»   » ಯಶ್ 'ಮಾಸ್ಟರ್ ಪೀಸ್' ಮೇಲೆ 'ಮಂಡ್ಯ ಸ್ಟಾರ್' ಟಾರ್ಗೆಟ್.!

ಯಶ್ 'ಮಾಸ್ಟರ್ ಪೀಸ್' ಮೇಲೆ 'ಮಂಡ್ಯ ಸ್ಟಾರ್' ಟಾರ್ಗೆಟ್.!

By: ಹರಾ
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಗಾಡ್ ಫಾದರ್ ಇಲ್ಲದೆ 'ರಾಕಿಂಗ್ ಸ್ಟಾರ್' ಆಗಿ ಬೆಳೆದ ಪ್ರತಿಭೆ ಯಶ್. 'ಗೂಗ್ಲಿ', 'ರಾಜಾಹುಲಿ', 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಸೇರಿದಂತೆ ಸಾಲು ಸಾಲು ಹಿಟ್ ಸಿನಿಮಾಗಳನ್ನ ನೀಡಿರುವ ಯಶ್ ಇನ್ನೆರಡು ದಿನಗಳಲ್ಲಿ 'ಮಾಸ್ಟರ್ ಪೀಸ್' ಆಗಿ ನಿಮ್ಮ ಮುಂದೆ ಬರಲಿದ್ದಾರೆ.

ಹೀಗಿರುವಾಗಲೇ, ಯಶ್ ರನ್ನ ಕೆಲವರು ಟಾರ್ಗೆಟ್ ಮಾಡುತ್ತಿದ್ದಾರೆ. ರಾಕಿಂಗ್ ಸ್ಟಾರ್ ವಿರುದ್ಧ 'ಮಂಡ್ಯ ಸ್ಟಾರ್' ಚಿತ್ರತಂಡದವರು ಮಸಲತ್ತು ಮಾಡ್ತಿದ್ದಾರೆ ಎನ್ನುವ ಮಾತು ಯಶ್ ಆಪ್ತ ವಲಯದಲ್ಲಿ ಜೋರಾಗಿ ಕೇಳಿ ಬರುತ್ತಿದೆ.[ಯಶ್ ವಿರುದ್ಧ ನಡೀತಿದೆ 'ಮಂಡ್ಯ ಸ್ಟಾರ್'ಗಳ ಮಸಲತ್ತು?]


ಇದಕ್ಕೆ ಕಾರಣ 'ಮಾಸ್ಟರ್ ಪೀಸ್' ಚಿತ್ರ ಬಿಡುಗಡೆ ಆಗುವ ಎಲ್ಲಾ ಚಿತ್ರಮಂದಿರಗಳಲ್ಲಿ ಡಿಸೆಂಬರ್ 24ನೇ ತಾರೀಖು 'ಮಂಡ್ಯ ಸ್ಟಾರ್' ಚಿತ್ರತಂಡದವರು ಹಮ್ಮಿಕೊಂಡಿರುವ ಪ್ರತಿಭಟನೆ.! ಮುಂದೆ ಓದಿ.....


ಪ್ರತಿಭಟನೆ ಯಾಕೆ?

ಯುವ ಪ್ರತಿಭೆಗಳು ಕೂಡಿ ಮಾಡಿರುವ 'ಮಂಡ್ಯ ಸ್ಟಾರ್' ಚಿತ್ರದ ಸಣ್ಣ ಪಾತ್ರದಲ್ಲಿ ನಟಿಸುವಂತೆ ಹಾಗೂ ಆ ಚಿತ್ರತಂಡದವರ ಕಾರ್ಯಕ್ರಮಕ್ಕೆ ಬರುವಂತೆ ಯಶ್ ರನ್ನ ಚಿತ್ರತಂಡದವರು ಸಂಪರ್ಕ ಮಾಡಿದ್ರಂತೆ. ಅದಕ್ಕೆ ಯಶ್ ನಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಕ್ಕೆ 'ಮಂಡ್ಯ ಸ್ಟಾರ್' ಚಿತ್ರತಂಡವರು ಕೆರಳಿದ್ದಾರೆ.['ರಾಜಾಹುಲಿ' ಯಶ್ ವಿರುದ್ಧ ಅಣ್ತಮ್ಮಂದಿರು ತಿರುಗಿಬಿದ್ದಿರುವುದೇಕೆ?]


ಯಶ್ ಏನು ಹೇಳಿದ್ರು?

'ಮಂಡ್ಯ ಸ್ಟಾರ್' ಚಿತ್ರತಂಡದವರು ಹೇಳುವ ಪ್ರಕಾರ, ನಟ ಯಶ್ ರೈತರ ಕುರಿತು ಬಾಯಿಗೆ ಬಂದಂತೆ ಮಾತನಾಡಿದ್ರಂತೆ. ಇದೇ ಕಾರಣಕ್ಕೆ ಕೆಲ ತಿಂಗಳ ಹಿಂದೆ 'ಮಂಡ್ಯ ಸ್ಟಾರ್' ಚಿತ್ರತಂಡದವರು ಪ್ರತಿಭಟನೆ ಮಾಡಿದ್ರು.


ಈಗಲೂ ಪ್ರತಿಭಟನೆ

ತಿಂಗಳು ಉರುಳಿದ ನಂತರ ಇದೀಗ 'ಮಂಡ್ಯ ಸ್ಟಾರ್' ಚಿತ್ರತಂಡದವರು 'ಮಾಸ್ಟರ್ ಪೀಸ್' ಬಿಡುಗಡೆ ದಿನಾಂಕವನ್ನು ಮುಂದಿಟ್ಟುಕೊಂಡು ಪ್ರತಿಭಟನೆಗೆ ಸಜ್ಜಾಗಿದ್ದಾರೆ. 'ಮಾಸ್ಟರ್ ಪೀಸ್' ಬಿಡುಗಡೆ ಆಗುವ ಎಲ್ಲಾ ಚಿತ್ರಮಂದಿರದ ಮುಂದೆ ಬೆಳಗ್ಗೆ 7 ಗಂಟೆಯಿಂದಲೇ 'ಮಂಡ್ಯ ಸ್ಟಾರ್' ಟೀಮ್ ಪ್ರತಿಭಟನೆ ಮಾಡಲಿದ್ಯಂತೆ.


ಟಾರ್ಗೆಟ್ ಆಗ್ತಿದ್ದಾರಾ ಯಶ್?

ಓಡೋ ಕುದುರೆ ಯಶ್ ರನ್ನ ಹಿಡಿದು ನಿಲ್ಲಿಸುವುದಕ್ಕೆ ಆಗದವರ ಕುಮ್ಮಕ್ಕಿನಿಂದ ಇಂತಹ ಇಲ್ಲಸಲ್ಲದ ವಿವಾದ ಭುಗಿಲೇಳುತ್ತಿದೆ ಅನ್ನೋದು ಕೆಲವರ ವಾದ.


ಸಾಕ್ಷಿ ಏನಿದೆ?

ಅಷ್ಟಕ್ಕೂ ಯಶ್ ಹಾಗೆ ರೈತರ ವಿರುದ್ಧ ಮಾತನಾಡಿರುವುದಕ್ಕೆ ಸಾಕ್ಷಿ ಏನಿದೆ ಅನ್ನೋದನ್ನ 'ಮಂಡ್ಯ ಸ್ಟಾರ್' ತಂಡ ಸ್ಪಷ್ಟ ಪಡಿಸಿಲ್ಲ. ಇನ್ನೂ ಯಾವುದೇ ಸಿನಿಮಾದಲ್ಲಿ ಅಭಿನಯಿಸುವುದು, ಬಿಡುವುದು ಅವರವರ ವೈಯುಕ್ತಿಕ ಇಚ್ಛೆ.


ರಿಲೀಸ್ ದಿನವೇ ಪ್ರತಿಭಟನೆ ಯಾಕೆ?

ರೈತರಿಗೆ ಯಶ್ ಕ್ಷಮೆ ಕೇಳಬೇಕು ಅಂತ ಅಂದು 'ಮಂಡ್ಯ ಸ್ಟಾರ್' ತಂಡ ಪ್ರತಿಭಟನೆ ಮಾಡಿತ್ತು. ಆದರೆ, ಈಗ 'ಮಾಸ್ಟರ್ ಪೀಸ್' ಚಿತ್ರ ಬಿಡುಗಡೆ ಸಮಯದಲ್ಲಿ ಮತ್ತೊಮ್ಮೆ ಪ್ರತಿಭಟನೆ ಮಾಡುತ್ತಿರುವುದಕ್ಕೆ ಯಶ್ 'ಟಾರ್ಗೆಟ್' ಆಗ್ತಿದ್ದಾರೆ ಎನ್ನುವುದಕ್ಕೆ ಬೆಸ್ಟ್ ಎಕ್ಸಾಂಪಲ್ ಅನ್ನೋದು ಯಶ್ ಆಪ್ತ ವಲಯದ ಅಭಿಪ್ರಾಯ.


ಚಿತ್ರ ಬಿಡುಗಡೆ ಆಗುವುದಕ್ಕೆ ಬಿಡಲ್ವಂತೆ.!

''ಉಗ್ರ ಪ್ರತಿಭಟನೆ ಮಾಡಿ 'ಮಾಸ್ಟರ್ ಪೀಸ್' ಸಿನಿಮಾ ತೆರೆಕಾಣಿಸದಂತೆ ಮಾಡ್ತೀವಿ'' ಅಂತ 'ಮಂಡ್ಯ ಸ್ಟಾರ್' ಚಿತ್ರತಂಡ ಹೇಳಿಕೊಂಡಿದೆ.


ಪಬ್ಲಿಸಿಟಿ ಗಿಮಿಕ್.!

ಇದುವರೆಗೂ ಸದ್ದು ಮಾಡದ 'ಮಂಡ್ಯ ಸ್ಟಾರ್', 'ಮಾಸ್ಟರ್ ಪೀಸ್' ಸಿನಿಮಾ ರಿಲೀಸ್ ಟೈಮ್ ನಲ್ಲಿ ಸದ್ದು ಮಾಡಿ ಪಬ್ಲಿಸಿಟಿ ಗಿಮಿಕ್ ಮಾಡ್ತಿದ್ದಾರೆ ಅಂತ ಹೇಳುವವರೂ ಇದ್ದಾರೆ.


ರೈತರ ಸಂಗವೇ ಛೀಮಾರಿ ಹಾಕಿದೆ.!

'ಮಾಸ್ಟರ್ ಪೀಸ್' ಸಿನಿಮಾ ಬಿಡುಗಡೆ ಆಗುವುದಕ್ಕೆ ಬಿಡಲ್ಲ ಅಂತ್ಹೇಳಿ ಮಂಡ್ಯದ ತುಂಬಾ 'ಮಂಡ್ಯ ಸ್ಟಾರ್' ತಂಡದವರು ಹೇಳಿಕೊಂಡಿದ್ದಾರೆ. ಮಂಡ್ಯದ ರೈತರ ಸಂಘದವರಿಗೂ ಈ ಸುದ್ದಿ ಗೊತ್ತಾಗಿ 'ಮಂಡ್ಯ ಸ್ಟಾರ್' ಚಿತ್ರತಂಡದವರನ್ನ ಕರೆದು ಛೀಮಾರಿ ಹಾಕಿದೆ.


ಯಶ್ ವಿರುದ್ಧ ಆರೋಪ ಸಲ್ಲದ್ದು!

ಯಶ್ ವಿರುದ್ಧ ವಿನಾಕಾರಣ ಆರೋಪ ಮಾಡುತ್ತಿರುವ 'ಮಂಡ್ಯ ಸ್ಟಾರ್' ಚಿತ್ರತಂಡಕ್ಕೆ ರೈತರ ಸಂಘ ಬೆಂಡೆತ್ತಿ ಬ್ರೇಕ್ ಹಾಕಿದೆ. ಇನ್ನಾದರೂ 'ಮಂಡ್ಯ ಸ್ಟಾರ್' ತಂಡ ಎಚ್ಚೆತ್ತುಕೊಳ್ಳುತ್ತಾ ಅಂತ ನೋಡೋಣ.


English summary
According to the close circle of Rocking Star Yash, it seems that 'Mandya Star' team is targeting Yash unnecessarily by organizing protest on 'Masterpiece' release date 24th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada