For Quick Alerts
  ALLOW NOTIFICATIONS  
  For Daily Alerts

  'ದೂರದರ್ಶನ'ದಲ್ಲಿ ಹೊಸ ಸಮಾಚಾರ: ಮಾತು ಮುಗೀತು!

  |

  'ದೂರದರ್ಶನ' ಈ ಹೆಸರು ಗೊತ್ತಿಲ್ಲದವರು ಬಹುಶ: ಯಾರೂ ಇರಲಿಕ್ಕಿಲ್ಲ. ಈ ಹೆಸರು ಕೇಳಿದ ಕೂಡಲೇ ಬಹುತೇಕ ಮಂದಿ 80ರ ದಶಕಕ್ಕೆ ಒಮ್ಮೆ ಹೋಗಿ ಬರುತ್ತಾರೆ. ಆದರೆ, ದೂರದರ್ಶನ ಅಂದರೆ, ಹಲವು ಮಂದಿಗೆ ನೆನಪಾಗೋದು ಅಂದಿನ ಕಾಲದ ಟಿವಿ. ಕೆಲವು ದಿನಗಳ ಹಿಂದೆ ಇದೇ ಟೈಟಲ್ ಇಟ್ಟು ಸಿನಿಮಾವವೊಂದು ಆರಂಭ ಆಗಿತ್ತು. ಆ ಸಿನಿಮಾದ ತಂಡ ಹೊಸ ಅಪ್‌ಡೇಟ್ ಜೊತೆ ಮತ್ತೆ ಪ್ರತ್ಯಕ್ಷ ಆಗಿದೆ.

  ಸ್ಯಾಂಡಲ್‌ವುಡ್‌ನಲ್ಲಿ 'ದೂರದರ್ಶನ' ನಿಧಾನವಾಗಿ ಗಮನ ಸೆಳೆಯಲು ಆರಂಭಸಿದೆ. 'ದಿಯಾ' ಅಂತಹ ಸೂಪರ್‌ ಹಿಟ್ ಸಿನಿಮಾ ಕೊಟ್ಟ ನಟ ಪೃಥ್ವಿ ಅಂಬಾರ್ ಇದರಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಪೃಥ್ವಿಯ ಫಸ್ಟ್ ಲುಕ್ ಕಿಕ್ ಕೊಡುತ್ತಿದೆ.

  ಅಂದ್ಹಾಗೆ 'ದೂರದರ್ಶನ' ಕರಾವಳಿ ಹಾಗೂ ಪಶ್ಚಿಮ ಘಟ್ಟಗಳ ನಡುವೆ ಇರುವ ಹಳ್ಳಿಯ ಕಥೆ. ಚಿಕ್ಕ ಊರೊಳಗೆ ಟಿವಿ ಎಂಟ್ರಿ ಕೊಡುತ್ತೆ. ದೂರದರ್ಶನ ಬಂದ ಕೂಡಲೇ ಆ ಊರಿನ ಮೇಲೆ ಏನೆಲ್ಲಾ ಪ್ರಭಾವ ಬೀರುತ್ತೆ? ಅನ್ನೋದನ್ನು ಅಂದಿನ ಕಾಲ ಘಟ್ಟದಲ್ಲೇ ತೋರಿಸುವ ಪ್ರಯತ್ನ ಮಾಡಲಾಗಿದೆ. ಸಿನಿಮಾದ ಟೈಟಲ್ ಇಂಟ್ರೆಸ್ಟಿಂಗ್ ಆಗಿದ್ದು, ಈ ಸಿನಿಮಾ 80ರ ದಶಕಕ್ಕೆ ಪ್ರೇಕ್ಷಕರನ್ನು ಕರೆದೊಯಲಿದೆ.

  ಈಗಾಗಲೇ ಸಿನಿಮಾ ತಂಡ ಇದು ವಿಭಿನ್ನ ಕಥೆಯನ್ನು ಆಧರಿಸಿದ ಸಿನಿಮಾ ಎಂದು ಸುಳಿವು ನೀಡಿದೆ. ದೂರದರ್ಶನ ಸಿನಿಮಾ ಆರಂಭದಿಂದಲೂ ಬಹಳಷ್ಟು ಸದ್ದು ಮಾಡುತ್ತಿದೆ. ಸದ್ಯ ಮ್ಯಾಟರ್ ಏನೆಂದರೆ, ಇದೀಗ ಡಬ್ಬಿಂಗ್ ಮುಗಿಸಿ, ಬಿಡುಗಡೆಗೆ ಸಜ್ಜಾಗುತ್ತಿದೆ. ಅಂದ್ಹಾಗೆ ಸುಕೇಶ್ ಶೆಟ್ಟಿ ಈ ಸಿನಿಮಾಗೆ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಇದು ಇವರ ಚೊಚ್ಚಲ ಸಿನಿಮಾ ಕೂಡ ಹೌದು.

  ಇನ್ನು ಪೃಥ್ವಿ ಅಂಬರ್ ನಾಯಕನಾಗಿ ನಟಿಸಿದ್ರೆ, ಇವರಿಗೆ ಜೋಡಿಯಾಗಿ ಆಯಾನಾ ನಟಿಸುತ್ತಿದ್ದಾರೆ. ಪ್ರಮುಖ ಪಾತ್ರದಲ್ಲಿ ಉಗ್ರಂ ಮಂಜು, ಸುಂದರ್ ವೀಣಾ ಕಾಣಿಸಿಕೊಂಡಿದ್ದು, ಉಳಿದಂತೆ ಹರಿಣಿ, ದೀಪಕ್‌ ರೈ ಪಾಣಾಜೆ, ರಘು ರಮಣಕೊಪ್ಪ, ಹುಲಿ ಕಾರ್ತಿಕ್‌, ಸೂರಜ್‌ ಮಂಗಳೂರು, ಸೂರ್ಯ ಕುಂದಾಪುರ ಸೇರಿದಂತೆ ಮತ್ತಿತರು ಸಿನಿಮಾದಲ್ಲಿದ್ದಾರೆ.

  Pruthvi Ambaar Starrer Dooradarshan Kannada Movie Dubbing Finished

  'ದೂರದರ್ಶನ' ಸಿನಿಮಾವನ್ನು ರಾಜೇಶ್ ಭಟ್ ನಿರ್ಮಾಣ ಮಾಡಿದ್ದು, ಉಗ್ರಂ ಮಂಜು ಕಾರ್ಯಕಾರಿ ನಿರ್ಮಾಪಕರಾಗಿ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಅರುಣ್ ಸುರೇಶ್ ಛಾಯಾಗ್ರಹಣವಿದ್ಧರೆ, ವಾಸುಕಿ ವೈಭವ ಸಂಗೀತವಿದೆ ಸದ್ಯ ಡಬ್ಬಿಂಗ್ ಮುಗಿಸಿರೋ ಚಿತ್ರತಂಡ ಸದ್ಯದರಲ್ಲೇ ಹೊಸ ಅಭಿರುಚಿಯ ಸಿನಿಮಾವನ್ನು ತೆರೆಗೆ ತರಲಿದೆ.

  English summary
  Pruthvi Ambaar Starrer Dooradarshan Kannada Movie Dubbing Finished, Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X