»   » ಇಳೆಯದಳಪತಿ 'ಪುಲಿ' ನೋಡಲು 12 ಗಂಟೆ ತನಕ ಕಾಯಿರಿ

ಇಳೆಯದಳಪತಿ 'ಪುಲಿ' ನೋಡಲು 12 ಗಂಟೆ ತನಕ ಕಾಯಿರಿ

By: ಸೋನು ಗೌಡ
Subscribe to Filmibeat Kannada

'ಪುಲಿ' ಚಿತ್ರ ನೋಡಲು ಕಾದು ಕುಳಿತಿದ್ದ ವಿಜಯ್ ಅಭಿಮಾನಿಗಳಿಗೆ ಗುರುವಾರ ಬೆಳ್ಳಂಬೆಳಗ್ಗೆ ನಿರಾಸೆಯಾಗಿದೆ. ಇದಕ್ಕೆ ಕಾರಣ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು. ತಮಿಳಿನ ಖ್ಯಾತ ನಟ ವಿಜಯ್ ಅವರ ನಿವಾಸದ ಮೇಲೆ ನಡೆದ ಐಟಿ ದಾಳಿ ಪುಲಿ ಚಿತ್ರದ ಮೇಲೆಯೂ ಪ್ರಭಾವ ಬೀರಿದ್ದು ಇಂದು ವಿಶ್ವದಾದ್ಯಂತ ಬೆಳಗಿನ ಪ್ರದರ್ಶನ ರದ್ದಾಗಿದೆ.['ಪುಲಿ' ವಿಜಯ್, ಸಮಂತಾ ಮನೆ ಮೇಲೆ ಐಟಿ ದಾಳಿ ಏಕೆ?]

ಗುರುವಾರ ಬೆಳಗ್ಗೆ ಸಹ ವಿಜಯ್ ನಿವಾಸದ ಮೇಲೆ ಐಟಿ ದಾಳಿ ನಡೆದಿದೆ ಎಂಬ ಸುದ್ದಿಯೂ ಹಬ್ಬಿದೆ. ಆದ್ದರಿಂದ, ವಿತರಕರು ಆತಂಕಗೊಂಡಿದ್ದು, ಪುಲಿ ಬಿಡುಗಡೆಗೊಂಡಿಲ್ಲ. ಚಿತ್ರ ನೋಡಲು ಕಾದು ಕುಳಿತಿದ್ದ ಅಭಿಮಾನಿಗಳು ಚಿತ್ರ ಮಂದಿರದ ಮೇಲೆ ಕಲ್ಲು ತೂರಾಟ ನಡೆಸಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

Vijay

'ಪುಲಿ' ಚಿತ್ರ ಬಿಡುಗಡೆಯಾಗುವ ಈ ಸಂದರ್ಭದಲ್ಲಿಯೇ ಏಕೆ ನಮ್ಮ ನೆಚ್ಚಿನ ನಾಯಕನನ್ನು ಟಾರ್ಗೆಟ್ ಮಾಡುತ್ತಿದ್ದೀರಿ? ಎಂಬ ಅಭಿಮಾನಿಗಳ ಪ್ರಶ್ನೆಗೆ ಉತ್ತರ ನೀಡುವವರು ಯಾರು?. ತಮಿಳುನಾಡು, ಕರ್ನಾಟಕ ಸೇರಿದಂತೆ ವಿಶ್ವದಾದ್ಯಂತ ಪುಲಿ ಬೆಳಗ್ಗೆಯ ಪ್ರದರ್ಶನ ರದ್ದಾಗಿದೆ.

ನೆಚ್ಚಿನ ನಟನ ಚಿತ್ರ ತೆರೆ ಕಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ಅಭಿಮಾನಿಗಳು ಕೃಷ್ಣಗಿರಿ, ಸೇಲಂ ಜಿಲ್ಲೆಯಲ್ಲಿ ಥಿಯೇಟರ್ ಗಳ ಮೇಲೆ ಕಲ್ಲು ತೂರಾಟ ನಡೆಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸದ್ಯಕ್ಕೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಮಧ್ಯಾಹ್ನ 12 ಗಂಟೆಯ ನಂತರ ಇಂದು ಚಿತ್ರ ಬಿಡುಗಡೆಯಾಗುವ ಬಗ್ಗೆ ಅಂತಿಮ ನಿರ್ಧಾರ ಪ್ರಕಟಗೊಳ್ಳಲಿದೆ. ['ಪುಲಿ' ಏಕೆ ನೋಡಬೇಕು, ಇಲ್ಲಿದೆ ಟಾಪ್ 10 ಕಾರಣಗಳು]

vijay

ಈ ನಡುವೆ ಟ್ವೀಟ್ ಮಾಡಿರುವ ತಮಿಳು ನಟ ಶರತ್ ಕುಮಾರ್ ಅವರು ಆಂಧ್ರಪ್ರದೇಶ ಹೊರತುಪಡಿಸಿ ಉಳಿದ ಕಡೆ ಚಿತ್ರ ಬಿಡುಗಡೆಯಾಗಲಿದೆ ಎಂದು ಹೇಳಿದ್ದು, ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ.

ಬುಧವಾರ ನಟ ವಿಜಯ್ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಗುರುವಾರವೂ ದಾಳಿ ನಡೆದಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ನಿರ್ದೇಶಕ ಚೆಂಬುದೇವನ್ ಅವರು ಆಕ್ಷನ್-ಕಟ್ ಹೇಳಿರುವ 'ಪುಲಿ' ಚಿತ್ರವನ್ನು ನೋಡಲು ಕಾತರರಾಗಿರುವ ಅಭಿಮಾನಿಗಳು ಮಧ್ಯಾಹ್ನ 12 ಗಂಟೆಯವರೆಗೂ ಕಾಯಬೇಕಾಗಿರುವುದು ಅನಿವಾರ್ಯ....

English summary
Income tax officials are conducting raids at Kollywood star Vijay's residence again Thursday. And Early Morning shows cancelled all over the world, Vijay to clear dues soon. Vijay fans are asking Why are the officials targeting their Hero Vijay.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada