For Quick Alerts
  ALLOW NOTIFICATIONS  
  For Daily Alerts

  'ಲವ್‌ ಮಾಕ್ಟೇಲ್ 2' ಬಳಿಕ ಮಿಲನ ನಾಗರಾಜ್ ಹೊಸ ಸಿನಿಮಾ ರಿಲೀಸ್‌ಗೆ ರೆಡಿ!

  |

  'ದಿಯಾ' ಖ್ಯಾತಿಯ ಪೃಥ್ವಿ ಅಂಬರ್ ಹಾಗೂ 'ಲವ್ ಮಾಕ್ಟೇಲ್' ಖ್ಯಾತಿಯ ಮಿಲನ ನಾಗರಾಜ್ ಇಬ್ಬರ ಹೊಸ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಕೇವಲ ಫೋಟೊಗಳಿಂದಲೇ ಕುತೂಹಲ ಕೆರಳಿಸಿದ್ದ ಈ ಸಿನಿಮಾ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಿದೆ.

  ಪೃಥ್ವಿ ಅಂಬರ್ ಹಾಗೂ ಮಿಲನ ನಾಗರಾಜ್ ಇದೇ ಮೊದಲ ಬಾರಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಅಂದ್ಹಾಗೆ ಈ ಜೋಡಿಯ ಮೊದಲ ಸಿನಿಮಾ 'F0R REGN' (ಫಾರ್ ರಿಜಿಸ್ಟರೇಷನ್) ಸಿನಿಮಾ 2023, ಫೆಬ್ರವರಿ 10ರಂದು ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ.

  ಜೇನುಗೂಡು: ದಿಯಾ ಕುಡಿದು ರಂಪಾಟ? ಗಿರಿಜಮ್ಮ ಬಂದ್ಮೇಲೆ ನಡುಕೋಟೆಯಲ್ಲಿ ಏನಾಗ್ತಿದೆ? ಜೇನುಗೂಡು: ದಿಯಾ ಕುಡಿದು ರಂಪಾಟ? ಗಿರಿಜಮ್ಮ ಬಂದ್ಮೇಲೆ ನಡುಕೋಟೆಯಲ್ಲಿ ಏನಾಗ್ತಿದೆ?

  'F0R REGN' ಸಿನಿಮಾವನ್ನು ನವೀನ್ ರಾವ್ ಎಂಬುವರು ನಿರ್ಮಾಣ ಮಾಡಿದ್ದಾರೆ. ನವೀನ್ ದ್ವಾರಕನಾಥ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಕನ್ನಡ ರಾಜ್ಯೋತ್ಸವದ ವಿಶೇಷ ದಿನದಂದು ಸಿನಿಮಾದ ಫಸ್ಟ್‌ ಲುಕ್ ಹಾಗೂ ರಿಲೀಸ್ ಡೇಟ್ ಅನ್ನು ಸಿನಿಮಾ ತಂಡ ಅನೌನ್ಸ್ ಮಾಡಿದೆ.

   ಪ್ರೀತಿಗೂ ರಿಜಿಸ್ಟ್ರೇಷನ್ ಕಡ್ಡಾಯವಾದರೆ ಹೇಗೆ?

  ಪ್ರೀತಿಗೂ ರಿಜಿಸ್ಟ್ರೇಷನ್ ಕಡ್ಡಾಯವಾದರೆ ಹೇಗೆ?

  'ದಿಯಾ' ಸಿನಿಮಾ ಬಳಿಕ ಪೃಥ್ವಿ ಅಂಬರ್ ತುಳು ಸಿನಿಮಾದಲ್ಲಿ ಬ್ಯುಸಿಯಾಗಿದ್ದರು. ಈ ವೇಳೆ ನಿರ್ದೇಶಕ ನವೀನ್ ದ್ವಾರಕನಾಥ್ ಮಂಗಳೂರಿಗೆ ಹೋಗಿ ಕಥೆ ಹೇಳಿದ್ದರು. ಸದ್ಯ ಪೃಥ್ವಿ ಅಂಬರ್ ಕಥೆಯ ಚಿಕ್ಕದೊಂದು ಎಳೆಯನ್ನು ಬಿಚ್ಚಿಟ್ಟಿದ್ದಾರೆ. "ಮಂಗಳೂರಿನಲ್ಲಿ ನಿರ್ದೇಶಕರು ಈ ಚಿತ್ರದ ಕಥೆ ಹೇಳಿದರು. ಕಥೆ ಇಷ್ಟವಾಯಿತು. ಎಲ್ಲದ್ದಕ್ಕೂ ರಿಜಿಸ್ಟ್ರೇಷನ್ ಕಡ್ಡಾಯ. ಪ್ರೀತಿಗೂ ರಿಜಿಸ್ಟ್ರೇಷನ್ ಕಡ್ಡಾಯವಾದರೆ ಹೇಗೆ ಎಂಬುದನ್ನು ತೋರಿಸಿದ್ದೇವೆ." ಎನ್ನುತ್ತಾರೆ ನಾಯಕ ಪೃಥ್ವಿ ಅಂಬರ್.

  ಮಿಲನಾಗೆ ಫೆಬ್ರವರಿ ಲಕ್ಕಿ ಅಂತೆ

  ಮಿಲನಾಗೆ ಫೆಬ್ರವರಿ ಲಕ್ಕಿ ಅಂತೆ

  ಮಿಲನ ನಾಗರಾಜ್‌ಗೆ ಫೆಬ್ರವರಿ ತಿಂಗಳು ಲಕ್ಕಿ ಅಂತೆ. ಸಕ್ಸಸ್ ಕೊಟ್ಟ 'ಲವ್ ಮಾಕ್ಟೇಲ್' ಸಿನಿಮಾ ಕೂಡ ಫೆಬ್ರವರಿಯಂದೇ ರಿಲೀಸ್ ಆಗಿತ್ತು. ಈಗ 'F0R REGN' ಕೂಡ ಫೆಬ್ರವರಿ ತಿಂಗಳಲ್ಲಿಯೇ ರಿಲೀಸ ಆಗುತ್ತಿದೆ. ಹೀಗಾಗಿ ಸಿನಿಮಾ ಗೆದ್ದೇ ಗೆಲ್ಲುತ್ತೆ ಅನ್ನೋ ನಂಬಿಕೆಯಲ್ಲಿದ್ದಾರೆ ಮಿಲನಾ ನಾಗರಾಜ್. "ಫೆಬ್ರವರಿ ತಿಂಗಳು ನನಗೆ ಲಕ್ಕಿ. ಈ ಚಿತ್ರ ಕೂಡ ಅದೇ ತಿಂಗಳಲ್ಲಿ ತೆರೆಗೆ ಬರುತ್ತಿರುವುದು ಮತ್ತಷ್ಟು ಖುಷಿಯಾಗಿದೆ." ಎಂದಿದ್ದಾರೆ ಮಿಲನ ನಾಗರಾಜ್.

  ಪೃಥ್ವಿ-ಮಿಲನಾ ಜೋಡಿ ಸೂಪರ್

  ಪೃಥ್ವಿ-ಮಿಲನಾ ಜೋಡಿ ಸೂಪರ್

  ಪೃಥ್ವಿ ಅಂಬರ್ ಹಾಗೂ ಮಿಲನಾ ನಾಗರಾಜ್ ಕಾಂಬಿನೇಷನ್‌ ಸಿನಿಮಾ ಕುತೂಹಲವನ್ನಂತೂ ಕೆರಳಿಸಿದೆ. ಸಿನಿಮಾ ಟೈಟಲ್‌ ಇಂಟ್ರೆಸ್ಟಿಂಗ್ ಅಂತ ಅನಿಸುತ್ತಿದೆ. ಆದರೆ, ಫಸ್ಟ್ ಲುಕ್ ಹಾಗೂ ಫೋಟೊಗಳು ಬೇರೆದ್ದೇ ಕಥೆಯನ್ನು ಹೇಳುತ್ತಿವೆ. ಅಷ್ಟಕ್ಕೂ ಈ ಸಿನಿಮಾ ಹುಟ್ಟಿದ್ದೇಗೆ ಅನ್ನೋದನ್ನು ನಿರ್ದೇಶಕರು ಸ್ವಾರಸ್ಯಕರವಾಗಿ ಬಿಚ್ಚಿಟ್ಟಿದ್ದಾರೆ. "ನಾನು ಹಾಗೂ ನಿರ್ಮಾಪಕ ನವೀನ್ ರಾವ್ ಸಹಪಾಠಿಗಳು. ಕಿರುಚಿತ್ರಗಳನ್ನು ನಿರ್ದೇಶಿಸುತ್ತಿದ್ದ ನನಗೆ ಒಂದು ದಿನ ನನ್ನ ಸ್ನೇಹಿತ ನವೀನ್ ರಾವ್ ಈ ಚಿತ್ರವನ್ನು ನಿರ್ದೇಶಿಸಲು ಪ್ರೇರೇಪಿಸಿದರು. ಪೃಥ್ವಿ ಅಂಬರ್ ಹಾಗೂ ಮಿಲನಾ ನಾಗರಾಜ್ ನಾಯಕ - ನಾಯಕಿ ಅಂತ ನಿರ್ಧರಿಸಲಾಯಿತು. ಆಗ ಅವರಿಬ್ಬರ " ದಿಯಾ" ಹಾಗೂ "ಲವ್ ಮಾಕ್ಟೇಲ್" ಸಿನಿಮಾಗಳು ಯಶಸ್ವಿಯಾಗಿದ್ದವು. ಹೀಗೆ ಚಿತ್ರ ಆರಂಭವಾಗಿ ಈಗ ಬಿಡುಗಡೆ ಹಂತಕ್ಕೆ ತಲುಪಿದೆ." ಎನ್ನುತ್ತಾರೆ ನಿರ್ದೇಶಕ ನವೀನ್ ದ್ವಾರಕನಾಥ್.

  ದಿಗ್ಗಜರ ಸಮಾಗಮ

  ದಿಗ್ಗಜರ ಸಮಾಗಮ

  ಪೃಥ್ವಿ ಅಂಬರ್, ಮಿಲನಾ ನಾಗರಾಜ್, ರವಿಶಂಕರ್, ಬಾಬು ಹಿರಣ್ಣಯ್ಯ, ಸ್ವಾತಿ, ಸುಧಾ ಬೆಳವಾಡಿ, ತಬಲನಾಣಿ, ರಮೇಶ್ ಭಟ್, ಸಿಹಿಕಹಿ ಚಂದ್ರು ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ನಿರ್ಮಾಪಕರಿಗೂ ಸಿನಿಮಾ ಮೇಲೆ ಸಿಕ್ಕಾಪಟ್ಟೆ ಕಾನ್ಫಿಡೆಂಟ್ ಆಗಿದ್ದಾರೆ. "ನಿರ್ಮಾಪಕ ಹಣ ಒದಗಿಸಿಕೊಡತ್ತಾನೆ.‌ ಆದರೆ ಇಡೀ ತಂಡ ಚಿತ್ರಕ್ಕಾಗಿ ಎಷ್ಟು ಕಷ್ಟ ಪಡುತ್ತದೆ ಎಂದು. ಅವರೆಲ್ಲರ ಶ್ರಮದಿಂದ ಉತ್ತಮ ಚಿತ್ರವೊಂದು ನಿರ್ಮಾಣವಾಗಿದೆ." ಎನ್ನುತ್ತಾರೆ ನಿರ್ಮಾಪಕ ನವೀನ್ ರಾವ್.

  English summary
  Pruthvi Ambar And Milana Nagaraj Movie For Regn Releasing on Feb 10th, Know More.
  Wednesday, November 2, 2022, 21:18
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X