Don't Miss!
- Sports
ಆತ ಎಲ್ಲಾ ಪಿಚ್ಗಳಲ್ಲೂ ಉತ್ತಮ ಬೌಲಿಂಗ್ ಮಾಡುತ್ತಿದ್ದಾನೆ: ಭಾರತದ ವೇಗಿ ಬಗ್ಗೆ ಪಾಕಿಸ್ತಾನ ಮಾಜಿ ಕ್ರಿಕೆಟಿಗನ ಶ್ಲಾಘನೆ
- News
Namma Metro Pillar Collaps: ಪೊಲೀಸ್ ವಿಚಾರಣೆ ಎದುರಿಸಿದ ಬಿಎಂಆರ್ಸಿಎಲ್ ಎಂಡಿ ಅಂಜುಮ್ ಪರ್ವೇಜ್
- Finance
ಎಚ್ಡಿಎಫ್ಸಿಯಿಂದ 10ವರ್ಷದಲ್ಲಿ 30ಶತಕೋಟಿ ಸಂಗ್ರಹದ ಚಿಂತನೆ
- Technology
ಏರ್ಟೆಲ್ 5G+ ಯಿಂದ ರೈತರಿಗೆ ನೆರವು; ಭಾರೀ ಇಳುವರಿ ಪಡೆಯಬಹುದು!
- Automobiles
ಬೆಲೆ ಇಳಿಸಿ, ಹೆಚ್ಚಿನ ಮೈಲೇಜ್ನೊಂದಿಗೆ ಟಾಟಾ ಬಿಡುಗಡೆಗೊಳಿಸಿದ ನೆಕ್ಸಾನ್ ಇವಿ ವಿಶೇಷತೆಗಳು
- Lifestyle
ವಾರ ಭವಿಷ್ಯ ಜ.22-ಜ.28: ಈ ವಾರ ಯಾವ ರಾಶಿಯವರಿಗೆ ಅದೃಷ್ಟ, ಯಾರು ಸ್ವಲ್ಪ ಜಾಗ್ರತೆವಹಿಸಬೇಕು ನೋಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ದೂರದರ್ಶನ'ದಲ್ಲಿ ಕ್ಲಾಸ್ ಅಂಡ್ ಮಾಸ್ ಟೀಸರ್: ಪೃಥ್ವಿ ಅಂಬರ್ ಹೊಸ ಖಬರ್!
'ದೂರದರ್ಶನ' ಈ ಪದ ಎಲ್ಲರಿಗೂ ಚಿರಪರಿಚಿತ. 80 ಹಾಗೂ 90ರ ದಶಕದ ಪೀಳಿಗೆ 'ದೂರದರ್ಶನ' ಒಂದು ಭಾವನೆ ಇದ್ದಂತೆ. ಈ ಹೆಸರು ಕೇಳಿದ ಕೂಡಲೇ ಬಹಳಷ್ಟು ಮಂದಿಗೆ ನೆನಪಾಗೋದು ಟಿವಿ. ಈಗ ಇದೇ ಹೆಸರನ್ನಿಟ್ಟುಕೊಂಡ ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ.
'ದೂರದರ್ಶನ' ಈಗಾಗಲೇ ಪೋಸ್ಟರ್‌ಗಳಿಂದಲೇ ಗಮನ ಸೆಳೆಯುತ್ತಿದೆ. ಕನ್ನಡ ಚಿತ್ರರಂಗದ ಸೂಪರ್ ಹಿಟ್ ಸಿನಿಮಾ 'ದಿಯಾ' ಹೀರೊ ಪೃಥ್ವಿ ಅಂಬಾರ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರೆ. ಈಗಾಗಲೇ ಪೃಥ್ವಿಯ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಇದೀಗ ಟೀಸರ್ ಅನ್ನೂ ರಿಲೀಸ್ ಮಾಡಲಾಗಿದೆ.
80 ಹಾಗೂ 90 ದಶಕ ಪೀಳಿಗೆಗೆ 'ದೂರದರ್ಶನ' ಅಂದರೇನೆ ವಿಸ್ಮಯ. ಅವರಿಗೆ ಗೊತ್ತಿಲ್ಲದಂತೆ ಒಂದು ನಂಟು ಬೆಳೆದಿರುತ್ತೆ. ಈಗಿನ ಪೀಳಿಗೆಗೆ ಇದು ಕಾಮನ್. ಗ್ರಾಮೀಣ ಪ್ರದೇಶದವರಿಗೂ 'ದೂರದರ್ಶನ' ಅನ್ನೋದು ಈಗ ಚಿರಪರಿಚಿತ.
ಆದರೆ 80ರ ದಶಕದಲ್ಲಿ ಜೀವಿಸಿದವರಿಗೆ ದೂರದರ್ಶನದ ಜೊತೆಗೆ ಒಂದು ನಂಟು ಬೆಳೆದುಕೊಂಡಿರುತ್ತೆ. ಇಂತಹ ವಿಶೇಷ ಅನುಭವವನ್ನು ತೆರೆಮೇಲೆ ತೋರಿಸುವುದಕ್ಕೆ ಈ ತಂಡ ಮುಂದಾಗಿದೆ. ಟೈಟಲ್ ಮೂಲಕವೇ ಕನೆಕ್ಟ್ ಆಗಿರೋ ಈ ಸಿನಿಮಾ ಥಿಯೇಟರ್‌ಗಳಲ್ಲಿ ಮೋಡಿ ಮಾಡೋಕೆ ರೆಡಿಯಾಗಿದೆ. ಈಗಾಗಲೇ ಹಾಡುಗಳ ಮೂಲಕವೂ 'ದೂರದರ್ಶನ' ಸಿನಿಮಾ ಮೋಡಿ ಮಾಡಿದ್ದು, ಟೀಸರ್ ಕೂಡ ಕಿಕ್ ಕೊಡುತ್ತಿದೆ.
ಪ್ಯಾನ್ ಇಂಡಿಯಾ ಸಿನಿಮಾಗಳ ಭರಾಟೆಯಲ್ಲಿ ಹಳ್ಳಿ ಸೊಗಡಿನ ಸಿನಿಮಾವೊಂದು ಗಮನ ಸೆಳೆಯುತ್ತಿದೆ. ಗ್ರಾಮೀಣ ಪ್ರದೇಶದ ಕಥೆಗಳು ಕಡಿಮೆಯಾಗುತ್ತಿದೆ ಅನ್ನುವಾಗಲೇ ಪಕ್ಕಾ ಹಳ್ಳಿ ಸೊಗಡಿನ, ಅದರಲ್ಲೂ 80, 90 ದಶಕದ ಕಥೆಯನ್ನು ಒಳಗೊಂಡ ಸಿನಿಮಾ 'ದೂರದರ್ಶನ' ಬಿಡುಗಡೆಗೆ ಸಜ್ಜಾಗಿದೆ. ಹಾಗಂತ ಇದು ಕ್ಲಾಸ್ ಸಿನಿಮಾ ಅಷ್ಟೇ ಅಲ್ಲ. ಮಾಸ್ ಸಿನಿಮಾ ಇಷ್ಟ ಪಡೋರಿಗೂ ಇದು ಇಷ್ಟ ಆಗುತ್ತೆ.

'ದೂರದರ್ಶನ' ಸಿನಿಮಾವನ್ನು ಸುಕೇಶ್ ಶೆಟ್ಟಿ ನಿರ್ದೇಶಿಸಿದ್ದಾರೆ. ಇದು ಅವರಿಗೆ ಚೊಚ್ಚಲ ಸಿನಿಮಾ. ಹಳ್ಳಿಯೊಂದಕ್ಕೆ ಟಿವಿಯ ಎಂಟ್ರಿ ಕೊಡುತ್ತೆ. ಅಲ್ಲಿಂದ ಆ ಹಳ್ಳಿಯಲ್ಲಿ ಏನೆಲ್ಲಾ ಬದಲಾವಣೆಯಾಗುತ್ತೆ ಅನ್ನೋದೇ ಸಿನಿಮಾದ ಕಥೆ. ಕಥೆಯಲ್ಲಿ ಗಂಭೀರತೆ ಜೊತೆ ಜೊತೆಗೆ ಹಾಸ್ಯ ಕೂಡ ಒಳಗೊಂಡಿದೆ. ಈ ಸಿನಿಮಾದಲ್ಲಿ 'ದಿಯಾ' ಹೀರೊ ಪೃಥ್ವಿ ಅಂಬರ್ ನಾಯಕನಾಗಿದ್ದರೆ, ಅಯಾನ ನಾಯಕಿ.
ಉಗ್ರಂ ಮಂಜು, ಸುಂದರ್ ವೀಣಾ, ಹರಿಣಿ, ದೀಪಕ್ ರೈ ಪಾಣಾಜೆ, ರಘು ರಮಣಕೊಪ್ಪ, ಹುಲಿ ಕಾರ್ತಿಕ್, ಸೂರಜ್ ಮಂಗಳೂರು, ಸೂರ್ಯ ಕುಂದಾಪುರ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಕೊನೆಯ ಹಂತದ ಕೆಲಸ ಮುಗಿದರೆ, ಸಿನಿಮಾ ಥಿಯೇಟರ್‌ಗೆ ಲಗ್ಗೆ ಇಡಲಿದೆ. ವಾಸುಕಿ ವೈಭವ್ ಸಂಗೀತ ನೀಡಿದ್ದಾರೆ.