹೆಸರಿಗೆ ನಾನ್ KGF - 2 ಬಾಕ್ಸಾಫೀಸ್ ದಾಖಲೆ: ರಾಜ್ಯೋತ್ಸವ ದಿನವೇ ₹300 ಕೋಟಿ ಗಡಿ ದಾಟಿ ಹೊಸ ಮೈಲಿಗಲ್ಲು!'ಕಾಂತಾರ' ಹೆಸರಿಗೆ ನಾನ್ KGF - 2 ಬಾಕ್ಸಾಫೀಸ್ ದಾಖಲೆ: ರಾಜ್ಯೋತ್ಸವ ದಿನವೇ ₹300 ಕೋಟಿ ಗಡಿ ದಾಟಿ ಹೊಸ ಮೈಲಿಗಲ್ಲು!

    ಬಾಕ್ಸಾಫೀಸ್‌ನಲ್ಲಿ 100 ಕೋಟಿ ಗಳಿಸುವುದಕ್ಕೂ ಪರದಾಡುತ್ತಿದ್ದ ಕನ್ನಡ ಸಿನಿಮಾಗಳು ಸಾವಿರ ಕೋಟಿ ಕಲೆಕ್ಷನ್ ಮಾಡುವ ಹಂತಕ್ಕೆ ಬಂದಿದೆ. ದುಬಾರಿ ಮೇಕಿಂಗ್, ಅದ್ಭುತ ಕಂಟೆಂಟ್‌ನಿಂದ ಕನ್ನಡದ ಹಲವು ಸಿನಿಮಾಗಳು ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿವೆ. ಆದರೆ, ಇದೇ ಸಕ್ಸಸ್‌ ಅನ್ನು ಮುಂದುವರೆಸುಕೊಂಡು ಹೋಗುವಲ್ಲಿ ಯಶಸ್ವಿಯಾಗುತ್ತಾ? ಸ್ಯಾಂಡಲ್‌ವುಡ್‌ ಮುಂದಿರೋ ಸವಾಲುಗಳೇನು? ಅನ್ನೋದನ್ನು ಕನ್ನಡದ ಇಬ್ಬರು ಸ್ಟಾರ್ ನಿರ್ಮಾಪಕರಾದ ಕೆ ಮಂಜು ಹಾಗೂ ಜಾಕ್ ಮಂಜು ಫಿಲ್ಮಿಬೀಟ್ ಜೊತೆ ಹಂಚಿಕೊಂಡಿದ್ದಾರೆ.

    'ಕಾಂತಾರ' ಸ್ಟಾರ್ ಹೀರೊ ಮಾಡಿದ್ರೆ ಏನಾಗ್ತಿತ್ತು?

    'ಕಾಂತಾರ' ಸ್ಟಾರ್ ಹೀರೊ ಮಾಡಿದ್ರೆ ಏನಾಗ್ತಿತ್ತು?

    'ಕಾಂತಾರ' ಗ್ಲೋಬಲ್ ಸಕ್ಸಸ್ ಕನ್ನಡ ಚಿತ್ರರಂಗಕ್ಕೆ ಮತ್ತಷ್ಟು ಹುರುಷು ನೀಡಿದೆ. ಹೀಗಾಗಿ ಗ್ಲೊಬಲ್ ಲೆವೆಲ್‌ನಲ್ಲಿ ಸದ್ದು ಮಾಡೋ ಮುಂದಿನ ಕನ್ನಡ ಸಿನಿಮಾ ಯಾವುದು? ಗೆಲ್ಲಲು ಪ್ಯಾನ್ ಇಂಡಿಯಾ ಸಿನಿಮಾನೇ ಬೇಕಾ? ಅನ್ನೋ ಪ್ರಶ್ನೆ ಈಗಾಗಲೇ ಎದುರಾಗಿದೆ. "ಕೋವಿಡ್ ನಂತರ ಮನೆಯಲ್ಲಿ ಕೂತು ನೆಟ್‌ಫ್ಲಿಕ್ಸ್, ಅಮೆಜಾನ್ ಹೀಗೆ ಬೇರೆ ಬೇರೆ ಪ್ಲಾಟ್‌ಫಾರ್ಮ್‌ನಲ್ಲಿ ಜನ ನೋಡಿರುವುದರಿಂದ ಆ ಮಟ್ಟದ ಕ್ವಾಲಿಟಿ ಹಾಗೂ ಮೇಕಿಂಗ್ ಬಗ್ಗೆ ಒತ್ತು ಕೊಡಬೇಕು. ಮೇಕಿಂಗ್‌ನಲ್ಲಿ ಕಡಿಮೆ ಇದ್ದರೆ ಸಿನಿಮಾ ಗೆಲ್ಲುವುದಿಲ್ಲ. ಕಾಸ್ಟಿಂಗ್‌ ಅನ್ನೋದು ತುಂಬಾನೇ ಮುಖ್ಯ. ನನ್ನ ವೈಯಕ್ತಿಕ ಅಭಿಪ್ರಾಯದ ಪ್ರಕಾರ, ಇದೇ ಕಾಂತಾರ ಸಿನಿಮಾವನ್ನು ಒಬ್ಬ ಟಾಪ್ ಸ್ಟಾರ್ ಮಾಡಿದ್ದರೆ, ಏನಾಗುತ್ತಿತ್ತು ಅನ್ನೋ ಪ್ರಶ್ನೆಯನ್ನು ನಿಮಗೆ ನೀವೇ ಹಾಕಿಕೊಳ್ಳಿ. ನಿರೀಕ್ಷೆ ಇಟ್ಟುಕೊಂಡು ಒಳಗಡೆ ಹೋಗುವಂತಹ ಆಡಿಯನ್ಸ್‌ಗೆ ಯಾವ ರೀತಿ ಸಿನಿಮಾ ಮಾಡಬೇಕು. ನಿರೀಕ್ಷೆ ಇಲ್ಲದೆ ಇರುವಂತಹ ಹೀರೊಗೆ ಯಾವ ರೀತಿ ಕಂಟೆಂಟ್ ಸಿನಿಮಾ ಮಾಡಬೇಕು. ಆಮೇಲೆ ಶೂಟಿಂಗ್ ಹೋಗುವುದಕ್ಕಿಂತ ಮುನ್ನ ಪ್ರೀ-ಪ್ರೊಡಕ್ಷನ್ ಅಥವಾ ಶೂಟಿಂಗ್ ಮುನ್ನ ಸಿನಿಮಾ ನೋಡುವ ಪ್ರಕ್ರಿಯೆ ನಮ್ಮ ಚಿತ್ರರಂಗದಲ್ಲಿ ನಡೆಯುತ್ತಿದೆ. ಅದಕ್ಕೆ ಉತ್ತಮವಾದ ಸಿನಿಮಾಗಳು ಬರುತ್ತಿವೆ. ಅದೇ ರೀತಿ ಇನ್ನೂ ಎಚ್ಚರವಹಿಸಿ, ಆಡಿಯ್ಸ್ ಪಲ್ಸ್, ಮ್ಯೂಸಿಕ್ ಎಲ್ಲವೂ ಚೆನ್ನಾಗಿರಬೇಕು." ಎನ್ನುತ್ತಾರೆ ನಿರ್ಮಾಪಕ ಜಾಕ್ ಮಂಜು.

    'ಒಂದೇ ತರಹದ ಸಿನಿಮಾ ಬೇಡ'

    'ಒಂದೇ ತರಹದ ಸಿನಿಮಾ ಬೇಡ'

    ಒಂದು ಸಿನಿಮಾ ಗೆದ್ದರೆ, ಅದೇ ಪ್ರಕಾರದ ಸಿನಿಮಾಗಳನ್ನು ಮಾಡಲು ಫಿಲ್ಮ್‌ ಮೇಕರ್ಸ್ ಮುಂದಾಗುತ್ತಾರೆ. 'ಮುಂಗಾರ ಮಳೆ' ಸಿನಿಮಾ ಬಂದಾಗಲೂ ಹೀಗೆ ಆಗಿತ್ತು. ಹೀಗಾಗಿ ನಿರ್ಮಾಪಕ ಕೆ. ಮಂಜು ಇಂತಹದ್ದೊಂದು ಎಚ್ಚರಿಕೆ ನೀಡಿದ್ದಾರೆ. "ಕನ್ನಡ ಚಿತ್ರರಂಗ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದೆ. ಎಲ್ಲಾ ಚಿತ್ರರಂಗ ನಮ್ಮ ಕಡೆ ತಿರುಗಿ ನೋಡುತ್ತಿದೆ. ಈ ಬೆನ್ನಲ್ಲೇ ಒಂದೇ ತರಹದ ಸಿನಿಮಾ ಮಾಡುವುದಕ್ಕೆ ಮುಂದಾಗುತ್ತಾರೆ. ಇದು ದೊಡ್ಡ ತಲೆನೋವಾಗಬಹುದು. ಈಗ ಕಾಂತಾರದಂತಹ ಸಿನಿಮಾ ತೆಲುಗಿನ 35 ರಿಂದ 40 ಕೋಟಿ ರೂ., ಹಿಂದಿಯಲ್ಲಿ 40 ಕೋಟಿ ರೂ. ಹಾಗೂ ತಮಿಳಿನಲ್ಲಿ7-8 ಕೋಟಿ ರೂ. ಮಾಡುತ್ತೆ ಅಂದರೆ, ಕಂಟೆಂಟ್‌ನಿಂದ ಸಾಧ್ಯ ಆಗಿದೆ. ಹೀಗಿರುವಾಗ, ಎಲ್ಲಾ ಪ್ರಕಾರದ ಸಿನಿಮಾಗಳೂ ಬರಬೇಕು. ಆಗಲೇ ಈ ಯಶಸ್ಸನ್ನು ಮುಂದುವರೆಸಿಕೊಂಡು ಹೋಗಬಹುದು." ಎನ್ನುತ್ತಾರೆ ನಿರ್ಮಾಪಕ ಕೆ ಮಂಜು.

    'ನನಗೆ ಕಬ್ಜ ಕೊಡಿಸಿ ಅಂತಿದ್ದಾರೆ'

    'ನನಗೆ ಕಬ್ಜ ಕೊಡಿಸಿ ಅಂತಿದ್ದಾರೆ'

    "ನಾನು ಮೊನ್ನೆ ಬಾಂಬೆಗೆ ಹೋಗಿದ್ದೆ , ನನಗೆ ಕಬ್ಜ ಬೇಕು ಕೊಡಿಸಿ ಅಂತ ಕಂಪನಿಗಳ ಹೆಸರು ಹೇಳಲು ಇಷ್ಟ ಪಡುವುದಿಲ್ಲ. ಅವರು ನನ್ನನ್ನು ಅಪ್ರೋಚ್ ಮಾಡುತ್ತಿದ್ದಾರೆ. ಇದೆಲ್ಲದನ್ನೂ ಗಮನದಲ್ಲಿಟ್ಟುಕೊಂಡು ಒಳ್ಳೆ ಸಿನಿಮಾ ಮಾಡಿದ್ರೆ, ಮೇಲ್ವರ್ಗಕ್ಕೆ ಹೋಗುವ ಪ್ರಯತ್ನ ಏನು ನಡೀತಿದೆ. ಇನ್ನೂ ರೀಚ್ ಆಗಿದ್ದೀವಿ ಅಂತ ಹೇಳಲ್ಲ. ಈಗಾಗಲೇ, ತಮಿಳು, ತೆಲುಗು ರೀಚ್ ಆಗಿದ್ದಾರೆ, ನಾವು ಆ ಪ್ರಯತ್ನದಲ್ಲಿ ಇದ್ದೀವಿ. ದೊಡ್ಡ ಮಟ್ಟಕ್ಕೆ ಯಶಸ್ವಿಯಾಗಬೇಕಾದರೆ, ಇನ್ನೂ ಎಚ್ಚರ ವಹಿಸಿ ಮಾಡಬೇಕು ಅನ್ನೋದು ನನ್ನ ಅನಿಸಿಕೆ." ಅಂತಾರೆ ವಿಕ್ರಾಂತ್ ರೋಣ ನಿರ್ಮಾಪಕ ಜಾಕ್ ಮಂಜು.

    ಸಂತೋಷ- ದು:ಖ ಎರಡೂ ಆಗಿದೆ

    ಸಂತೋಷ- ದು:ಖ ಎರಡೂ ಆಗಿದೆ

    "ಈ ಸಕ್ಸಸ್ ಎಷ್ಟು ಸಂತೋಷ ಪಡಬೇಕಾಗಿದೆಯೋ, ಅಷ್ಟೇ ದು:ಖ ಕೂಡ ಪಡಬೇಕಿದೆ. ಬಾಹುಬಲಿ ಅಂತ ಸಿನಿಮಾ ಮಾಡಿದ ಬಳಿಕ ತೆಲುಗು ಚಿತ್ರರಂಗ ಏನಾಯ್ತು? ಆ ಕಣ್ತುಂಬುವಂತಹ ದೃಶ್ಯಗಳನ್ನು, ಕ್ವಾಲಿಟಿ ಮೇಕಿಂಗ್ ನೋಡಿದ ನಂತರ ಸಣ್ಣ ಪುಟ್ಟ ಸಿನಿಮಾ ನೋಡಲು ಒಂದು ಒಂದೂವರೆ ವರ್ಷ ಜನರು ಹಿಂದೆ ಸರಿದರು. ಅದೇ ರೀತಿ ನಾವು 4-5 ಉತ್ತಮ ಸಿನಿಮಾಗಳನ್ನು ಮಾಡಿ ನೋಡಿದ ಬಳಿಕ ಮುಂದೆ ಕೂಡ ಉತ್ತವಾದ ಸಿನಿಮಾ ಮಾಡಿಲ್ಲ ಅಂದರೆ, ಆಡಿಯನ್ಸ್ ಒಳಗಡೆ ಬರೋದಿಲ್ಲ. ಮಾರ್ಕೆಟಿಂಗ್ ಕೂಡ ಅಷ್ಟೇ ಮುಖ್ಯ. ಹಾಗೇ ಉತ್ತಮ ಸಿನಿಮಾ ಮಾಡಲು ಹೋದಾಗ, ಒಂದೂವರೆ ವರ್ಷ ಗ್ಯಾಪ್ ತೆಗೆದುಕೊಂಡಾಗ ಆ ಗ್ಯಾಪ್‌ನಲ್ಲಿ ಮುತುರ್ವರ್ಜಿ ವಹಿಸದೇ ಇದ್ದ ಸಂದರ್ಭದಲ್ಲಿ ತೊಂದರೆಗೆ ಒಳಗಾಗಬೇಕಾಗುತ್ತೆ." ಎಂದು ಎಚ್ಚರಿಕೆ ನೀಡುತ್ತಾರೆ ಜಾಕ್ ಮಂಜು.

    'ಹೊಸ ಪ್ರತಿಭೆಗಳಿಗೂ ಸಿನಿಮಾ ಮಾಡಬೇಕು'

    'ಹೊಸ ಪ್ರತಿಭೆಗಳಿಗೂ ಸಿನಿಮಾ ಮಾಡಬೇಕು'

    "ಕಂಟೆಂಟ್ ಇರುವಂತಹ ಸಿನಿಮಾವನ್ನೇ ಮಾಡಬೇಕಿದೆ. ಜೊತೆಗೆ ಹೊಸ ಪ್ರತಿಭೆಗಳಿಗೂ ಪ್ರೋತ್ಸಾಹ ಬೇಕಿದೆ. ಅವರೂ ಕೂಡ ಕಂಟೆಂಟ್ ಇರುವಂತಹ ಸಿನಿಮಾವನ್ನೇ ಮಾಡಬೇಕಿದೆ. ಹೀಗಾಗಿ ಕೇವಲ ಸ್ಟಾರ್ ಹೀರೊಗಳಿಗೆಷ್ಟೇ ಅಲ್ಲ. ಅಪ್‌ ಕಮಿಂಗ್ ಹೀರೊಗಳೂ ದೊಡ್ಡ ಸವಾಲನ್ನು ಎದುರಿಸಬೇಕಿದೆ. ಈ ಸದ್ಯಕ್ಕೆ ನಮ್ಮ ಮುಂದಿರೋ ಚಾಲೆಂಜ್" ಎನ್ನುತ್ತಾರೆ ನಿರ್ಮಾಪಕ ಕೆ. ಮಂಜು.

    ಕನ್ನಡ ರಾಜ್ಯೋತ್ಸವ ರಸಪ್ರಶ್ನೆ: ಈ 10 ಪ್ರಶ್ನೆಗಳಿಗೆ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಬಲ್ಲಿರಾ?ಕನ್ನಡ ರಾಜ್ಯೋತ್ಸವ ರಸಪ್ರಶ್ನೆ: ಈ 10 ಪ್ರಶ್ನೆಗಳಿಗೆ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಬಲ್ಲಿರಾ?

    English summary
    Producers K Manju And Jack Manju About Kannada Industry Future After Pan India Success, Know More.
    Wednesday, November 2, 2022, 15:23
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X